ಮಾರುಕಟ್ಟೆಗೆ ಲಗ್ಗೆಯಿಟ್ಟ ಕಿಯಾ-ಸೆಲ್ಟೊಸ್‌ ಕಾರು

Team Udayavani, Aug 24, 2019, 3:04 AM IST

ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನ, ಹೊಸ ವಿನ್ಯಾಸ ಮತ್ತು ಆಕರ್ಷಕ ಒಳಾಂಗಣ ವಿನ್ಯಾಸ ಹೊಂದಿರುವ ಕಿಯಾ ಮೋಟರ್ ಸಂಸ್ಥೆಯ ಕಿಯಾ-ಸೆಲ್ಟೊಸ್‌ ಕಾರುಗಳನ್ನು ಶುಕ್ರವಾರ ಮಾರುಕಟ್ಟೆಗೆ ಪರಿಚಯಿಸಲಾಯಿತು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಯಾ ಮೋಟಾರ್ (ಭಾರತ)ನ ವ್ಯವಸ್ಥಾಪಕ ನಿರ್ದೇಶಕ ಕೂಖ್ಯೂಂ ಶಿಮ್‌ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಮನೋಹರ್‌ ಭಟ್‌ ಮೊದಲಾದ ಅಧಿಕಾರಿಗಳು ಕಿಯಾ-ಸೆಲ್ಟೊಸ್‌ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದರು.

ಶಕ್ತಿಶಾಲಿ ಎಂಜಿನ್‌, ಅತ್ಯುತ್ತಮ ಕಾರ್ಯ ಕ್ಷಮತೆ, ಅತ್ಯಾಕರ್ಷಕ ವಿನ್ಯಾಸ ಹಾಗೂ ಗುಣ ಮಟ್ಟದ ಕಿಯಾ-ಸೆಲ್ಟೊಸ್‌ ಕಾರುಗಳು ಪೆಟ್ರೋಲ್‌, ಟರ್ಬೋ-ಪೆಟ್ರೋಲ್‌, ಡೀಸೆಲ್‌ ವಿಭಾಗದಲ್ಲಿ ಲಭ್ಯವಿದೆ. ಕಿಯೊ-ಸೆಲ್ಟೊಸ್‌ ನಾರ್ಮಲ್‌, ಇಕೋ ಹಾಗೂ ನ್ಪೋರ್ಟ್‌ ಹೀಗೆ ಮೂರು ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಜಿಟಿ ಲೈನ್‌ ಹಾಗೂ ಟೆಕ್‌ ಲೈನ್‌ ಎಂಬ ಎರಡು ವಿನ್ಯಾಸದಲ್ಲಿ ಕಾರುಗಳು ಮಾರುಕಟ್ಟೆಗೆ ಬಂದಿದೆ. ಬಿಳಿ, ಸ್ಟೀಲ್‌ ಸಿಲ್ವರ್‌, ಗ್ರಾವಿಟಿ ಗ್ರೇ, ಇಂಟೆ ಞಲಿಜೆನ್ಸಿ ಬ್ಲೂ ಸಹಿತವಾಗಿ ಎಂಟು ಬಣ್ಣಗಳಲ್ಲಿ ಕಾರು ಗ್ರಾಹಕರಿಗೆ ಸಿದ್ಧವಾಗಿದೆ. ಹಾಗೆಯೇ 5 ವಿಶ್ರಿತ ಬಣ್ಣಗಳಲ್ಲೂ ಸಿಗಲಿದೆ.

ಎಲ್‌ಇಡಿ ಹೆಡ್‌ಲೈಟ್‌, ಎಲೆಕ್ಟ್ರಿಕ್‌ ಸನ್‌ಫ್ರೂಫ್ ಒವರ್‌ ಹೆಡ್‌ ಜತೆಗೆ ಏರೀ ಕ್ಯಾಬಿನ್‌ ಹೊಂದಿದೆ. ಕಾರಿನ ಒಳ ವಿನ್ಯಾಸ ಕೂಡ ಅತ್ಯಾ ಕರ್ಷವಾಗಿದ್ದು, ಅಗಲವಾದ ಸ್ಥಳವಕಾಶವಿದ್ದು, ಡ್ರೈವರ್‌ ಮತ್ತು ಮುಂಭಾಗದ ಸೀಟುಗಳು ಸುಲಭವಾಗಿ ಅಡ್ಜೆಸ್ಟ್‌ ಮಾಡಿಕೊಳ್ಳಬಹು ದಾಗಿದೆ. ಈ ಕಾರಿನ ಇನ್ನೊಂದು ವಿಶೇಷತೆ ಯೆಂದರೆ, ಕಾರಿನ ಒಳಗೆ ಗಾಳಿ ಶುದ್ಧೀಕರಿಸುವ ವ್ಯವಸ್ಥೆ ( ಏರ್‌ ಪುರೀಪೈಯರ್‌)ಇದೆ.

ಯುವಿಒ ಮೊಬೈಲ್‌ ಆ್ಯಪ್‌ ಮೂಲಕ 37 ವಿಶೇಷ ಆಯ್ಕೆಗಳನ್ನು ಪಡೆಯಬಹುದಾಗಿದೆ. ಅಲ್ಲದೆ, ಇದು ಮೂರು ವರ್ಷಗಳವರೆಗೂ ಉಚಿತವಾಗಿ ಸಿಗಲಿದೆ. ಭದ್ರತೆ, ಸುರಕ್ಷತೆ ಹಾಗೂ ಜಾಗರೂಕತೆಗೆ ಇದು ಸಹಕಾರಿ ಯಾಗಲಿದೆ. ಕಾರಿನ ಒಳಗೆ 10.285 ಎಚ್‌ಡಿ ಟಚ್‌ ಸ್ಕ್ರೀನ್‌ ಇದೆ. ಪಾರ್ಕಿಂಗ್‌ ಮಾಡಲು ಅನುಕೂಲವಾಗುವಂತೆ ಬಿವಿಎಂ ಒಳಗೊಂಡಿರುವ ಕ್ಯಾಮರ ಅಳವಡಿಸಲಾಗಿದೆ.

ಕಿಯಾ ಸೊಲ್ಟೆಸ್‌ ಟೆಕ್‌ಲೈನ್‌ ಮಾದರಿಯ ಡೀಸೆಲ್‌ ಕಾರುಗಳು 9.99 ಲಕ್ಷ ರೂ.ಗಳಿಂದ 13.79 ಲಕ್ಷದ ವರೆಗೂ, ಪೆಟ್ರೋಲ್‌ ಕಾರುಗಳು 9.69 ಲಕ್ಷ ರೂ.ಗಳಿಂದ 13.79 ಲಕ್ಷ ರೂ. ಎಕ್ಸ್‌ ಶೋರೂಂ ದರ ಹೊಂದಿದೆ. ಹಾಗೆಯೇ ಜಿಟಿ ಲೈನ್‌ ಮಾದರಿಯ ಪೆಟ್ರೋಲ್‌ ಕಾರುಗಳು 13.49 ಲಕ್ಷ ರೂ.ಗಳಿಂದ 15.99 ಲಕ್ಷ ರೂ. ಎಕ್ಸ್‌ ಶೋ ರೂಂ ದರ ಹೊಂದಿದೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ವ್ಯವಸ್ಥೆ ಇದ್ದು, ಈಗಾಗಲೇ 32035 ಕಾರು ಬುಕ್‌ ಆಗಿದೆ.

ಕಾರಿನಲ್ಲಿ ಗ್ರಾಹಕರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆರು ಏರ್‌ ಬ್ಯಾಗ್‌ಗಳು ಇದರಲ್ಲಿದೆ. ಚಾಲಕರಿಗೆ ಅಗತ್ಯವಿರುವ ಎಲ್ಲ ರೀತಿಯ ಸುರಕ್ಷತಾ ಸಾಧನಗಳನ್ನು ಅಳವಡಿಸಲಾಗಿದೆ. ನಾಲ್ಕು ಚಕ್ರಕ್ಕೂ ಡಿಸ್ಕ್ ಬ್ರೇಕ್‌ ಸೇರಿ ಗ್ರಾಹಕರಿಗೆ ಬೇಕಾದ ಸಂಪೂರ್ಣ ಸುರಕ್ಷತೆ ಕಿಯಾ-ಸೆಲ್ಟೊಸ್‌ನಲ್ಲಿದೆ.
-ಮನೋಹರ್‌ ಭಟ್‌, ಉಪಾಧ್ಯಕ್ಷ, ಮಾರುಕಟ್ಟೆ ವಿಭಾಗ

ಸಂಸ್ಥೆಯ ಕಾರು ತಯಾರಿಕ ಘಟಕವು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿದ್ದು, ವರ್ಷಕ್ಕೆ 3 ಲಕ್ಷ ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದೇವೆ. ಗ್ರಾಹಕರಿಗೆ ಯಾವುದೇ ರೀತಿಯ ವಿಳಂಬ ಇಲ್ಲದೆ ಸೂಕ್ತ ಸಮಯದಲ್ಲಿ ಕಾರು ಒದಗಿಸುತ್ತೇವೆ.
-ಕೂಖ್ಯೂಂ ಶಿಮ್‌, ವ್ಯವಸ್ಥಾಪಕ ನಿರ್ದೇಶಕ, ಕಿಯಾ ಮೋಟಾರ್ (ಭಾರತ)

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಆಧುನಿಕ ಸ್ಪರ್ಶ ಕೊಟ್ಟು, ಅವುಗಳನ್ನು ಓದುಗ ಸ್ನೇಹಿ ಮತ್ತು ಜನಸ್ನೇಹಿ ಜ್ಞಾನ ಕೇಂದ್ರಗಳನ್ನಾಗಿ ಮಾಡಲು ಗ್ರಾಮೀಣಾಭಿವೃದ್ಧಿ...

  • ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ನಡೆಗೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ....

  • ಧಾರವಾಡ: ವಿದ್ಯಾನಗರಿಯ ವಿದ್ಯಾಕೇಂದ್ರ ಕರ್ನಾಟಕ ಕಲಾ ಕಾಲೇಜಿನ ಮೈದಾನದಲ್ಲೀಗ ಕೆಮ್ಮಣ್ಣಿನ ಕುಸ್ತಿ ಅಖಾಡ ಸಜ್ಜಾಗಿದೆ. ತೊಡೆ ತಟ್ಟುವ ಎದುರಾಳಿಗಳ ಕುಸ್ತಿಯ...

  • ಶಿವರಾತ್ರಿ ಪ್ರಯುಕ್ತ ರಾಜ್ಯದ ಹಲವೆಡೆ ಶುಕ್ರವಾರ ಮುಂಜಾನೆಯಿಂದಲೇ ಶಿವ ದೇಗುಲಗಳಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಪುರಾಣ ಪ್ರಸಿದ್ಧ ಗೋಕರ್ಣ...

  • ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಕೊಪ್ಪ ಮೂಲದ ಅಮೂಲ್ಯಾಳಿಗೆ ನಕ್ಸಲರ ನಂಟಿರುವ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತಂತೆ ಗೃಹ...

ಹೊಸ ಸೇರ್ಪಡೆ