ಚಂದಾ ಕೊಚ್ಚರ್ 78 ಕೋ. ರೂ.ಆಸ್ತಿ ಜಪ್ತಿ
Team Udayavani, Jan 11, 2020, 1:40 AM IST
ಹೊಸದಿಲ್ಲಿ: ಐಸಿಐಸಿಐ ಮಾಜಿ ಅಧ್ಯಕ್ಷೆ ಚಂದಾ ಕೊಚ್ಚರ್ ಅವರ 78 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇ.ಡಿ (ಜಾರಿ ನಿರ್ದೇಶನಾಲಯ) ಜಪ್ತಿ ಮಾಡಿದೆ. ಅಕ್ರಮ ಹಣ ವರ್ಗಾ ವಣೆ ಪ್ರಕರಣ ಸಂಬಂಧ ಚಂದಾ ಅವರ ಮುಂಬಯಿ ನಿವಾಸ ಸೇರಿದಂತೆ ಮತ್ತಿತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ವೀಡಿಯೋಕಾನ್ ಗ್ರೂಪ್ಗೆ ಸಾಲ ವಿತರಣೆ ಕುರಿತ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಚಂದಾ, ಅವರ ಪತಿ ದೀಪಕ್ ಕೊಚ್ಚರ್ ಮತ್ತಿತರರ ವಿರುದ್ಧ ಇ.ಡಿ. ಎಫ್ಐಆರ್ ದಾಖಲಿಸಿ, ವಿಚಾರಣೆ ನಡೆಸುತ್ತಿದೆ.