ಗ್ರ್ಯಾಂಡ್ ಪಾ ಕಿಚನ್; ಸ್ವಾದಿಷ್ಟ ಅಡುಗೆಯ ಯೂಟ್ಯೂಬ್ ಸ್ಟಾರ್ ನಾರಾಯಣ ರೆಡ್ಡಿ ವಿಧಿವಶ

Team Udayavani, Nov 1, 2019, 12:21 PM IST

ಹೈದರಾಬಾದ್:ರುಚಿ, ರುಚಿ ಅಡುಗೆ ಮೂಲಕ ಗ್ರ್ಯಾಂಡ್ ಪಾ ಕಿಚನ್ (ಅಜ್ಜನ ಅಡುಗೆ) ಹೆಸರಿನ ಮೂಲಕ ಯೂಟ್ಯೂಬ್ ಸ್ಟಾರ್ ಆಗಿದ್ದ ತೆಲಂಗಾಣ ಮೂಲದ ನಾರಾಯಣ ರೆಡ್ಡಿ (73ವರ್ಷ) ನಿಧನ ಹೊಂದಿದ್ದಾರೆ.

ನಾರಾಯಣ ರೆಡ್ಡಿ ಅವರು ಮಕ್ಕಳಿಗಾಗಿಯೇ ಸ್ವಾದಿಷ್ಟವಾದ ಅಡುಗೆಯನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲ ತಾನು ತಯಾರಿಸಿದ ರುಚಿ, ರುಚಿ ಅಡುಗೆಯನ್ನು ಅನಾಥಾಶ್ರಮದ ಮಕ್ಕಳಿಗೂ ಹಂಚುತ್ತಿದ್ದರು. 2017ರ ಆಗಸ್ಟ್ ನಲ್ಲಿ ರೆಡ್ಡಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಗ್ರ್ಯಾಂಡ್ ಪಾ ಕಿಚನ್ ಹೆಸರಿನಲ್ಲಿ ಆರಂಭಿಸಿದ್ದರು. ಬರೋಬ್ಬರಿ 60 ಲಕ್ಷ ಸಬ್ಸ್ ಕ್ರೈಬರ್ ಅನ್ನು ಹೊಂದಿದ್ದರು. ಅಕ್ಟೋಬರ್ 27ರಂದು ರೆಡ್ಡಿ ಅವರು ನಿಧನರಾದ ಸುದ್ದಿ ವಿಡಿಯೋ ಮೂಲಕ ವೈರಲ್ ಆಗಿದ್ದು, ಸಾವಿರಾರು ಮಂದಿ ಕಂಬನಿ ಮಿಡಿದಿದ್ದಾರೆ.

ತೆರೆದ ವಿಶಾಲ ಸ್ಥಳದಲ್ಲಿಯೇ ಈ ಅಜ್ಜ ಸೌದಿ ಒಲೆಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಅಡುಗೆ ವೀಡಿಯೋ ತುಂಬಾ ಜನಪ್ರಿಯವಾಗಿತ್ತು. ಚಿಕನ್ ಬಿರಿಯಾನಿ, ಪಿಜ್ಜಾ, ಬರ್ಗರ್ಸ್ಸ್, ಚಿಕನ್ ಲಾಲಿಪೋಪ್ಸ್, ಬಟಾಟೆ ಚಿಪ್ಸ್ ಸೇರಿದಂತೆ ವಿವಿಧ ಸ್ವಾದಿಷ್ಟ ಅಡುಗೆಯನ್ನು ರೆಡ್ಡಿಯವರು ತಯಾರಿಸುತ್ತಿದ್ದರು.

ಹೀಗೆ ಕಿಟ್ ಕ್ಯಾಟ್ ಮಿಶ್ರಣದ ಚಾಕೋಲೇಟ್ ಕೇಕ್, ರೆಡ್ ವೆಲ್ವೆಟ್ ಕೇಕ್ ಅನ್ನು ತಯಾರಿಸುವ ನಾರಾಯಣ ರೆಡ್ಡಿಯವರು ವೀಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದರು. ತಮ್ಮ ವಿಶಿಷ್ಟ, ಸ್ವಾದಿಷ್ಟ ಶೈಲಿಯ ಮೂಲಕ ಅಡುಗೆ ಮಾಡಿ ಯೂಟ್ಯೂಬ್ ಸ್ಟಾರ್ ಆಗಿದ್ದ ನಾರಾಯಣ ರೆಡ್ಡಿ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹೊಸದಿಲ್ಲಿ: ಇತ್ತೀಚೆಗೆ ಬ್ಯಾಂಕುಗಳು 2 ಸಾವಿರ ರೂ.ಗಳ ಬದಲಾಗಿ 500 ರೂ. ಮುಖಬೆಲೆಯ ನೋಟುಗಳನ್ನೇ ಹೆಚ್ಚು ಹೆಚ್ಚು ವಿತರಿಸಲು ಆರಂಭಿಸಿವೆ. 2 ಸಾವಿರ ರೂ. ಮುಖಬೆಲೆಯ ನೋಟುಗಳು...

  • ಹೊಸದಿಲ್ಲಿ: ಇನ್ನು ಮುಂದೆ ಸಿಹಿತಿನಿಸುಗಳ ಅಂಗಡಿಗಳು, ಬೇಕರಿಗಳಲ್ಲಿ ಪ್ಯಾಕಿಂಗ್‌ ಮಾಡದೇ ಟ್ರೇಗಳಲ್ಲಿ ಹಾಗೂ ಕಂಟೇನರ್‌ಗಳಲ್ಲಿ ಇಡಲಾಗುವ ಸಿಹಿ ತಿನಿಸುಗಳ...

  • ಮುಂಬಯಿ: ಬ್ಯಾಂಕಿಂಗ್‌, ಹಣಕಾಸು ಸೇವೆ ಮತ್ತು ವಿಮೆ (ಬಿಎಫ್ಎಸ್‌ಐ) ವಲಯಗಳಲ್ಲಿ ಉದ್ಯೋಗ ಬಯಸುವಂಥ ದಿವ್ಯಾಂಗ ವ್ಯಕ್ತಿಗಳಿಗೆ ತರಬೇತಿ ನೀಡಲು ಎಸ್‌ಬಿಐ ಜತೆಗೆ...

  • ದಿಲ್ಲಿ: ಮುಂಬರುವ ಎಪ್ರಿಲ್‌ ತಿಂಗಳ ಬಳಿಕ ಬಿಎಸ್‌ 6 ಮಾದರಿಯ ವಾಹನಗಳು ರಸ್ತೆಗಿಳಿಯಲಿವೆ. ಈ ಹಿನ್ನೆಲೆಯಲ್ಲಿ ಈಗಿರುವ ಬಿಎಸ್‌4 ವಾಹನಗಳು ಒಳ್ಳೆಯ ಮಾರುಕಟ್ಟೆಯನ್ನು...

  • ರಾಯ್ಪುರ: ಮುಂದಿನ ತಿಂಗಳಲ್ಲಿ ಎಲ್‌ಪಿಜಿ ದರ ಕಡಿತಗೊಳ್ಳಬಹುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಛತ್ತೀಸ್‌ಗಡದಲ್ಲಿ...

ಹೊಸ ಸೇರ್ಪಡೆ