ಎರಡನೇ ತ್ತೈಮಾಸಿಕದಲ್ಲಿ ಯಸ್ ಬ್ಯಾಂಕ್‌ಗೆ 600 ಕೋಟಿ ರೂ. ನಷ್ಟ
Team Udayavani, Nov 1, 2019, 6:34 PM IST
ಮುಂಬಯಿ: ಈ ವಿತ್ತೀಯ ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ಕಳೆಗುಂದಿರುವಂತೆಯೇ, ಖಾಸಗಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ಗಳಲ್ಲೊಂದಾದ ಯಸ್ ಬ್ಯಾಂಕ್ ಕೂಡ ನಷ್ಟ ಅನುಭವಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಅದು 600 ಕೋಟಿ ರೂ. ನಷ್ಟ ಅನುಭವಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅದು 964 ಕೋಟಿ ರೂ. ಲಾಭವನ್ನು ಹೊಂದಿತ್ತು.
ಕಾರ್ಪೊರೆಟ್ ತೆರಿಗೆಯಲ್ಲಾದ ಬದಲಾವಣೆಯಿಂದಾಗಿ ಒಂದು ಬಾರಿ ಮುಂದೂಡಲ್ಪಟ್ಟ ತೆರಿಗೆಯಿಂದ 709 ಕೋಟಿ ರೂ. ಕಡಿಮೆಯಾಗಿದ್ದು, ನಷ್ಟ ಅನುಭವಿಸಲು ಕಾರಣವಾಗಿದೆ. ನಿರೀಕ್ಷೆಯ ನಷ್ಟಕ್ಕಿಂತ 400 ಕೋಟಿ ರೂ. ಹೆಚ್ಚುವರಿ ನಷ್ಟವನ್ನು ಬ್ಯಾಂಕ್ ದಾಖಲಿಸಿದ್ದಾಗಿ ವಿಶ್ಲೇಷಣೆಕಾರರೊಬ್ಬರು ಹೇಳಿದ್ದಾರೆ.
ಇದರೊಂದಿಗೆ ಬ್ಯಾಂಕ್‌ನ ಒಟ್ಟು ಅನುತ್ಪಾದಕ ಆಸ್ತಿ (ಜಿ.ಎನ್.ಪಿ.ಎ.) ಪ್ರಮಾಣ ಈ ತ್ರೈಮಾಸಿಕದಲ್ಲಿ ಶೇ.7.39ರಷ್ಟಕ್ಕೆ ಏರಿಕೆ ಕಂಡಿದೆ. ಜೂನ್ ತ್ತೈಮಾಸಿಕದಲ್ಲಿ ಈ ಪ್ರಮಾಣ ಶೇ.5.01ರಷ್ಟಿದ್ದು, ವರ್ಷದ ಹಿಂದೆ ಇದು ಶೇ.1.6ರಷ್ಟಿತ್ತು. ಇನ್ನು ಸೆಪ್ಟೆಂಬರ್ ತ್ತೈಮಾಸಿಕದಲ್ಲಿ ಬ್ಯಾಂಕು 1336 ಕೋಟಿ ರೂ. ಸಾಲ ನೀಡಿದೆ. ಸದ್ಯ ಮಾರುಕಟ್ಟೆಯಲ್ಲಿನ ಒತ್ತಡ ಮತ್ತು ಇತರ ಬ್ಯಾಂಕಿಂಗ್ ವಲಯದ ತೊಂದರೆಗಳಿಂದಾಗಿ ಲಾಭಾಂಶದಲ್ಲಿ ಇಳಿಕೆಯಾಗಿದೆ ಎಂದು ಬ್ಯಾಂಕು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ