ಹೈದರಾಬಾದ್ ಅಪಾರ್ಟ್ಮೆಂಟ್ ಲಿಫ್ಟ್ ಗೆ ಸಿಲುಕಿ 12ರ ಬಾಲಕನ ಸಾವು
Team Udayavani, May 25, 2018, 11:32 AM IST
ಹೈದರಾಬಾದ್ : ಬೇಸಗೆ ರಜಾ ದಿನಗಳಲ್ಲಿ ತನ್ನ ಶಿಕ್ಷಣದ ಖರ್ಚಿಗಾಗಿ ಹಣ ಸಂಪಾದಿಸಲು ಪೇಪರ್ ಹಾಕುವ ಹುಡುಗನಾಗಿ ದುಡಿಯುತ್ತಿದ್ದ 12 ವರ್ಷ ಪ್ರಾಯದ, ಆರನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ, ಇಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ಪೇಪರ್ ಹಾಕುವ ಸಲುವಾಗಿ ಲಿಫ್ಟ್ ಏರಿದಾಗ ಲಿಫ್ಟ್ ನ ಕಬ್ಬಿಣದ ಗ್ರಿಲ್ ಮತ್ತು ಗೋಡೆಯ ನಡುವೆ ಸಿಲುಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಲಿಫ್ಟ್ ಗ್ರಿಲ್ ಮತ್ತು ಗೋಡೆಯ ನಡುವೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಆತ ಅದಾಗಾಲೇ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ಮೃತ ಬಾಲಕನು ಪೇಪರ್ ಹಾಕುವ ಕೆಲಸ ಮಾಡಿ ತಿಂಗಳಿಗೆ 1,000 ರೂ. ಸಂಪಾದಿಸುತ್ತಿದ್ದ ಮತ್ತು ಕೂಲಿಕಾರ್ಮಿಕರಾಗಿರುವ ತನ್ನಹೆತ್ತವರಿಗೆ ಆರ್ಥಿಕವಾಗಿ ನೆರವಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಚಿಗುಡ ಪೊಲೀಸ್ ಠಾಣೆ ಪೊಲೀಸರು ನ್ಯೂಸ್ ಪೇಪರ್ ಏಜಂಟ್ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಫಲಿತಾಂಶವನ್ನು ನೋಡಿಕೊಂಡು ಅಪಾರ್ಟ್ಮೆಂಟ್ ಸಂಕೀರ್ಣದ ಮಾಲಕನ ವಿರುದ್ಧವೂ ಕೇಸು ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು