ಅಫ್ಘಾನ್‌ ಪಡೆಗಳ ಭಾರೀ ಕಾರ್ಯಾಚರಣೆ; 16 ತಾಲಿಬಾನ್‌ ಉಗ್ರರ ಹತ್ಯೆ

Team Udayavani, May 14, 2019, 4:27 PM IST

ಫ‌ರಾ:ಅಫ್ಘಾನ್‌ ಪಡೆಗಳು ಮಂಗಳವಾರ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಕನಿಷ್ಠ 16 ಮಂದಿ ತಾಲಿಬಾನ್‌ ಉಗ್ರರನ್ನು ಹತ್ಯೆಗೈದಿವೆ. ಕಾರ್ಯಾಚರಣೆ ವೇಳೆ ಓರ್ವ ಯೋಧ ಹುತಾತ್ಮನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಉಗ್ರರು ಮೊದಲು ಭದ್ರತಾ ಪಡೆಗಳ ಚೆಕ್‌ಪೋಸ್ಟ್‌ ಮೇಲೆ ದಾಳಿ ನಡೆಸಿದ್ದು ಆ ಬಳಿಕ ಸೇನಾ ಪಡೆಗಳು ಪ್ರತಿದಾಳಿ ನಡೆಸಿವೆ.

ಕಾರ್ಯಾಚರಣೆಯಲ್ಲಿ 20 ಕ್ಕೂ ಹೆಚ್ಚು ಉಗ್ರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್‌ ಸೇನಾ ಪಡೆಗಳಮೂಲಗಳು ತಿಳಿಸಿವೆ. ಕಾರ್ಯಾಚರಣೆ ವೇಳೆ 2 ಕಡೆ ನೆಲ ಬಾಂಬ್‌ಗಳನ್ನು ನಿಷ್ಕ್ರೀಯ ಗೊಳಿಸಲಾಗಿದೆ ಎಂದು ಸೇನೆ ತಿಳಿಸಿದೆ.

ಸೇನೆ ಹೇಳಿರುವುದನ್ನು ತಾಲಿಬಾನ್‌ ನಿರಾಕರಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ