ವಿಸ್ಟಾದಿಂದ ಜಿಯೋ ಪ್ಲ್ಯಾಟ್ ಫಾರ್ಮ್ ನಲ್ಲಿ 11,367 ಕೋಟಿ ರೂಪಾಯಿ ಹೂಡಿಕೆ

ಕಡಿಮೆ ಅವಧಿಯಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ 60,596.37 ಕೋಟಿ ರೂ. ಹೂಡಿಕೆ

Team Udayavani, May 8, 2020, 3:55 PM IST

ವಿಸ್ಟಾದಿಂದ ಜಿಯೋ ಪ್ಲ್ಯಾಟ್ ಫಾರ್ಮ್ ನಲ್ಲಿ 11,367 ಕೋಟಿ ರೂಪಾಯಿ ಹೂಡಿಕೆ

ಮುಂಬೈ: ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್ (“ವಿಸ್ಟಾ”) 11,367 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (“ರಿಲಯನ್ಸ್ ಇಂಡಸ್ಟ್ರೀಸ್”) ಹಾಗೂ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (“ಜಿಯೋ ಪ್ಲಾಟ್‌ಫಾರ್ಮ್ಸ್”) ಘೋಷಿಸಿದೆ.

ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ವಿಸ್ಟಾ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ 2.32% ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದ್ದು, ಈ ಮೂಲಕ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಫೇಸ್‌ಬುಕ್ ನಂತರದ ಅತಿದೊಡ್ಡ ಹೂಡಿಕೆದಾರನ ಸ್ಥಾನವನ್ನು ವಿಸ್ಟಾ ಪಡೆದುಕೊಂಡಿದೆ. ಈ ಹೂಡಿಕೆಯೊಂದಿಗೆ, ಮೂರು ವಾರಕ್ಕೂ ಕಡಿಮೆ ಅವಧಿಯಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ 60,596.37 ಕೋಟಿ ರೂ. ಹೂಡಿಕೆ ಪಡೆದುಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಜಿಯೋದ ಮುಂಚೂಣಿ ಡಿಜಿಟಲ್ ಆ್ಯಪ್‌ಗಳು, ಡಿಜಿಟಲ್ ಇಕೋ ಸಿಸ್ಟಂಗಳು ಹಾಗೂ ಭಾರತದ ನಂ.1 ಅತಿವೇಗದ ಸಂಪರ್ಕ ವೇದಿಕೆಯನ್ನು ಒಂದೇ ಛಾವಣಿಯಡಿ ತರುವ ಮೂಲಕ ಭಾರತಕ್ಕಾಗಿ ಡಿಜಿಟಲ್ ಸಮಾಜವನ್ನು ರೂಪಿಸುತ್ತಿರುವ ಮುಂದಿನ ಪೀಳಿಗೆಯ ತಂತ್ರಜ್ಞಾನ ಸಂಸ್ಥೆಯಾಗಿದೆ. 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿಗೆ ಸಂಪರ್ಕ ವೇದಿಕೆಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಜಿಯೋ ಪ್ಲಾಟ್‌ಫಾರ್ಮ್‌ಗಳ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರಲಿದೆ.

1.3 ಶತಕೋಟಿ ಭಾರತೀಯರು ಹಾಗೂ ಭಾರತೀಯ ಉದ್ಯಮಗಳಿಗೆ, ಅದರಲ್ಲೂ ವಿಶೇಷವಾಗಿ ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರಿಗೆ, ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ. ಭಾರತೀಯ ಡಿಜಿಟಲ್ ಸೇವೆಗಳ ಕ್ಷೇತ್ರವನ್ನು ಪರಿವರ್ತಿಸುವ ಬದಲಾವಣೆಗಳನ್ನು ಜಿಯೋ ತಂದಿದೆ ಹಾಗೂ ವಿಶ್ವದ ಪ್ರಮುಖ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದಾಗಿ ಜಾಗತಿಕ ತಂತ್ರಜ್ಞಾನ ನಾಯಕತ್ವದ ಸ್ಥಾನ ಪಡೆಯುವತ್ತ ಭಾರತವನ್ನು ಮುನ್ನಡೆಸಿದೆ.

ವಿಸ್ಟಾ ಒಂದು ಪ್ರಮುಖ ಜಾಗತಿಕ ಹೂಡಿಕೆ ಸಂಸ್ಥೆಯಾಗಿದ್ದು, ಉದ್ಯಮಗಳನ್ನು ಮರುಶೋಧಿಸುತ್ತಿರುವ ಹಾಗೂ ಬದಲಾವಣೆಯ ವೇಗವರ್ಧಿಸುತ್ತಿರುವ ಎಂಟರ್‌ಪ್ರೈಸ್ ತಂತ್ರಾಂಶ, ಡೇಟಾ ಮತ್ತು ತಂತ್ರಜ್ಞಾನ ಸಶಕ್ತ ಸಂಸ್ಥೆಗಳ ಸಬಲೀಕರಣ ಹಾಗೂ ಬೆಳವಣಿಗೆಯತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ. ವಿಸ್ಟಾ 57 ಶತಕೋಟಿ ಡಾಲರುಗಳಿಗಿಂತ ಹೆಚ್ಚಿನ ಸಂಚಿತ ಬಂಡವಾಳ ಬದ್ಧತೆಗಳನ್ನು ಹೊಂದಿದೆ ಮತ್ತು ಅದರ ಜಾಗತಿಕ ಸಂಸ್ಥೆಗಳ ಜಾಲವು ಒಟ್ಟಾರೆಯಾಗಿ ವಿಶ್ವದ 5ನೇ ಅತಿದೊಡ್ಡ ಎಂಟರ್‌ಪ್ರೈಸ್ ತಂತ್ರಾಂಶ ಸಂಸ್ಥೆಯನ್ನು ಪ್ರತಿನಿಧಿಸುತ್ತದೆ. ಎಂಟರ್‌ಪ್ರೈಸ್ ತಂತ್ರಾಂಶವೊಂದರಲ್ಲೇ 20 ವರ್ಷಗಳ ಹೂಡಿಕೆ ಅನುಭವ
ಹೊಂದಿರುವ ವಿಸ್ಟಾ, ತಂತ್ರಜ್ಞಾನದ ಪರಿವರ್ತಕ ಶಕ್ತಿಯು ಆರೋಗ್ಯಕರ ಗ್ರಹ, ಚುರುಕಾದ ಆರ್ಥಿಕತೆ, ವೈವಿಧ್ಯಮಯ ಮತ್ತು ಎಲ್ಲರನ್ನೂ ಒಳಗೊಂಡ ಸಮುದಾಯ ಮತ್ತು ಸಮೃದ್ಧಿಯತ್ತ ವಿಶಾಲ ಮಾರ್ಗವಿರುವ ಇನ್ನೂ ಉತ್ತಮ ಭವಿಷ್ಯದ ಕೀಲಿಯಾಗಿದೆ ಎಂದು ನಂಬುತ್ತದೆ. ಪ್ರಸ್ತುತ, ವಿಸ್ಟಾ ಪೋರ್ಟ್‌ಫೋಲಿಯೋ ಸಂಸ್ಥೆಗಳು ಭಾರತದಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿವೆ.

ವಿಸ್ಟಾ ಜೊತೆಗಿನ ವಹಿವಾಟಿನ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, “ವಿಶ್ವದ ಮುಂಚೂಣಿ ಟೆಕ್ ಹೂಡಿಕೆದಾರ ಸಂಸ್ಥೆ ವಿಸ್ಟಾವನ್ನು ಜಾಗತಿಕವಾಗಿ ಮೌಲ್ಯಯುತ ಪಾಲುದಾರರಾಗಿ ಸ್ವಾಗತಿಸಲು ನನಗೆ ಸಂತೋಷವಾಗಿದೆ. ನಮ್ಮ ಇತರ ಪಾಲುದಾರರಂತೆ, ಎಲ್ಲ ಭಾರತೀಯರ ಅನುಕೂಲಕ್ಕಾಗಿ ಭಾರತದ ಡಿಜಿಟಲ್ ಇಕೋಸಿಸ್ಟಂ ಅನ್ನು ಬೆಳೆಸುವ ಹಾಗೂ ಪರಿವರ್ತಿಸುವುದನ್ನು ಮುಂದುವರೆಸುವ ದೃಷ್ಟಿಯನ್ನು ವಿಸ್ಟಾ ಕೂಡ ನಮ್ಮೊಂದಿಗೆ ಹಂಚಿಕೊಳ್ಳುತ್ತದೆ. ಪ್ರತಿಯೊಬ್ಬರಿಗೂ ಇನ್ನೂ ಉತ್ತಮ ಭವಿಷ್ಯದ ಕೀಲಿಯಾಗಬಲ್ಲ ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಅವರು ನಂಬುತ್ತಾರೆ. ಗುಜರಾತ್ ಮೂಲದ ಕುಟುಂಬದಿಂದ ಬಂದಿರುವ ರಾಬರ್ಟ್ ಮತ್ತು ಬ್ರಿಯಾನ್ ಅವರಲ್ಲಿ, ಭಾರತವನ್ನು ಮತ್ತು ಡಿಜಿಟಲ್ ಭಾರತೀಯ ಸಮಾಜದ ಪರಿವರ್ತಕ ಸಾಮರ್ಥ್ಯವನ್ನು ನಂಬುವ ಇಬ್ಬರು ಅತ್ಯುತ್ತಮ ಜಾಗತಿಕ ತಂತ್ರಜ್ಞಾನ ನಾಯಕರನ್ನು ನಾನು ಕಂಡಿದ್ದೇನೆ. ಜಾಗತಿಕವಾಗಿ ತನ್ನ ಹೂಡಿಕೆಗಳಿಗೆ ವಿಸ್ಟಾ ನೀಡುತ್ತಿರುವ ವೃತ್ತಿಪರ ಪರಿಣತಿ ಮತ್ತು ಬಹು-ಹಂತದ ಬೆಂಬಲದ ಪ್ರಯೋಜನವನ್ನು ಜಿಯೋಗಾಗಿಯೂ ಪಡೆಯಲು ನಾವು ಉತ್ಸುಕರಾಗಿದ್ದೇವೆ.” ಎಂದು ಹೇಳಿದ್ದಾರೆ.

ಹೂಡಿಕೆಯ ಬಗ್ಗೆ ಮಾತನಾಡಿದ ವಿಸ್ಟಾದ ಸಂಸ್ಥಾಪಕ, ಅಧ್ಯಕ್ಷ ಮತ್ತು ಸಿಇಓ ರಾಬರ್ಟ್ ಎಫ್. ಸ್ಮಿತ್, “ಭಾರತಕ್ಕಾಗಿ ಜಿಯೋ ನಿರ್ಮಿಸುತ್ತಿರುವ ಡಿಜಿಟಲ್ ಸಮಾಜದ ಸಾಧ್ಯತೆಗಳನ್ನು ನಾವು ನಂಬುತ್ತೇವೆ. ಜಿಯೋದ ವಿಶ್ವ ದರ್ಜೆಯ ನಾಯಕತ್ವದ ತಂಡದೊಂದಿಗೆ ಜಾಗತಿಕ ಪ್ರವರ್ತಕನಾಗಿ ಮುಖೇಶ್ ಅವರ ದೃಷ್ಟಿಕೋನವು, ಜಿಯೋ ಪ್ರಾರಂಭಿಸಿದ ಡೇಟಾ ಕ್ರಾಂತಿಯನ್ನು ಬೆಳೆಸಲು ಮತ್ತು ಮುನ್ನಡೆಸಲು ಒಂದು ವೇದಿಕೆಯನ್ನು ನಿರ್ಮಿಸಿದೆ. ಭಾರತದಾದ್ಯಂತ ಸಂಪರ್ಕದಲ್ಲಿ ತ್ವರಿತ ಬೆಳವಣಿಗೆಯನ್ನು ನೀಡಲು, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಗಳಲ್ಲೊಂದರ ಭವಿಷ್ಯವನ್ನು ಉತ್ತೇಜಿಸುವುದಕ್ಕಾಗಿ ಆಧುನಿಕ ಗ್ರಾಹಕ, ಸಣ್ಣ ವ್ಯಾಪಾರ ಮತ್ತು ಉದ್ಯಮಗಳಿಗೆ ತಂತ್ರಾಂಶವನ್ನು ಒದಗಿಸಲು ಜಿಯೋ ಪ್ಲಾಟ್‌ಫಾರ್ಮ್ಸ್ ಜೊತೆ ಸೇರಲು
ನಾವು ರೋಮಾಂಚನಗೊಂಡಿದ್ದೇವೆ.” ಎಂದು ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ಗೆ ಹಣಕಾಸು ಸಲಹೆಗಾರರಾಗಿ ಮೋರ್ಗನ್ ಸ್ಟಾನ್ಲಿ ಹಾಗೂ ವಕೀಲರಾಗಿ ಎಜ಼ೆಡ್‌ಬಿ ಆಂಡ್ ಪಾರ್ಟ್‌ನರ್ಸ್ ಹಾಗೂ ಡೇವಿಸ್ ಪೋಲ್ಕ್ ಆಂಡ್ ವಾರ್ಡ್‌ವೆಲ್ ಈ ವಹಿವಾಟಿಗೆ ಸಲಹೆ ನೀಡಿದ್ದಾರೆ. ಕರ್ಕ್‌ಲ್ಯಾಂಡ್ ಆಂಡ್ ಎಲ್ಲಿಸ್ ಎಲ್ಎಲ್‌ಪಿ ಹಾಗೂ ಶಾರ್ದೂಲ್ ಅಮರ್‌ಚಂದ್ ಮಂಗಲ್‌ದಾಸ್ ಆಂಡ್ ಕೋ. ವಿಸ್ಟಾ ಸಂಸ್ಥೆಯ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.

ಟಾಪ್ ನ್ಯೂಸ್

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಮಾಜಿ ಸಚಿವರ ಲೈಂಗಿಕ ಹಗರಣ: ವೀಡಿಯೊ ಮಾಡಲು ಕಾಂಗ್ರೆಸ್ ನಿಂದ 10 ಲಕ್ಷ ಡೀಲ್‍: ಸಂತ್ರಸ್ತೆ

ಮಾಜಿ ಸಚಿವರ ಲೈಂಗಿಕ ಹಗರಣ: ವೀಡಿಯೊ ಮಾಡಲು ಕಾಂಗ್ರೆಸ್ ನಿಂದ 10 ಲಕ್ಷ ಡೀಲ್‍: ಸಂತ್ರಸ್ತೆ

ragini dwivedi

ಕಾಲಿವುಡ್‌ ನ‌ತ್ತ ಹೊರಟ ರಾಗಿಣಿ

ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ

ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ

Ahmedabad franchise

ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಜೊತೆಗೆ ಯುವ ಆಟಗಾರನನ್ನು ಸೆಳೆದ ಅಹಮದಾಬಾದ್ ಫ್ರಾಂಚೈಸಿ

ಸತೀಶ್ ಜಾರಕಿಹೊಳಿ

ಮೇಕೆದಾಟು ರೀತಿಯಲ್ಲೇ ಮಹದಾಯಿ ಹೋರಾಟ ನಡೆಸುತ್ತೇವೆ: ಸತೀಶ್ ಜಾರಕಿಹೊಳಿ

Untitled-1

ಹಳೆಯಂಗಡಿ: ನದಿಯಲ್ಲಿ ಶವ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಾಖಲೆ: 61,000 ಅಂಕಗಳ ಗಡಿ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಜಿಗಿತ

ದಾಖಲೆ: 61,000 ಅಂಕಗಳ ಗಡಿ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಜಿಗಿತ

61 ಸಾವಿರ ಅಂಕಗಳ ಗಡಿ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಜಿಗಿತ

61 ಸಾವಿರ ಅಂಕಗಳ ಗಡಿ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಜಿಗಿತ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 650 ಅಂಕ ಜಿಗಿತ; ಮತ್ತೆ 18,000 ಅಂಕದ ಗಡಿ ತಲುಪಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 650 ಅಂಕ ಜಿಗಿತ; ಮತ್ತೆ 18,000 ಅಂಕದ ಗಡಿ ತಲುಪಿದ ನಿಫ್ಟಿ

1—-dsasad

28 ರ ಶಂತನು ನಾಯ್ಡು: ರತನ್ ಟಾಟಾ ಅವರ ಸಹಸ್ರಮಾನದ ಗೆಳೆಯ

ಒಮಿಕ್ರಾನ್, ಆರ್ಥಿಕ ಹೊಡೆತದ ಭೀತಿ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 621 ಅಂಕ ಇಳಿಕೆ

ಒಮಿಕ್ರಾನ್, ಆರ್ಥಿಕ ಹೊಡೆತದ ಭೀತಿ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 621 ಅಂಕ ಇಳಿಕೆ

MUST WATCH

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

ಹೊಸ ಸೇರ್ಪಡೆ

ಯುವಕರೇ ದೇಶದ ಸಂಪತ್ತು: ಹೇಮಲತಾ

ಯುವಕರೇ ದೇಶದ ಸಂಪತ್ತು: ಹೇಮಲತಾ

ಆಸ್ಪತ್ರೆ 30 ಹಾಸಿಗೆಗೆ ಮೇಲ್ದರ್ಜೆಗೆ

ಬೆಳಗಾವಿ: ವಡಗಾವಿಯ ಆಸ್ಪತ್ರೆ 30 ಹಾಸಿಗೆಗೆ ಮೇಲ್ದರ್ಜೆಗೆ

27cleaning

ರಜಪೂತ ಸಮಾಜದಿಂದ ಮುಕ್ತಿಧಾಮ ಸ್ವಚ್ಛತಾ ಕಾರ್ಯ

ಪಿಲಿಕುಳ ಜೈವಿಕ ಉದ್ಯಾನವನ: ಬಾಹುಬಲಿ-ಅನುಷ್ಕಾಗೆ ಎರಡನೇ ಕರು!

ಪಿಲಿಕುಳ ಜೈವಿಕ ಉದ್ಯಾನವನ: ಬಾಹುಬಲಿ-ಅನುಷ್ಕಾಗೆ ಎರಡನೇ ಕರು!

ಉತ್ಪಲ್ ಪರೀಕರ್ ಬಿಜೆಪಿ ಬಿಟ್ಟು ವಿರೋಧಿ ಪಕ್ಷಕ್ಕೆ ಹೋಗುವುದಿಲ್ಲ: ವದಂತಿಗೆ ಸಿ.ಟಿ ರವಿ ತೆರೆ

ಉತ್ಪಲ್ ಪರೀಕರ್ ಬಿಜೆಪಿ ಬಿಟ್ಟು ವಿರೋಧಿ ಪಕ್ಷಕ್ಕೆ ಹೋಗುವುದಿಲ್ಲ: ವದಂತಿಗೆ ಸಿ.ಟಿ ರವಿ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.