ಕಳೆದ ಚಳಿಗಾಲಕ್ಕಿಂತ ಈ ವರ್ಷ ತರಕಾರಿ ಬೆಲೆ ಶೇ.50ರಷ್ಟು ಏರಿಕೆ

Team Udayavani, Dec 15, 2019, 4:49 PM IST

ಹೊಸದಿಲ್ಲಿ: ಹಣ್ಣು, ತರಕಾರಿಗಳ ಸೀಸನ್‌ ಆರಂಭವಾದರೂ, ಸಾಕಷ್ಟು ಮಾರುಕಟ್ಟೆಗೆ ಆವಕವಾಗುತ್ತಿಲ್ಲ ಇದರಿಂದ ಈ ಬಾರಿ ತರಕಾರಿ ಬೆಲೆ ಕಳೆದ ವರ್ಷ ಚಳಿಗಾಲಕ್ಕಿಂತಲೂ ಹೆಚ್ಚಾಗಿದೆ. ಶೇ.50ರಷ್ಟು ತರಕಾರಿಗಳ ಬೆಲೆ ಹೆಚ್ಚಾಗಿದೆ ಎಂದು ಕೇಂದ್ರ ಸರಕಾರದ ಮೂಲಗಳು ಹೇಳಿವೆ. ಬಟಾಟೆ, ಟೊಮೆಟೋ, ಕ್ಯಾಲಿಫ್ಲವರ್‌ ಇತ್ಯಾದಿಗಳ ಬೆಲೆ ಶೇ.50ರಷ್ಟು ಹೆಚ್ಚಾಗಿವೆ. ಹಲವೆಡೆ ಭಾರೀ ಮಳೆ ಸುರಿದಿರುವುದರಿಂದ ಬೆಳೆಗಳಿಗೆ ಹಾನಿಯಾಗಿದ್ದು, ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದೆ.

ಅಕ್ಟೋಬರ್‌ ವೇಳೆ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ ಹೆಚ್ಚಿನ ಮಳೆಯಾಗಿ ಟೊಮೆಟೋ, ಈರುಳ್ಳಿ ಬೆಳೆಗಳಿಗೆ ಹಾನಿಯಾಗಿದೆ. ಇದರೊಂದಿಗೆ ಬೇಳೆಕಾಳುಗಳ ಬೆಳೆಗೂ ಹಾನಿಯಾಗಿದೆ.

ಆಹಾರ ಸಚಿವಾಲಯದ ದತ್ತಾಂಶ ಪ್ರಕಾರ ಈರುಳ್ಳಿ ಬೆಲೆ ಕಳೆದ ಮಾರ್ಚ್‌ ಬಳಿಕ ಶೇ.400ರಷ್ಟು ಏರಿಕೆಯಾಗಿದೆ. ಇನ್ನು ಅಕ್ಕಿ, ಬೇಳೆಕಾಳುಗಳು, ಅಡುಗೆ ಎಣ್ಣೆ, ಚಹಾ, ಸಕ್ಕರೆ, ಬೆಲ್ಲ ಇತ್ಯಾದಿಗಳ ಬೆಲೆ ಕಳೆದ ವರ್ಷಕ್ಕಿಂತ ಹೆಚ್ಚಿದೆ. ಅಕ್ಕಿ, ಗೋಧಿ ಬೆಳೆ ಶೇ.10ರಷ್ಟು ಏರಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ ತರಕಾರಿ ಬೆಲೆ ಶೇ.26.10ರಷ್ಟು ಏರಿಕೆ ಕಂಡಿದ್ದರೆ, ನವೆಂಬರ್‌ನಲ್ಲಿ ಶೇ.35.99ರಷ್ಟು ಏರಿಕೆ ಕಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ