ದುಸ್ಥಿತಿಗೆ ಬಂದು ತಲುಪಿದ ಆಟೊಮೊಬೈಲ್ ಕ್ಷೇತ್ರ

Team Udayavani, Aug 14, 2019, 5:13 AM IST

ನವದೆಹಲಿ: ಕಳೆದ 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ಆಟೋಮೊಬೈಲ್ ಕ್ಷೇತ್ರವು ದುಸ್ಥಿತಿಗೆ ತಲುಪಿದ್ದು, ಕಳೆದ ಮೂರು ತಿಂಗಳಲ್ಲಿ ಈ ಕ್ಷೇತ್ರದ ಸುಮಾರು 15,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಭಾರ ತೀಯ ಆಟೊಮೊಬೈಲ್ ಕಂಪನಿಗಳ ಸೊಸೈಟಿ (ಎಸ್‌ಐಎಎಂ) ತಿಳಿಸಿದೆ.

ಕಳೆದ ತಿಂಗಳು ಪ್ರಯಾಣಿಕರ ವಾಹನ (ಪಿ.ವಿ.) ಹಾಗೂ ದ್ವಿಚಕ್ರ ವಾಹನಗಳು ದೇಶಾದ್ಯಂತ 18,25,148 ಮಾತ್ರ ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 22,45,223 ವಾಹನಗಳು ಮಾರಾಟವಾಗಿದ್ದವು. ಈ ಹಿಂದೆ, 2000ರ ಡಿಸೆಂಬರ್‌ನಲ್ಲಿ ವಾಹನಗಳ ಮಾರಾಟ ಶೇ. 21.81ರಷ್ಟು ಇಳಿಮುಖವಾಗಿ ಆಟೊಮೊಬೈಲ್ ರಂಗ ಶೋಚನೀಯ ಸ್ಥಿತಿಗೆ ತಲುಪಿತ್ತು. ಇನ್ನು, ಕಾರು ಇನ್ನಿತರ ಪ್ರಯಾಣಿಕರ ಸಾಗಾಣಿಕೆ ವಾಹನಗಳ ಮಾರಾಟ ಶೇ. 30ರಷ್ಟು ಇಳಿಮುಖವಾಗಿದೆ. ಕಳೆದ ಜುಲೈನಲ್ಲಿ 2.90 ಲಕ್ಷ ವಾಹನಗಳು ಮಾರಾಟವಾಗಿದ್ದರೆ, ಈ ವರ್ಷ ಜುಲೈನಲ್ಲಿ 2 ಲಕ್ಷ ವಾಹನ ಮಾತ್ರ ಮಾರಾಟವಾಗಿವೆ. 2000ನೇ ಡಿಸೆಂಬರ್‌ನಲ್ಲಿ ಶೇ. 35ರಷ್ಟು ಮಾರಾಟ ಇಳಿಮುಖ ವಾಗಿತ್ತು ಎಂದು ಎಸ್‌ಐಎಎಂ ವಿವರಿಸಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ತುಮಕೂರು: ಇಂದಿನ ಜಾತಿ ವ್ಯವಸ್ಥೆ ಭಾರತವನ್ನು ದುರ್ಬಲವನ್ನಾಗಿಸುತ್ತಿದೆ. ಈ ವ್ಯವಸ್ಥೆಯ ವಿರುದ್ಧ ಅಂದು ಬಸವಣ್ಣನವರು ಸಾಮಾಜಿಕ ಆಂದೋಲನವನ್ನೇ ಮಾಡಿದರು. ಇಂದು...

  • ಜಾಗತಿಕ ಮಟ್ಟದಲ್ಲಿ ಜನ ಸಾರಿಗೆ ಸೇವೆಗೆ ಮಾಡುವ ವೆಚ್ಚಕ್ಕೆ ಹೋಲಿಸಿದರೆ ಬೆಂಗಳೂರಿಗರು ದುಪ್ಪಟ್ಟು ಹಣ ತೆರುತ್ತಿದ್ದಾರೆ ಎಂದು ಸೆಂಟರ್‌ ಫಾರ್‌ ಸೈನ್ಸ್‌ ಆಂಡ್‌...

  • ಬೆಂಗಳೂರು: "ಪಕ್ಷದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ'! ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ದಿನೇಶ್‌ ಗುಂಡೂರಾವ್‌ ಅವರಿಗೆ...

  • ಬೆಂಗಳೂರು: ಕಪ್‌ ಗಳಿಸಿ, ಕಸ ಅಳಿಸಿ!, ಕಸದ ಪ್ರಮಾಣ ಕಡಿಮೆ ಮಾಡಿ, ರನ್‌ ರೇಟ್‌ ಅಲ್ಲ, ಕಸ ಇಲ್ಲದಿರುವ ಸಿಟಿ ಸೂಪರ್‌ ಸಿಟಿ! ಇವು ಭಾನುವಾರ ಬಿಬಿಎಂಪಿಯ ವೆಬ್‌ಸೈಟ್‌...

  • ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ನಡೆದ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 58,10,493 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಶೇ. 91.16 ರಷ್ಟು ಗುರಿ ಸಾಧನೆಯಾಗಿದೆ....