ಬದುಕು-ಬರಹ ಒಂದಾದ್ರೆ ಸತ್ವಭರಿತ ಸಾಹಿತ್ಯ

ದಲಿತ ಕಾವ್ಯ ಪ್ರತಿಯೊಬ್ಬ ದಲಿತರ ನೋವಿನ ಸಂಕೇತ•ಉತ್ತಮ ಬದುಕಿಗೆ ಶಿಕ್ಷಣಕ್ಕೆ ಆದ್ಯತೆ ಕೊಡಿ

Team Udayavani, Jul 22, 2019, 10:09 AM IST

22-July-4

ದಾವಣಗೆರೆ: ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕಾವ್ಯ ಸಂಭ್ರಮವನ್ನು ಗಣ್ಯರು ಉದ್ಘಾಟಿಸಿದರು.

ದಾವಣಗೆರೆ: ಬದುಕು ಮತ್ತು ಬರಹ ಒಂದೇ ಆಗಿರುವ ಸಾಹಿತ್ಯ ಸದಾ ಸತ್ವಭರಿತವಾಗಿರುತ್ತದೆ ಎಂದು ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಉಪಾಧ್ಯಕ್ಷ ಡಾ| ವೈ.ಎಂ. ಭಜಂತ್ರಿ ಪ್ರತಿಪಾದಿಸಿದ್ದಾರೆ.

ಭಾನುವಾರ ರೋಟರಿ ಬಾಲಭವನದಲ್ಲಿ ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕಾವ್ಯ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಆಶಯ ನುಡಿಗಳಾಡಿದ ಅವರು, ಯಾವ ಸಾಹಿತಿಯ ಬದುಕು ಮತ್ತು ಬರಹ ಒಂದೇ ತೆರನಾಗಿ ಇರುವುದೋ ಅದಕ್ಕೆ ಅದರದೇ ಆದ ಶಕ್ತಿ ಮತ್ತು ಸತ್ವ ಇರುತ್ತದೆ ಎಂಬುದಕ್ಕೆ ದಲಿತ ಸಾಹಿತ್ಯ ನಿದರ್ಶನ ಎಂದರು.

ಕಳೆದ 25 ವರ್ಷದ ಹಿಂದೆ ಗದಗನಲ್ಲಿ ಪ್ರಾರಂಭವಾಗಿರುವ ದಲಿತ ಸಾಹಿತ್ಯ ಪರಿಷತ್ತು ಈವರೆಗೆ ಬರಿಗಾಲಲ್ಲಿ ನಡೆದು ಬಂದಿದೆ. ಬುದ್ಧ-ಬಸವ-ಅಂಬೇಡ್ಕರ್‌ರವರ ಆಶಯ, ಭಾವನೆ, ತತ್ವಗಳಡಿಯಲ್ಲಿ ಸಾಗಿ ಬಂದಿರುವ ಪರಿಷತ್ತು ಕಷ್ಟಗಳ ಬಿಸಿಲು, ಸಂಭ್ರಮದ ಬೆಳಂದಿಂಗಳು ಎರಡನ್ನೂ ಕಂಡಿದೆ. 25 ವರ್ಷದ ನಂತರ ಈ ಕಾಲಘಟ್ಟದಲ್ಲಿ ದಲಿತ ಸಾಹಿತ್ಯ ಕಾಲ, ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆ ಹೊಂದಬೇಕು ಎಂದು ಆಶಿಸಿದರು.

ಸಾಮಾಜಿಕ ಶೋಷಣೆ, ದಬ್ಟಾಳಿಕೆ ಮುಂತಾದ ಕಾರಣಗಳಿಂದ ತಮ್ಮ ಬದುಕನ್ನು ಕಳೆದುಕೊಂಡವರು ತಮ್ಮ ಮಾತುಗಳನ್ನು ತಮ್ಮನ್ನು ತುಳಿದವರಿಗೆ ಮುಟ್ಟಿಸುವಂತಾಗಬೇಕು ಎಂಬುದು ಬುದ್ಧ-ಬಸವ- ಅಂಬೇಡ್ಕರ್‌ರವರ ಆಶಯವಾಗಿತ್ತು. ಆ ಕೆಲಸವನ್ನು ದಲಿತ ಸಾಹಿತ್ಯ ಪರಿಷತ್ತು ಮಾಡುತ್ತಾ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ದಲಿತ ಸಾಹಿತ್ಯ ಪ್ರಾಯೋಗಿಕವಾಗಿ ಬರೆಯುವಂತದ್ದಲ್ಲ. ಮುದ್ದಾಂ ಆಗಿಯೂ ಬರೆಯುವಂತದ್ದಲ್ಲ. ಏಕೆಂದರೆ ದಲಿತ ಸಾಹಿತ್ಯ ಜೀವನದ ವಿವಿಧ ಘಟ್ಟದಲ್ಲಿ ಕಂಡುಂಡ ಅನುಭವ, ನೋವು ಒಳಗೊಂಡಿದೆ. ದಲಿತ ಸಾಹಿತ್ಯವನ್ನು ಆರಾಮವಾಗಿ ಉಂಡು ಬರೆಯುವಂತದ್ದಲ್ಲ. ದಲಿತ ಕಾವ್ಯ ಪ್ರತಿಯೊಬ್ಬ ದಲಿತರ ನೋವಿನ ಸಂಕೇತ. ಶ್ರಮದ ಬೆವರು, ಬದುಕಿನ ಚಡಪಡಿಕೆ ನಡುವೆ ದಲಿತ ಸಾಹಿತ್ಯ ಹುಟ್ಟಿ ಬಂದಿದೆ ಎಂದು ತಿಳಿಸಿದರು.

ನೆಲದ ಒಡಲನಿಂದ ಬಂದಿರುವ ದಲಿತ ಸಾಹಿತ್ಯವನ್ನು ಸಂಭ್ರಮಿಸಲೇಬೇಕು. ಏಕೆಂದರೆ ದಲಿತ ಸಾಹಿತ್ಯ ಬದುಕಿಗಿಂತ ವಿಭಿನ್ನವಾದುದಲ್ಲ. ದಲಿತ ಸಾಹಿತ್ಯ ಪರಿಷತ್ತು ನೇರವಾಗಿ ಸಾಮಾಜಿಕ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ, ಸಾಮಾಜಿಕ ಹೋರಾಟಕ್ಕೆ ಸಾಹಿತ್ಯಕವಾಗಿ ಬೆಂಬಲ ನೀಡುತ್ತಾ ತನ್ನದೆ ನೆಲೆಯಲ್ಲಿ ಹೋರಾಟ ನಡೆಸುತ್ತಲೇ ಇದೆ ಎಂದು ತಿಳಿಸಿದರು.

ದಲಿತ ಸಮುದಾಯ ಉತ್ತಮ ಬದುಕು ಕಟ್ಟಿಕೊಳ್ಳಲು ಶಿಕ್ಷಣಕ್ಕೆ ಮಹತ್ವ ಮತ್ತು ಆದ್ಯತೆ ನೀಡಬೇಕು. ಅಕ್ಷರ ಕಲಿತವರಿಗೆ ಸಮಾಜ ಗೌರವ ಕೊಡುತ್ತದೆ. ವಿದ್ಯಾವಂತ ದಲಿತ ಸಮುದಾಯದವರು ಯಾವುದೇ ಕಾರಣಕ್ಕೂ ತಾವು ಸಾಗಿ ಬಂದ ಹಾದಿಯನ್ನ ಮರೆಯಬಾರದು. ದಲಿತ ಕೇರಿಗಳತ್ತ ದಲಿತ ಸಾಹಿತ್ಯ ಸಾಗಬೇಕು. ದಲಿತ ಕೇರಿಯಲ್ಲಿನ ಪ್ರತಿಯೊಬ್ಬರ ಬದುಕು ಹಸನಾಗಲು ಕಾರಣೀಭೂತವಾಗಬೇಕು ಎಂದು ಆಶಿಸಿದರು.

ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಉದ್ಘಾಟಿಸಿದ ರಾಜ್ಯ ಅಧ್ಯಕ್ಷ ಡಾ|ಎಚ್.ಬಿ. ಕೊಲ್ಕೂರ, ದಲಿತ ಸಾಹಿತ್ಯ ಹೊಸ ಚಿಂತನೆ, ನೇರ, ಸರಳ ಮತ್ತು ನಿಷ್ಠುರವಾಗಿ ಇರುವುದನ್ನ ಗಮನಿಸಿದ ಕನ್ನಡ ಸಾಹಿತ್ಯ ಪರಿಷತ್ತು ಮಾಲಿಕೆ ರೂಪದಲ್ಲಿ ದಲಿತ ಸಾಹಿತ್ಯವನ್ನು ಹೊರ ತರುವ ಕೆಲಸ ಮಾಡಿದೆ. ದಲಿತ ಸಾಹಿತ್ಯ ಪರಿಷತ್ತು ಮೂಲಕ ಎಲೆ ಮರೆ ಕಾಯಿಯಂತಿರುವ ಅನೇಕ ಸಾಹಿತಿ, ಲೇಖಕರನ್ನು ಹೊರ ತರುವ ಕೆಲಸ ಮಾಡಲಾಗುತ್ತಿದೆ. ಸಾಹಿತ್ಯಕ ನೆಲೆಯಲ್ಲಿ ಸಾಮಾಜಿಕ ಹೋರಾಟ ಮುನ್ನಡೆಸುತ್ತಿದೆ. ದಲಿತ ಸಾಹಿತ್ಯ ಬದುಕು ಮತ್ತು ಬರಹ ಒಂದೇ ಎಂದು ಪ್ರಬಲವಾಗಿ ಪ್ರತಿಪಾದಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಓ.ಎಸ್‌. ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್‌ ಸದಸ್ಯ ಆಲೂರು ನಿಂಗರಾಜ್‌, ಡಾ| ಅರ್ಜುನ ಗೊಳಸಂಗಿ, ಕೆ. ಮಂಜುನಾಥ್‌, ಬುಳಸಾಗರದ ಸಿದ್ದರಾಮಣ್ಣ ಇತರರು ಇದ್ದರು.

ಗಂಗನಕಟ್ಟೆ ಹನುಮಂತಪ್ಪ, ಮಾಂತೇಶ್‌ ಜಾಗೃತಿ ಗೀತೆಗಳಾಡಿದರು. ಅನಿಲ್ ಬಾಪುಲೆ ಸ್ವಾಗತಿಸಿದರು. ಹುಚ್ಚಂಗಿ ಪ್ರಸಾದ್‌ ನಿರೂಪಿಸಿದರು.

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.