108ರ ವೃದ್ಧೆಯಿಂದ ಮತದಾನ
Team Udayavani, Apr 30, 2019, 2:18 PM IST
ಥಾಣೆ: ಸೋಮವಾರ ತಾಪಮಾನ ಅಧಿಕವಿದ್ದರೂ 108ರ ಹರೆಯದ ವೃದ್ಧೆಯೊಬ್ಬರು ಮತದಾನ ಮಾಡಿ ಎಲ್ಲರಿಗೂ ಮಾದರಿಯಾದರು. ವಿಠಬಾಯಿ ದಾಮೋದರ್ ಪಾಟೀಲ್ ಎಂಬವರು ಬಿಸಿಲ ಝಳವನ್ನು ಲೆಕ್ಕಿಸದೆ ಕೋಪ್ರಿ ಗ್ರಾಮದ ಮತಕಟ್ಟಗೆ ಆಗಮಿಸಿ ಮತದಾನಗೈದು ರಾಜ್ಯದಲ್ಲೇ ಮತದಾನದಗೈದ ಹಿರಿಯ ವೃದ್ಧೆ ಎಂಬ ಹೆಗ್ಗಳಿಕೆ ಪಾತ್ರರಾದರು.
ಮತದಾನಗೈದು ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್ ಅವರು, ಒಳ್ಳೆಯ ಮತ್ತು ಸಮರ್ಥ ಅಭ್ಯರ್ಥಿಯನ್ನು ಹಾಗೂ ಗ್ರಾಮದ ಅಭಿವೃದ್ಧಿಯ ದೃಷ್ಟಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುವವರಿಗೆ ಮತದಾನ ಮಾಡಿದ್ದೇನೆ. ಮತದಾನ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಯುವಪೀಳಿಗೆಗೆ ಕಿವಿಮಾತು ಹೇಳಿದರು.