Udayavni Special

ಇಂದು ನಾಗರಪಂಚಮಿ: ವ್ಯಾಪಾರ ವಹಿವಾಟು ಬಿರುಸು

ಅನ್ಯ ಜಿಲ್ಲೆಯ ವ್ಯಾಪಾರಸ್ಥರಿಂದ ಸ್ಥಳೀಯರ ವ್ಯಾಪಾರ ಕುಂಠಿತ ; ಪ್ರಮುಖ ವಸ್ತುಗಳ ಬೆಲೆ ಗಗನಕ್ಕೆ

Team Udayavani, Aug 5, 2019, 5:52 AM IST

FLOWER2

ಉಡುಪಿ: ನಾಗರ ಪಂಚಮಿ ಹಬ್ಬದ ಅಂಗವಾಗಿ ಜಿಲ್ಲೆಯಾದ್ಯಂತ ವ್ಯಾಪಾರ ವಹಿವಾಟು ಬಿರುಸುಗೊಂಡಿದೆ. ಈ ವರ್ಷ ಸರಿಯಾದ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ಹಬ್ಬ ಆಚರಣೆಗೆ ಸಂಬಂಧಪಟ್ಟ ವಸ್ತುಗಳ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ. ನಾಗರ ಪಂಚಮಿಗೆ ಬೇಕಾದ ಎಲ್ಲ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡಿದೆ.

ಹಿಂಗಾರ, ಅರಶಿನ ಎಲೆಗೂ ಬೇಡಿಕೆ
ನಾಗರಪಂಚಮಿಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಹಿಂಗಾರದ ಒಂದು ಹಾಳೆಗೆ 150- 200 ರೂ. ದರವಿದೆ. ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲದ ಕಾರಣ 50ರಿಂದ 70 ರೂ.ನಷ್ಟು ಏರಿಕೆ ಕಂಡಿದೆ. ಸಾಮಾನ್ಯ ದಿನಗಳಲ್ಲಿ ಹಿಂಗಾರದ ದರ 80ರಿಂದ 120ರಷ್ಟಿರುತ್ತದೆ. ಅರಶಿನ ಎಲೆಯ 25ರ ಒಂದು ಕಟ್ಟಿಗೆ ಈ ಬಾರಿ 40 ರೂ.ನಿಂದ 50 ರೂ.ಗೆ ಏರಿಕೆಯಾಗಿದೆ. ಮಳೆ ಕಡಿಮೆಯಾಗಿರುವುದು ಕೂಡ ಇದಕ್ಕೆ ಒಂದು ಕಾರಣವಾಗಿದೆ.

ಕೇದಗೆ ವಿರಳ
ನಾಗದೇವರಿಗೆ ಪ್ರಿಯವಾಗಿರುವ ವಸ್ತುಗಳಲ್ಲಿ ಕೇದಗೆಯೂ ಒಂದು. ಆದರೆ ಉಡುಪಿ ಮಾರುಕಟ್ಟೆಯಲ್ಲಿ ಮಾತ್ರ ವಿರಳವಾಗಿತ್ತು. ಶನಿವಾರ ನಗರದ ಕೆಲವೆಡೆಗಳಲ್ಲಿ ಕೇದಗೆ ಮಾರಾಟ ಇತ್ತಾದರೂ ಸಂಜೆಯ ವೇಳೆಗೆ ಎಲ್ಲವೂ ಖಾಲಿ ಯಾಗಿದ್ದವು.ಲಭ್ಯವಿದ್ದ ಕಡೆಗಳಲ್ಲಿ ಇದರ ದರ ಸುಮಾರು 150ರಷ್ಟಿತ್ತು. ಹಳದಿ ಸೇವಂತಿಗೆ ಕೂಡ ಕುಚ್ಚಿಗೆ
1,500ರಷ್ಟಿದೆ. ಒಂದು ಮಾರು ಸೇವಂತಿಗೆಗೆ 120 ರೂ., ಕೇದಗೆಗೆ 120, ಶಂಕರಪುರ ಮಲ್ಲಿಗೆ 1,050, ಕಾಕಡ 80, ಮಾರಿಗೋಲ್ಡ್‌ 150, ಕನಗೆಳೆ 80, ಗೊಂಡೆ 70, ಕನಕಾಂಬರ 80 ರೂ., ಬಾಳೆಹಣ್ಣು 80ರೂ. ಸಹಿತ ಒಟ್ಟಾರೆ ಪಂಚಮಿಗೆ ಬೆಕಾದ ಪ್ರಮುಖವಾದ ವಸ್ತುಗಳ ಬೆಲೆ ಗಗನಕ್ಕೆ ತಲುಪಿದೆ.

ಸೀಯಾಳ ರಾಶಿ
ರಸ್ತೆಬದಿಯ ಹೂವಿನ ವ್ಯಾಪಾರಸ್ಥರೂ ಹೂವಿನ ಜತೆಗೆ ಸೀಯಾಳವನ್ನೂ ಮಾರಾಟ ಮಾಡುತ್ತಿರುವುದು ಕಂಡುಬಂತು. ಕೆಂದಾಳಿಯ ಎರಡು ಜಾತಿಯ ಸೀಯಾಳಗಳು ಕೇರಳದಿಂದ ಬಂದಿವೆ. ಬಾರಕೂರು ಹಾಗೂ ಕೆಲವು ಸ್ಥಳೀಯ ಸೀಯಾಳಗಳೂ ಮಾರುಕಟ್ಟೆಯಲ್ಲಿವೆ. ಕೆಂದಾಳಿ ಸೀಯಾಳದ ದರ 45ರಿಂದ 50 ರೂ.ಗಳಿದ್ದರೆ, ಸ್ಥಳೀಯ ಸೀಯಾಳಗಳ ದರ 35ರೂ.ಗಳಷ್ಟಿತ್ತು.

ಅನ್ಯ ಜಿಲ್ಲೆಯವರೇ ಅಧಿಕ
ಹಾಸನ, ಚಿಕ್ಕಮಗಳೂರು, ದಾವಣಗೆರೆ ಭಾಗದಿಂದ ಹಲವಾರು ಮಂದಿ ಹೂವಿನ ವ್ಯಾಪಾರಸ್ಥರು ನಗರದೆಲ್ಲೆಡೆ ವ್ಯಾಪಾರ ನಡೆಸುತ್ತಿದ್ದಾರೆ. ಸಹಜವಾಗಿಯೇ ನಗರದ ಹೋಲ್‌ಸೇಲ್‌ ವ್ಯಾಪಾರಿಗಳಿಗೆ ಇದರಿಂದ ಹೊಡೆತ ಬಿದ್ದಿದೆ. ಮಲ್ಲಿಗೆ ಒಂದನ್ನು ಬಿಟ್ಟು ಉಳಿದ ಎಲ್ಲ ಹೂವು ಗಳನ್ನು ಅವರು ಕಡಿಮೆ ಬೆಲೆಗೆ ನಮ್ಮಿಂದ ಖರೀದಿಸಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಸುತ್ತಾರೆ ನಗರದ ಹೋಲ್‌ಸೇಲ್‌ ವ್ಯಾಪಾರಸ್ಥರು. ನಗರದ ಸಿಟಿ ಬಸ್‌ನಿಲ್ದಾಣ, ಸರ್ವೀಸ್‌ ಬಸ್‌ ನಿಲ್ದಾಣ, ನಗರಪಂಚಾಯತ್‌ ಎದುರುಭಾಗದಲ್ಲಿ, ಕೃಷ್ಣಮಠದ ಪರಿಸರ, ಹಳೇ ಡಯಾನ ಸರ್ಕಲ್‌ಬಳಿ, ಮಣಿಪಾಲ ಬಸ್‌ ತಂಗುದಾಣದಲ್ಲಿ ಸಹಿತ ಹಲವಾರು ಕಡೆಗಳಲ್ಲಿ ಅನ್ಯ ಜಿಲ್ಲೆಯ ವ್ಯಾಪಾರಸ್ಥರು ತುಂಬಿಹೋಗಿದ್ದಾರೆ.

ಬೆಳಗ್ಗೆ ಡಲ್‌; ಸಂಜೆ ಫ‌ುಲ್‌ ವ್ಯಾಪಾರ
ಹೆಚ್ಚಿನ ಕಡೆಗಳಲ್ಲಿ ಬೆಳಗ್ಗಿನ ವೇಳೆ ವ್ಯಾಪಾರ ತುಸು ನಿಧಾನಗತಿಯಲ್ಲಿತ್ತು. ಸಂಜೆ ವೇಳೆಗೆ ವ್ಯಾಪಾರ ಬಿರುಸಿನಿಂದ ನಡೆಯುತ್ತಿತ್ತು. ರಜಾದಿನ ಹಾಗೂ ಬೆಳಗ್ಗೆ, ಮಧ್ಯಾಹ್ನದ ವೇಳೆಗೆ ಮಳೆ ಸುರಿದ ಪರಿಣಾಮ ಕೆಲ ಗ್ರಾಹಕರು ಮಾರುಕಟ್ಟೆಗೆ ಆಗಮಿಸಲಿಲ್ಲ. ರಾತ್ರಿ ವೇಳೆಯ ರಶ್‌ ತಪ್ಪಿಸುವ ಸಲುವಾಗಿ ಹೆಚ್ಚಿನವರು ಸಂಜೆಯ ವೇಳೆಗೆ ಮಾರುಕಟ್ಟೆಯತ್ತ ಮುಖಮಾಡುತ್ತಿರುವುದು ಕಂಡುಬಂತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಿಂಗಾಪುರ ಸುಧಾರಿಸಲು ವರ್ಷಗಳೇ ಬೇಕು!

ಸಿಂಗಾಪುರ ಸುಧಾರಿಸಲು ವರ್ಷಗಳೇ ಬೇಕು!

ರೈತರ ಮೇಲೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಈ ಸರ್ಕಾರ ತುದಿಗಾಲಿನ ಮೇಲೆ ನಿಂತಿದೆ: HDK

ರೈತರ ಮೇಲೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಈ ಸರ್ಕಾರ ತುದಿಗಾಲಿನ ಮೇಲೆ ನಿಂತಿದೆ: HDK

ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆ

ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆ

ಕೋವಿಡ್‌ ಅಪಾಯ ಇನ್ನೂ ಜೀವಂತ: WHO

ಕೋವಿಡ್‌ ಅಪಾಯ ಇನ್ನೂ ಜೀವಂತ: WHO

ನದಿ ದಾಟಲು ಹಿಂದೂ- ಕ್ರಿಶ್ಚಿಯನ್ ಸಮುದಾಯಗಳ ಸೌಹಾರ್ದತೆಯ ಸೇತುಬಂಧನ

ನದಿ ದಾಟಲು ಹಿಂದೂ- ಕ್ರಿಶ್ಚಿಯನ್ ಸಮುದಾಯಗಳ ಸೌಹಾರ್ದತೆಯ ಸೇತುಬಂಧನ

00

ಇದು ಎಲ್ಲರ ಬಾಲ್ಯ ಕಂಡ ‘ಅಟ್ಲಾಸ್ ಸೈಕಲ್’ ಪ್ರಾರಂಭವಾದ ರೋಚಕ ಯಶೋಗಾಥೆ..

ವಿಶ್ವಕಪ್ ಸೋಲಿನ ನೋವಿನಿಂದ ಟೀಂ ಇಂಡಿಯಾ ಇನ್ನೂ ಹೊರಬಂದಿಲ್ಲ: ಭರತ್ ಅರುಣ್

ವಿಶ್ವಕಪ್ ಸೋಲಿನ ನೋವಿನಿಂದ ಟೀಂ ಇಂಡಿಯಾ ಇನ್ನೂ ಹೊರಬಂದಿಲ್ಲ: ಭರತ್ ಅರುಣ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾರಣಕಟ್ಟೆ ದೇಗುಲ: ಜೂ.14ರ ಸಂಕ್ರಮಣದಿಂದ ಭಕ್ತರ ಪ್ರವೇಶಕ್ಕೆ ಅನುವು

ಮಾರಣಕಟ್ಟೆ ದೇಗುಲ: ಜೂ.15ರ ಸಂಕ್ರಮಣದಿಂದ ಭಕ್ತರ ಪ್ರವೇಶಕ್ಕೆ ಅನುವು

ಜೂ. 13ರಿಂದ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಮಸೀದಿಗಳಲ್ಲಿ ನಮಾಝ್ ಸದ್ಯಕ್ಕಿಲ್ಲ

ಜೂ. 13ರಿಂದ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಮಸೀದಿಗಳಲ್ಲಿ ನಮಾಝ್ ಸದ್ಯಕ್ಕಿಲ್ಲ

“ದಿನಕ್ಕೆ ಸರಾಸರಿ 100 ಕೋವಿಡ್‌ ಪೀಡಿತರು ಬಿಡುಗಡೆ’

“ದಿನಕ್ಕೆ ಸರಾಸರಿ 100 ಕೋವಿಡ್‌ ಪೀಡಿತರು ಬಿಡುಗಡೆ’

ವಾರದ ಸಂತೆ: ಹೋಲ್‌ಸೇಲ್‌ ಖರೀದಿಗೆ ಅವಕಾಶ

ವಾರದ ಸಂತೆ: ಹೋಲ್‌ಸೇಲ್‌ ಖರೀದಿಗೆ ಅವಕಾಶ

ಎಸ್‌ಡಿಎಂ ಆಯುಷ್‌ ಕ್ವಾಥ ಬಿಡುಗಡೆ; ಪ್ರಾಕೃತಿಕ ರೋಗ ನಿರೋಧಕ ಔಷಧ

ಎಸ್‌ಡಿಎಂ ಆಯುಷ್‌ ಕ್ವಾಥ ಬಿಡುಗಡೆ; ಪ್ರಾಕೃತಿಕ ರೋಗ ನಿರೋಧಕ ಔಷಧ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

07-June-09

ಕೋವಿಡ್ ನಿಂದ ವಿಶ್ವದಲ್ಲಿ ತಲ್ಲಣ

ದರ್ಶನಕ್ಕೆ ಸಿದ್ಧಗೊಳ್ಳುತ್ತಿವೆ ಸಂಗಮದ ದೇಗುಲಗಳು

ದರ್ಶನಕ್ಕೆ ಸಿದ್ಧಗೊಳ್ಳುತ್ತಿವೆ ಸಂಗಮದ ದೇಗುಲಗಳು

ಸಿಂಗಾಪುರ ಸುಧಾರಿಸಲು ವರ್ಷಗಳೇ ಬೇಕು!

ಸಿಂಗಾಪುರ ಸುಧಾರಿಸಲು ವರ್ಷಗಳೇ ಬೇಕು!

ರೈತರ ಮೇಲೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಈ ಸರ್ಕಾರ ತುದಿಗಾಲಿನ ಮೇಲೆ ನಿಂತಿದೆ: HDK

ರೈತರ ಮೇಲೆ ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಈ ಸರ್ಕಾರ ತುದಿಗಾಲಿನ ಮೇಲೆ ನಿಂತಿದೆ: HDK

ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆ

ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.