ಟಾಟಾ ಮೋಟಾರ್ಸ್ ವಾಹನಗಳ ಮಾರಾಟದಲ್ಲಿ ಕುಸಿತ
ವಾಹನ ಖರೀದಿ ಮೇಲೆ ಆಫರ್ ನೀಡಿದರೂ ಮಾರುಕಟ್ಟೆಗೆ ಬರದ ಗ್ರಾಹಕರು
Team Udayavani, Nov 4, 2019, 3:20 PM IST
ಹೊಸದಿಲ್ಲಿ : ಆಫರ್ಕೊಟ್ಟು ಮಾರಾಟ ಚಟುವಟಿಕೆಯನ್ನು ಹೆಚ್ಚಿಸಬೇಕು ಎಂದು ಅಂದುಕೊಂಡಿದ್ದ ಕೆಲ ಹೆಸರಾಂತ ಕಂಪನಿಗಳ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಸದ್ಯ ಆಟೋಮೊಬೈಲ್ ವಲಯದಲ್ಲಿ ಏರಿಳಿತದ ಆಟ ನಡೆಯುತ್ತಿದ್ದು, ಕುಸಿತದ ತಾಪ ಟಾಟಾ ಮೋಟಾರ್ಸ್ನತ್ತ ತಿರುಗಿದೆ.
ಕುಸಿಯುತ್ತಿದೆ ಟಾಟಾ ಮೋಟಾರ್ಸ್ ಮಾರುಕಟ್ಟೆ
ಅಕ್ಟೋಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ವಾಹನಗಳ ಮಾರಾಟ ಶೇ 33.58ರಷ್ಟು ಕುಸಿದಿದ್ದು, 41,354 ಯೂನಿಟ್ಗಳು ಮಾರಾಟ ಆಗಿವೆ ಎಂದು ಕಂಪನಿ ತಿಳಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿ 62,264 ಯೂನಿಟ್ಗಳನ್ನು ಮಾರಾಟ ಮಾಡಿತ್ತು. ಆದರೆ ಈ ಬಾರಿ ದಸರಾ-ದೀಪಾವಳಿ ಆಫರ್ ನೀಡಿದರೂ ಗ್ರಾಹಕರು ಮಾತ್ರ ಮಾರುಕಟ್ಟೆಯಿಂದ ದೂರ ಉಳಿದಿದ್ದಾರೆ ಎಂಬುದು ಕಂಪನಿ ಹಂಚಿಕೊಂಡ ಅಂಕಿ-ಅಂಶದಿಂದ ತಿಳಿಯುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿಯೂ ಇಳಿಕೆ
ಇನ್ನೂ ದೇಶಿಯ ವಾಹನಗಳ ಮಾರುಕಟ್ಟೆಯಲ್ಲಿ ಶೇ.32ರಷ್ಟು ಕುಸಿತ ಕಂಡು ಬಂದಿದ್ದು. 39,152 ಯೂನಿಟ್ಗಳು ಮಾತ್ರ ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್ ಅಲ್ಲಿ 57,710 ವಾಹನಗಳು ಮಾರಾಟವಾಗಿದ್ದು, ಸುಮಾರು 13,169 ಯುನಿಟ್ಗಳಷ್ಟು ಪ್ರಯಾಣಿಕರ ವಾಹನಗಳು ಸೇಲ್ ಆಗಿವೆ.
ವಾಣಿಜ್ಯ ವಾಹನಗಳ ಕಥೆ ಏನು
ವಾಣಿಜ್ಯ ವಾಹನಗಳ ಮಾರಾಟದಲ್ಲೂ ಶೇ.34 ರಷ್ಟು ಕುಸಿದಿದ್ದು, 25,983 ಯೂನಿಟ್ಗಳು ಖರೀದಿ ಆಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 39,420 ಯೂನಿಟ್ಗಳು ಮಾರಾಟ ಆಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ