ಭಾರತದಲ್ಲಿ ವಾಹನಗಳ ಬೆಲೆ ಸದ್ಯದಲ್ಲೇ ಇಳಿಕೆ?
ಐಆರ್‌ಡಿಎಐ ದೀರ್ಘಾವಧಿ ವಿಮೆ ರದ್ದು ಮಾಡಿದ್ದರಿಂದ ಈ ನಿರೀಕ್ಷೆ
Team Udayavani, Jun 11, 2020, 8:20 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತದ ವಾಹನ ಗ್ರಾಹಕರಿಗೆ ಒಂದು ಸಿಹಿಸುದ್ದಿಯಿದೆ. ಸದ್ಯದ ಪ್ರಕಾರ ಎಲ್ಲ ಅಂದುಕೊಂಡಂತೆ ನಡೆದರೆ, ವಾಹನಗಳ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಇದಕ್ಕೆ ಕಾರಣ ಐಆರ್‌ಡಿಎಐ (ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ವಾಹನಗಳ ಮೇಲಿನ ದೀರ್ಘಾವಧಿ ವಿಮೆಯನ್ನು ರದ್ದು ಪಡಿಸಿರುವುದು. ಆ.1ರಿಂದ ಈ ಆದೇಶ ಜಾರಿಗೆ ಬರಲಿದೆ.
ಹೇಗೆ ಬೆಲೆ ಇಳಿಕೆಯಾಗಲಿದೆ?
ಹಲವು ಅಂಶಗಳನ್ನು ಗಮನಿಸಿ ಐಆರ್ ಡಿಎಐ ದೀರ್ಘಾವಧಿ ವಿಮೆಗಳನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿದೆ. 2018ರಲ್ಲಿ ಸರ್ವೋಚ್ಚ ನ್ಯಾಯಾಲಯ ಒಂದು ಆದೇಶ ನೀಡಿತ್ತು. ಹೊಸ ವಾಹನಗಳನ್ನು ಖರೀದಿಸುವಾಗ ಕಾರುಗಳ ಮೇಲೆ 3 ವರ್ಷ, ಬೈಕ್‌ಗಳ ಮೇಲೆ 5 ವರ್ಷದ ತೃತೀಯ ವ್ಯಕ್ತಿ ವಿಮೆ ಮಾಡಿಸುವುದು ಕಡ್ಡಾಯ ಅಂದಿತ್ತು. ಅಲ್ಲಿಂದ ವಿಮಾ ಕಂಪೆನಿಗಳು ದೀರ್ಘಾವಧಿಯ ವಿಮೆ ನೀಡಲು ಆರಂಭಿಸಿದವು. ಹಾಗೆಯೇ ಸಾಲ ನೀಡುವ ಕಂಪೆನಿಗಳೂ, ಸಮಗ್ರ ವಿಮೆಗಾಗಿ ಆಗ್ರಹಿಸಿದವು. ಇದರಿಂದ ಒಟ್ಟಾರೆ ವಾಹನದ ಬೆಲೆ ಏರಲು ಶುರುವಾಯಿತು. ಈ ಸಂಗತಿಯನ್ನು ಮುಖ್ಯವಾಗಿ ಐಆರ್‌ಡಿಎಐ ಪರಿಗಣಿಸಿದೆ. ಅದಕ್ಕಾಗಿಯೇ ಈ ರೀತಿಯ ವಿಮೆಯಲ್ಲಿ ಹಲವು ಬದಲಾವಣೆಗಳನ್ನೂ ಐಆರ್‌ಡಿಎಐ ಮಾಡಿದ್ದನ್ನು ಇಲ್ಲಿ ಗಮನಿಸಬಹುದು. ವಿಮಾ ಕಂಪೆನಿಗಳು ನೀಡುವ ಸೇವೆ ತೃಪ್ತಿಕರವಾಗಿಲ್ಲದಿದ್ದರೂ, ದೀರ್ಘಾ ವಧಿಯ ವಿಮೆ ಎಂಬ ಕಾರಣಕ್ಕೆ ಗ್ರಾಹಕರು ಸಹಿಸಿಕೊಳ್ಳುತ್ತಿದ್ದಾರೆ. ದೀರ್ಘಾವಧಿ ವಿಮೆ ರದ್ದಾಗುವಾಗ ಇದನ್ನೂ ಗಣನೆಗೆ ತೆಗೆದುಕೊಂಡಿದೆ. ಸದ್ಯದ ಲೆಕ್ಕಾಚಾರದಲ್ಲಿ ದೀರ್ಘಾವಧಿ ವಿಮೆ ರದ್ದಾಗಿರುವುದರಿಂದ, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಾಹನಗಳು ಸಿಗುವ ನಿರೀಕ್ಷೆಯಿದೆ. ಕೋವಿಡ್ ಕಾಲದಲ್ಲೂ ವಾಹನ ಖರೀದಿಸಬಹುದೆಂಬ ಆಶಾವಾದವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್