ಟೆಂಪೋ ಮೇಲೆ ಉರುಳಿ ಬಿದ್ದ ಟ್ರಕ್‌: 5 ಮಹಿಳೆಯರು, ಇಬ್ಬರು ಮಕ್ಕಳು ಸೇರಿ 13 ಸಾವು

Team Udayavani, May 20, 2019, 7:23 PM IST

ಮುಂಬಯಿ : ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಮುಂಬಯಿ – ನಾಗಪುರ ಹೆದ್ದಾರಿಯಲ್ಲಿ ಟ್ರಕ್‌ ಒಂದು ಟೆಂಪೋ ಮೇಲೆ ಉರುಳಿ ಬಿದ್ದ ಭೀಕರ ಅಪಘಾತದಲ್ಲಿ ಐವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿ ಒಟ್ಟು 13 ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ.

ಇಂದು ಸೋಮವಾರ ಮಧ್ಯಾಹ್ನ 2.15ರ ಸುಮಾರಿಗೆ ಈ ಅವಘಡ ಮಲ್ಕಾಪುರದಲ್ಲಿ ನಡೆದಿದೆ. ಮೃತರು ಗೂಡಿಟ್ಟಿಗೆ ಕಾರ್ಖಾನೆಯ ಕಾರ್ಮಿಕರಾಗಿದ್ದು ದಿನಸಿ ಸಾಮಗ್ರಿಗಳನ್ನು ಖರೀದಿಸಿ ಅನೂರಾಬಾದ್‌ ಗ್ರಾಮಕ್ಕೆ ಮರಳುತ್ತಿದ್ದರು.

ಟ್ರಕ್‌ ಟೈರ್‌ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ್ದೇ ಈ ಭೀಕರ ಅಪಘಾತಕ್ಕೆ ಕಾರಣವಾಯಿತು. ಟ್ರಕ್‌ ಟೆಂಪೋ ಮೇಲೆ ಉರುಳಿ ಬಿದ್ದ ಕಾರಣ ಅದರೊಳಗಿದ್ದವರ ಪೈಕಿ ಹದಿಮೂರು ಮಂದಿ ಸ್ಥಳದಲ್ಲೇ ಮೃತಪಟ್ಟರು.

ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ದಿಲೀಪ್‌ ಪಾಟೀಲ್‌ ಭುಜಬಲ್‌ ತಿಳಿಸಿದ್ದಾರೆ.

ಮೇ 18ರಂದು ಗುಜರಾತ್‌ ನ ಕಚ್‌ ನಿಂದ ಹೊರಟಿದ್ದ ಟ್ರಕ್‌, 400 ಚೀಲ ಉಪ್ಪನ್ನು ನಾಗಪುರಕ್ಕೆ ಸಾಗಿಸುತ್ತಿತ್ತು. ಮೃತರಲ್ಲಿ ಐವರು ಅನೂರಾಬಾದ್‌ ನವರು; ಆರು ಮಂದಿ ನಗ್ರಾಜಿ ಯವರು ಮತ್ತು ಇಬ್ಬರು ಭೂಸವಾಲ್‌ ನವರು ಎಂದು ಭುಜಬಲ್‌ ತಿಳಿಸಿದರು.

ಅವಘಡದ ಬಳಿಕ ಟ್ರಕ್‌ ಡ್ರೈವರ್‌ ನಾಪತ್ತೆಯಾಗಿದ್ದು ಪೊಲೀಸರು ಆತನಿಗಾಗಿ ಹುಡುಕಾಡುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕನ್ನಡ ದೃಶ್ಯ ಜಗತ್ತನ್ನು ಕಲಾತ್ಮಕವಾಗಿ ಶ್ರೀಮಂತಗೊಳಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ಗಿರೀಶ್‌ ಕಾಸರವಳ್ಳಿ ಕೂಡ ಒಬ್ಬರು. ಚೊಚ್ಚಲ ನಿರ್ದೇಶನ, "ಘಟಶ್ರಾದ್ಧ'...

  • ಬೆಂಗಳೂರು: ರಾಜ್ಯಾದ್ಯಂತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳ ಕಾರ್ಯನಿರ್ವಹಣೆ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ....

  • ರಘುರಾಮನು ವನರಾಮನಾಗಿ ಆರಾಮದಿಂದ ಇದ್ದ ಸ್ಥಳವೇ ಚಿತ್ರಕೂಟ. ರಾಮ, ಲಕ್ಷ¾ಣ, ಸೀತೆಯರ ಚಿತ್ತಾಪಹಾರ ಮಾಡಿದ್ದ ಚಿತ್ರಕೂಟವು ಪ್ರವಾಸಿಗರ ಚಿತ್ತವನ್ನೂ ಅಪಹರಿಸುವಷ್ಟು...

  • ಮಂಗಳೂರು: ಪಾಶ್ಚಾತ್ಯ ಪ್ರಭಾವದಿಂದಾಗಿ ಭಾರತೀಯ ಸಂಗೀತವು ಸ್ವಲ್ಪ ಮಂಕಾಗಿ ಕಂಡರೂ ಮತ್ತೆ ಚಿಗುರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|...

  • ಇಂದು ದೌರ್ಜನ್ಯಗಳಿಗೆ ಮೇರೆಗಳಿಲ್ಲ. ದೆಹಲಿಯಲ್ಲೋ, ಹೈದರಾಬಾದ್‌ನಲ್ಲೋ ಹೆಣ್ಣಿನ ಮೇಲೆ ಹಾಗಾಯ್ತಲ್ಲ ಎನ್ನುತ್ತಾ ಕಳವಳಿಸುತ್ತಿರುವಾಗಲೇ, ಬೆಂಗಳೂರಿನಲ್ಲಿ...