ಸುಪ್ರೀಂ ಕೋರ್ಟ್ನಲ್ಲಿ ದಶಕದಿಂದ 10,000 ಪ್ರಕರಣ ಪೆಂಡಿಂಗ್!
71 ಸಾವಿರ ಕೇಸುಗಳು ಇತ್ಯರ್ಥಕ್ಕೆ ಬಾಕಿ!
Team Udayavani, Aug 5, 2022, 7:40 AM IST
ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಸುಮಾರು 71 ಸಾವಿರ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದು, ಈ ಪೈಕಿ 10 ಸಾವಿರ ಕೇಸುಗಳು ಬರೋಬ್ಬರಿ 10 ವರ್ಷಗಳಿಂದ ವಿಲೇವಾರಿಗೆ ಕಾಯುತ್ತಿವೆ! ಹೀಗೆಂದು ಸ್ವತಃ ಕೇಂದ್ರ ಸರ್ಕಾರವೇ ರಾಜ್ಯಸಭೆಗೆ ಮಾಹಿತಿ ನೀಡಿದೆ.
ಆ.2ರವರೆಗೆ 71,411 ಕೇಸುಗಳು ಇತ್ಯರ್ಥಕ್ಕೆ ಬಾಕಿಯಿದ್ದು, ಇದರಲ್ಲಿ 56 ಸಾವಿರ ಸಿವಿಲ್, 15 ಸಾವಿರ ಕ್ರಿಮಿನಲ್ ಪ್ರಕರಣಗಳಾಗಿವೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
42 ಸಾವಿರ ಕೇಸುಗಳು 5 ವರ್ಷಗಳಿಂದಲೂ ವಿಲೇವಾರಿಗೆ ಕಾಯುತ್ತಿವೆ ಎಂದೂ ಮಾಹಿತಿ ನೀಡಿದ್ದಾರೆ.