16ರ ಹುಡುಗಿಯ ರೇಪ್, ಅತ್ಯಾಚಾರಿಯ ತಂಗಿಯಿಂದ ವಿಡಿಯೋ
Team Udayavani, Feb 27, 2018, 3:39 PM IST
ಮುಜಫರನಗರ : ಹದಿನಾರರ ಹರೆಯದ ಹುಡುಗಿಯನ್ನು 22 ವರ್ಷ ಪ್ರಾಯದ ತರುಣನೋರ್ವ ರೇಪ್ ಮಾಡಿದ್ದು ಅದನ್ನು ಆರೋಪಿ ತರುಣನ ಸಹೋದರಿ ವಿಡಿಯೋ ಮಾಡಿರುವ ಘಟನೆ ಇಲ್ಲಿನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ.
ಆರೋಪಿ ತರುಣನ ಸಹೋದರಿಯು ಹುಡುಗಿಯನ್ನು ತನ್ನ ಮನೆಗೆ ಕರೆದೊಯ್ದಿದ್ದಳು. ಅಲ್ಲಿ ತರುಣನು ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ. ತರುಣನ ಸಹೋದರಿಯು ಈ ಕೃತ್ಯವನ್ನು ವಿಡಿಯೋ ಮಾಡಿ ಬಳಿಕ ಈ ವಿಷಯವನ್ನು ಯಾರಲ್ಲಾದರೂ ಬಾಯಿ ಬಿಟ್ಟರೆ ಪರಿಣಾಮ ನೆಟ್ಟಗಾಗದು ಎಂದು ಬ್ಲಾಕ್ ಮೇಲ್ ಮಾಡಿದ್ದರು.
ಹುಡುಗಿಯು ಧೈರ್ಯವಹಿಸಿ ಪೊಲೀಸರಿಗೆ ದೂರು ನೀಡಿದ್ದು ಅವರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ; ಈ ನಡುವೆ ಪರಾರಿಯಾಗಿರುವ ತರುಣ ಹಾಗೂ ಆತನ ಸಹೋದರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಗಾಜಿಯಾಬಾದ್ನಲ್ಲೂ
ಗಾಜಿಯಾಬಾದ್ನಲ್ಲೂ ಇದೇ ರೀತಿಯ ಘಟನೆ ನಡೆದಿರುವುದು ವರದಿಯಾಗಿದೆ. ಈ ಪ್ರಕರಣದಲ್ಲಿ ಮೆಹತಾಬ್ ಎಂಬ ತರುಣ ಇದೇ ಫೆಬ್ರವರಿ 7ರಂದು ಹೊಟೇಲ್ ಒಂದರಲ್ಲಿ ಹಿಂದೂ ಯುವತಿಗೆ ಅಮಲು ಪಾನೀಯ ಕುಡಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಿ ತನ್ನ ಸಹಚರರಿಂದ ರೇಪ್ ಕೃತ್ಯದ ವಿಡಿಯೋ ಮಾಡಿಸಿಕೊಂಡಿದ್ದ.
“ಮತಾಂತರಗೊಂಡು ನನ್ನನ್ನು ಮದುವೆಯಾಗಬೇಕು; ಇಲ್ಲದಿದ್ದರೆ ರೇಪ್ ವಿಡಿಯೋವನ್ನು ಇಂಟರ್ ನೆಟ್ಗೆ ಹಾಕ್ತೇನೆ’ ಎಂದು ಆತ ಹುಡುಗಿಗೆ ಧಮ್ಕಿ ಹಾಕಿದ್ದ.
ಅದಾಗಿ ಫೆ.15ರಂದು ಮೆಹತಾಬ್ ಮತ್ತೆ ಪುನಃ ಆ ಹುಡುಗಿಯನ್ನು ರೇಪ್ ಮಾಡಿದ್ದ. ಹಿಂದಿನಂತೆ ಪುನಃ ಧಮ್ಕಿ ನೀಡಿದ್ದ. ಆಕೆಯ ಮೊಬೈಲ್ ಕಿತ್ತುಕೊಂಡು ಆಕೆಯನ್ನು ಚಲಿಸುವ ಆಟೋದಿಂದ ಹೊರಕ್ಕೆಸೆದಿದ್ದ.
ಈ ಘಟನೆಯ ಮರುದಿನ ಹುಡುಗಿಯು ಧೈರ್ಯದಿಂದ ಪೊಲೀಸರಿಗೆ ದೂರು ನೀಡಿದಳು. ತನ್ನ ದೂರಿನಲ್ಲಿ ಆಕೆ ಮೆಹತಾಬ್ ಮಾತ್ರವಲ್ಲದೆ ಆತನ ಇಬ್ಬರು ಸಸಚರರ ಹೆಸರನ್ನೂ ದಾಖಲಿಸಿದಳು. ಆ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡು ಮೆಹತಾಬ್ ನನ್ನು ಬಂಧಿಸಿದ್ದಾರೆ ಮತ್ತು ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಸಿಹಾನಿ ಗೇಟ್ ಠಾಣಾಧಿಕಾರಿ ವಿನೋದ್ ಕುಮಾರ್ ಪಾಂಡೆ ತಿಳಿಸಿದರು.