ಜಿಯೋ ನಂತರ ಗ್ರಾಹಕರಿಗೆ ಶಾಕ್‌ ನೀಡಿದ ವೋಡಾಫೋನ್‌, ಐಡಿಯಾ ಮತ್ತು ಏರ್‌ಟೆಲ್‌

Team Udayavani, Nov 19, 2019, 2:43 PM IST

ಮುಂಬಯಿ: ಜಿಯೋ ತನ್ನ ಉಚಿತ ಕರೆ ಸೇವೆ ಸ್ಥಗಿತ ಗೊಳಿಸಿದ ಮೇಲೆ ಟೆಲಿಕಾಂ ಕ್ಷೇತ್ರದಲ್ಲಿ ಆಫ‌ರ್‌ಗಳ ಮಳೆ ಸುರಿದಿತ್ತು. ಗ್ರಾಹಕರನ್ನು ತಮ್ಮತ್ತ ಸೆಳೆದುಕೊಳ್ಳಲು ಹೆಸರಾಂತ ಕಂಪೆನಿಗಳು ಆಫ‌ರ್‌ ಮೇಲೆ ಆಫ‌ರ್‌ ನೀಡಿದ್ದವು. ಆದರೆ ಆ ತಂತ್ರಗಾರಿಕೆೆಯೇ ಕಂಪೆನಿಗಳಿಗೆ ಮುಳುವಾಗಿದ್ದು, ಇದೀಗ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿವೆ.

ಟೆಲಿಕಾಂ ಇಂಡಸ್ಟ್ರಿ ಪೈಪೋಟಿಯಲ್ಲಿ ನಾ ಮುಂದು ತಾ ಮುಂದು ಎಂದು ಆಕರ್ಷಕ ಪ್ಲಾನ್‌ಗಳನ್ನು ನೀಡಿ ಕೈಸುಟ್ಟು ಕೊಂಡಿರುವ ವೋಡಾಫೋನ್‌, ಐಡಿಯಾ ಹಾಗೂ ಏರ್‌ಟೆಲ್‌ ತನ್ನ ಗ್ರಾಹಕರ ಪಾಲಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದ್ದು, ಹೆಚ್ಚಿನ ಹಣ ವಸೂಲಿ ಮಾಡುವ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.

ರಿಲಯನ್ಸ್‌ ಜಿಯೋ ಜತೆ ಪೈಪೋಟಿ ನೀಡಲು ಮುಂದಾಗಿ ಜನರಿಗೆ ಆಕರ್ಷಕ ಪ್ಲಾನ್‌ ನೀಡಿದ್ದ ಟೆಲಿಕಾಂ ಕಂಪನಿಗಳಿಗೆ 74,000ಕೋಟಿ ರೂಪಾಯಿ ನಷ್ಟವಾಗಿದ್ದು, ವೋಡಾಫೋನ್‌, ಐಡಿಯಾ ಹಾಗೂ ಏರ್‌ಟೆಲ್‌ ಇದೀಗ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಪ್ಲಾನ್‌ ರೂಪಿಸಿಕೊಂಡಿದೆ.

ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರಕ್ಕೆ ಮುಂದಾಗಿದ್ದು, ಫೋನ್‌ ಕರೆ ಹಾಗೂ ಡೇಟಾದಲ್ಲಿ ಹೆಚ್ಚಿನ ಹಣ ವಸೂಲಿ ಮಾಡುವ ಯೋಜನೆ ಹಾಕಿಕೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಂಪನಿಗಳು ತಮ್ಮ ಗ್ರಾಹಕರಿಗೆ ಉನ್ನತ ಮಟ್ಟದ ಹಾಗೂ ಡಿಜಿಟಲ್‌ ಪ್ಲಾನ್‌ ನೀಡುವ ಉದ್ದೇಶದಿಂದ ತನ್ನ ಸೇವಾ ದರ ಹೆಚ್ಚಿಸಲು ನಿರ್ಧರಿಸಿವೆ ಎಂದು ಸಮರ್ಥನೆ ನೀಡಿದ್ದು, ಡಿಸೆಂಬರ್‌ 1 ರಿಂದ ಈ ಯೋಜನೆ ಪ್ರಾರಂಭವಾಗಲಿದೆ ಎಂದು ಕಂಪೆನಿಗಳು ತಿಳಿಸಿವೆ. ಆದರೆ ಗ್ರಾಹಕರ ಜೇಬಿಗೆ ಮತ್ತೂಮ್ಮೆ ಕತ್ತರಿ ಹಾಕುವ ಯೋಜನೆ ಹಾಕಿಕೊಂಡಿರುವ ಈ ಕಂಪನಿಗಳು ಎಷ್ಟು ಹೆಚ್ಚುವರಿ ಹಣ ಹೇರಲಿವೆ ಎಂಬುದರ ಮಾಹಿತಿ ಮಾತ್ರ ಇನ್ನೂ ಲಭ್ಯವಾಗಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ