ರೈಲಿನಲ್ಲಿ ಉಚಿತವಾಗಿ ಟಿವಿ ವೀಕ್ಷಿಸಿ!
Team Udayavani, Jul 22, 2019, 5:13 AM IST
ಹೊಸದಿಲ್ಲಿ: ಪ್ರಯಾಣಿಕರು ಇನ್ನು ಕೆಲವೇ ದಿನಗಳಲ್ಲಿ ರೈಲ್ವೇ ಸ್ಟೇಷನ್‌ನಲ್ಲಿ ಕುಳಿತು ಟಿವಿ ಚಾನೆಲ್ಗಳು, ಸಿನಿಮಾಗಳು ಹಾಗೂ ಮನರಂಜನೆ ವೀಡಿಯೋಗಳನ್ನು ತಮ್ಮ ಮೊಬೈಲ್ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
ರೈಲಿಗಾಗಿ ಕಾಯುವ ಸಮಯವನ್ನು ಇನ್ನಷ್ಟು ಸಹನೀಯವಾಗಿಸುವ ನಿಟ್ಟನಲ್ಲಿ ಈ ಯೋಜನೆಯನ್ನು ರೈಲ್ಟೆಲ್ ಜಾರಿಗೊಳಿಸಲಿದೆ. ಆರಂಭದಲ್ಲಿ 1600 ರೈಲ್ವೇ ಸ್ಟೇಷನ್‌ಗಳಲ್ಲಿ ಈ ಸೌಲಭ್ಯವಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಮುಂದಿನ 4700 ಸ್ಟೇಷನ್‌ಗಳಿಗೆ ವಿಸ್ತರಿಸಲಾಗುತ್ತದೆ. ಇದಕ್ಕಾಗಿ ರೈಲ್ಟೆಲ್ ಆ್ಯಪ್ ಸಿದ್ಧಪಡಿಸಿದ್ದು, ಈ ಆ್ಯಪ್‌ನಲ್ಲಿ ಜಾಹೀರಾತು ಪ್ರದರ್ಶಿಸುವ ಮೂಲಕ ರೈಲ್ಟೆಲ್ ಆದಾಯ ಗಳಿಕೆ ಮಾಡಲಿದೆ. ಈಗಾಗಲೇ ಯೋಜನೆ ಜಾರಿ ಜವಾಬ್ದಾರಿ ಯನ್ನು ರೈಲ್ವೇ ವಲಯಗಳಿಗೆ ನೀಡಲಾಗಿತ್ತಾ ದರೂ, ಸೂಕ್ತ ಪ್ರಗತಿ ಕಾಣದ್ದರಿಂದ ಇದನ್ನು ರೈಲ್ಟೆಲ್ಗೆ ವಹಿಸಲಾಗಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444