ಮದುವೆಯಾಗಿ 17 ದಿನದ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ! 11 ಮಂದಿ ವಿರುದ್ಧ ದೂರು

2019ರ ಏಪ್ರಿಲ್ 19ರಂದು ಉನ್ನಾವೋದ ಸದಾರ್ ಕೋಟ್ವಾಲಿ ಪ್ರದೇಶದ ಗ್ರಾಮದಲ್ಲಿ ವಿವಾಹವಾಗಿತ್ತು.

Team Udayavani, Jan 15, 2020, 5:15 PM IST

ಲಕ್ನೋ: ಮದುವೆಯಾಗಿ ಹದಿನೇಳು ದಿನ ಕಳೆಯುವುದರಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿರುವ ಪ್ರಕರಣ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಉನ್ನಾವೋದ ಬಂಥಾರಾ ನಿವಾಸಿಯಾಗಿರುವ ಮಹಿಳೆಗೆ 2019ರ ಏಪ್ರಿಲ್ 19ರಂದು ಉನ್ನಾವೋದ ಸದಾರ್ ಕೋಟ್ವಾಲಿ ಪ್ರದೇಶದ ಗ್ರಾಮದಲ್ಲಿ ವಿವಾಹವಾಗಿತ್ತು. ಮತ್ತೊಂದೆಡೆ ಮೇ 6ರಂದು ಮಹಿಳೆ ಮಗುವಿಗೆ ಜನ್ಮ ನೀಡಿದ್ದಳು.

ಮದುವೆಯಾಗಿ 17ದಿನದ ನಂತರ ಮಗುವಿಗೆ ಜನ್ಮ ನೀಡಿದ್ದನ್ನು ಕಂಡ ಅತ್ತೆ, ಮಾವ ಸೊಸೆಯನ್ನು ಪ್ರಶ್ನಿಸಿದ್ದರು. ತನ್ನ ಈ ಸ್ಥಿತಿಗೆ ತಂದೆ, ಪತಿ ಹಾಗೂ ಸೋದರ ಸಂಬಂಧಿ, ಗ್ರಾಮದ ಮಾಜಿ ಮುಂದಾಳು ಸೇರಿದಂತೆ ಹನ್ನೊಂದು ಮಂದಿ 13ನೇ ವಯಸ್ಸಿನಿಂದಲೇ ದೈಹಿಕವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾಳೆ.

ಡಿಸೆಂಬರ್ 28ರಂದು ಸಂತ್ರಸ್ತೆ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ದೂರು ನೀಡಿದ್ದಾಳೆ. ಈ ಘಟನೆ ಬಗ್ಗೆ ಕೂಡಲೇ ತನಿಖೆ ನಡೆಸುವಂತೆ ಎಸ್ಪಿ ಮಹಿಳಾ ಪೊಲೀಸ್ ಠಾಣಾಧಿಕಾರಿ ಸುನೀತಾ ಚೌರಾಸಿಯಾ ಅವರಿಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ನಾಯಿಯನ್ನು ಬಹುವಾಗಿ ಪ್ರೀತಿಸುವವರಿದ್ದಾರೆ. ಕೆಲವರಿಗೆ ಬೀದಿನಾಯಿಯೂ ಮುದ್ದು ಅನ್ನಿಸುವುದುಂಟು. ಇನ್ನು, ನೂರಾರು ಮುದ್ದು ಮುದ್ದು ನಾಯಿಗಳು ಒಂದೆಡೆ ಸೇರಿದರೆ,...

  • ಚೆಂಡು ವಿರೂಪದಂತಹ ಪ್ರಕರಣದ ಬಳಿಕ ಅಪಮಾನ, ಅ ಪನಿಂದನೆಗಳಿಗೆ ಒಳಗಾಗಿದ್ದ ಸ್ಟೀವ್‌ ಸ್ಮಿತ್‌ ಎಲ್ಲವನ್ನೂ ಮರೆತು ಈಗ ಸಹಜ ಸ್ಥಿತಿಗೆ ಮರಳಿದ್ದಾರೆ, ಭಾರತದ ವಿರುದ್ಧ...

  • ಲ್ಯಾಂಡ್‌ಲೈನ್‌ ಸಿಗುವುದೇ ದುಸ್ತರವೆಂದಿದ್ದ ಸಂದರ್ಭದಲ್ಲಿ ಬಂದದ್ದು ಪೇಜರ್‌ ಸೇವೆ. ಅಮೆರಿಕದಲ್ಲಿ ಬಹಳ ಬಳಕೆಯಲ್ಲಿದ್ದ ಈ ತಾಂತ್ರಿಕ ಆವಿಷ್ಕಾರ ಭಾರತದಲ್ಲೂ...

  • ಬೈಂದೂರು: ಹೊಸ ಚಿಂತನೆಗಳು ಯಶಸ್ಸಿಗೆ ಕಾರಣವಾಗುತ್ತವೆ ಮಾತ್ರವಲ್ಲದೆ ಇತರರಿಗೂ ಮಾದರಿಯಾಗುತ್ತದೆ. ಎರಡು ವರ್ಷದ ಹಿಂದೆ ಗ್ರಾಮೀಣ ಭಾಗದ ಶಾಲೆಯೊಂದು ರೂಪಿಸಿದ...

  • ಪ್ರತಿಯೊಬ್ಬರ ಜೀವನದಲ್ಲಿಯೂ ಟರ್ನಿಂಗ್‌ ಪಾಯಿಂಟ್‌ಗಳಿದ್ದೇ ಇರುತ್ತವೆ. ಯಾಕೆಂದರೆ ಪ್ರೇರಣೆ ಎಲ್ಲಿಂದಲೂ ಸಿಗಬಹುದು, ಬದಲಾವಣೆ ಎಲ್ಲಿಂದಲೂ ಆಗಬಹುದು, ಯಾವ...