ಬೆಲೆ ಏರಿಕೆ: ಚಿಲ್ಲರೆ ಹಣದುಬ್ಬರದ ಬೆನ್ನಲ್ಲೇ ಸಗಟು ಹಣದುಬ್ಬರ ಶೇ.2.59ಕ್ಕೆ ಏರಿಕೆ

ವಾರ್ಷಿಕ ಹಣದುಬ್ಬರದ ದರವನ್ನು ತಿಂಗಳಿನ ಸಗಟು ದರ ಆಧಾರಿತ ಮೇಲೆ ನಿಗದಿಪಡಿಸಲಾಗುತ್ತದೆ.

Team Udayavani, Jan 14, 2020, 2:13 PM IST

ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳ ಸಗಟು ಹಣದುಬ್ಬರ ಶೇ.2.59ರಷ್ಟು ಏರಿಕೆಯಾಗಿದೆ ಎಂದು ಮಂಗಳವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ತಿಳಿಸಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಟಣೆ ಪ್ರಕಾರ, ವಾರ್ಷಿಕ ಹಣದುಬ್ಬರದ ದರವನ್ನು ತಿಂಗಳಿನ ಸಗಟು ದರ ಆಧಾರಿತ ಮೇಲೆ ನಿಗದಿಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ 2019ರ ಡಿಸೆಂಬರ್ ತಿಂಗಳ ಸಗಟು ಹಣದುಬ್ಬರ ಶೇ.2.59ರಷ್ಟು ಏರಿಕೆಯಾಗಿದೆ. ನವೆಂಬರ್ ತಿಂಗಳಿನಲ್ಲಿ ಸಗಟು ಹಣದುಬ್ಬರ ದರ ಶೇ.0.58ರಷ್ಟಿತ್ತು.

ಸೋಮವಾರ ಬಿಡುಗಡೆಯಾಗಿದ್ದ ಡಿಸೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.7.35ಕ್ಕೆ ತಲುಪಿದ್ದು, ಇದೂ ಐದು ವರ್ಷಗಳ ಗರಿಷ್ಠ ದಾಖಲೆಯಾಗಿತ್ತು. ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಿಂದಾಗಿ ಹಣದುಬ್ಬರ ಪ್ರಮಾಣ ಏರಿಕೆಯಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ