Udayavni Special

ವಾಗ್ಝರಿ, ಹೈಡ್ರಾಮಾ, ಏಟು- ತಿರುಗೇಟು


Team Udayavani, Jul 21, 2018, 6:00 AM IST

22.jpg

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಪ್ರತಿಪಕ್ಷಗಳು ತಮ್ಮಲ್ಲಿನ ವಿಶ್ವಾಸದ ಕೊರತೆಯಿಂದಾಗಿ ಸರ್ಕಾರವನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫ‌ಲವಾದವು. ಆದರೆ, ಗೊತ್ತುವಳಿ ಕುರಿತು ಲೋಕಸಭೆಯಲ್ಲಿ ಶುಕ್ರವಾರ ನಡೆದ ಬಿರುಸಿನ ಚರ್ಚೆಯು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದಕ್ಕೆ ಸಾಕ್ಷಿಯಾದವು.

  ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಕೇಂದ್ರದ ಹಲವು ಸಚಿವರು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರತಿಪಕ್ಷಗಳು ಹಲವು ನಾಯಕರು ಸದನದಲ್ಲಿ ಮಾತನಾಡಿ, ಏಟು-ತಿರುಗೇಟು ನೀಡುತ್ತಾ ಇಡೀ ದಿನದ ಕಲಾಪವನ್ನು ಕುತೂಹಲಕಾರಿಯಾಗಿಸಿದರು. ಒಟ್ಟಿನಲ್ಲಿ ಶುಕ್ರವಾರದ ಚರ್ಚೆಯು ಘಟಾನುಘಟಿಗಳ ವಾಗ್ಝರಿ, ಹೈಡ್ರಾಮಾ, ವ್ಯಂಗ್ಯೋಕ್ತಿಗಳಿಂದ ತುಂಬಿ ತುಳುಕಿತ್ತು.

ಸಿಖ್‌ ನರಮೇಧವೇ  ದೊಡ್ಡದು
1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ನಡೆದ ಸಿಖ್‌ ಸಮುದಾಯದ ನರಮೇಧ, ಈ ದೇಶದ ಇತಿಹಾಸ ಕಂಡ ಮಹಾ “ಥಳಿತ ಹತ್ಯಾಕಾಂಡ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಗುಡುಗಿದ್ದಾರೆ. ವಾಟ್ಸ್‌ಆ್ಯಪ್‌ ವದಂತಿಗಳ ಪರಿಣಾಮವಾಗಿ, ದೇಶದ ಹಲವಾರು ಕಡೆ ಇತ್ತೀಚೆಗೆ ನಡೆದಿರುವ “ಥಳಿಸಿ ಹತ್ಯೆ’ ಪ್ರಕರಣಗಳನ್ನು ಕೇಂದ್ರ ನಿಯಂತ್ರಣಕ್ಕೆ ತರುತ್ತಿಲ್ಲ ಎಂದು ಪ್ರತಿಪಕ್ಷಗಳು ಮಾಡಿದ ಆರೋಪಕ್ಕೆ ಉತ್ತರಿಸಿದ ಅವರು, ಇಂದಿರಾ ಗಾಂಧಿ ಹತ್ಯೆಯ ನಂತರದ ಹತ್ಯಾಕಾಂಡವನ್ನು ಉದಾಹರಿಸಿದರು. ಅಲ್ಲದೆ, ಸದ್ಯಕ್ಕೆ ನಡೆಯುತ್ತಿರುವ ಥಳಿಸಿ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕುವ ಹೊಣೆಗಾರಿಕೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳದ್ದಾಗಿದ್ದು, ಇವುಗಳ ನಿಗ್ರಹಕ್ಕೆ ಬೇಕಾದ ಅಗತ್ಯ ಬೆಂಬಲವನ್ನು ಕೇಂದ್ರ ನೀಡಲಿದೆ ಎಂದು ಆಶ್ವಾಸನೆ ನೀಡಿದರು.

ಇದೇ ವೇಳೆ, ಶಶಿ ತರೂರ್‌ ಅವರು ಇತ್ತೀಚೆಗೆ “ಬಿಜೆಪಿಯು ಭಾರತವನ್ನು ಹಿಂದೂ ತಾಲಿಬಾನ್‌ ಆಗಿ ಪರಿವರ್ತಿಸಲಿದೆ’ ಎಂದಿದ್ದ ಹೇಳಿಕೆಯನ್ನು ಖಂಡಿಸಿದ ಅವರು, “”ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮಾತ್ರ ಅಲ್ಪಸಂಖ್ಯಾತರು ನೆಮ್ಮದಿಯಿಂದಿದ್ದಾರೆ. ಆದರೆ, ಇದು ಕಾಂಗ್ರೆಸ್ಸಿಗರಿಗೆ ಬೇಕಿಲ್ಲ” ಎಂದು ಛೇಡಿಸಿದರು. ಜತೆಗೆ, ಕಳೆದ 4 ವರ್ಷಗಳಲ್ಲಿ ದೇಶದಲ್ಲಿ ಒಂದೇ ಒಂದು ಉಗ್ರರ ದಾಳಿ ಆಗಿಲ್ಲ ಎಂಬುದು ನೆನಪಿರಲಿ ಎಂದೂ ಹೇಳಿದರು. ರಾಹುಲ್‌ ಅವರ ಮೋದಿಯನ್ನು ತಬ್ಬಿದ್ದನ್ನು ಪ್ರಸ್ತಾಪಿಸಿದ ರಾಜನಾಥ್‌, ಸಂಸತ್‌ನಿಂದಲೇ ಚಿಪ್ಕೋ ಚಳವಳಿ(ಅಪ್ಪಿಕೋ ಚಳವಳಿ) ಆರಂಭವಾದಂತಿದೆ. ನಾನೀಗ ಹೊರಗೆ ಹೋಗಿ ಖರ್ಗೆ ಅವರನ್ನು ಆಲಿಂಗಿಸುತ್ತೇನೆ ಎಂದು ಹೇಳಿದರು. 

ನಿಮ್ಮದು ಒಡೆದು ಆಳುವ ನೀತಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂಸತ್‌ನಲ್ಲಿ ನೇರ ಆರೋಪ ಮಾಡಿದರು. ಅವಿಶ್ವಾಸ ಗೊತ್ತುವಳಿ ಮಂಡಿಸಿರುವ ಟಿಡಿಪಿ ನಿರ್ಧಾರಕ್ಕೆ ತಮ್ಮ ಬೆಂಬಲ ಇದೆ ಎಂದು ಘೋಷಿಸಿದರು.

ಇದೇ ವೇಳೆ ಬಿಜೆಪಿ ಆಡಳಿತ ವೈಖರಿಯ ವಿರುದ್ಧ ತೀವ್ರವಾಗಿಯೇ ವಾಗ್ಧಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ಸಚಿವ ಅನಂತಕುಮಾರ್‌ ಹೆಗಡೆ ಅವರು “ಕಾಲಕ್ಕೆ ತಕ್ಕಂತೆ ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕು’ ಎಂದು ಹೇಳಿರುವ ಹಿನ್ನೆಲೆಯಲ್ಲಿ ನಾವೀಗ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇದೇ ವೇಳೆ, ಚುನಾವಣಾ ಪೂರ್ವ ಭರವಸೆಗಳ ಕುರಿತು ಮಾತನಾಡಿದ ಅವರು, ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ, ಪ್ರಧಾನಿ ಮೋದಿ ವಿಫ‌ಲವಾಗಿದ್ದಾರೆ ಎಂದು ಆರೋಪಿಸಿದರು. ಸ್ವಾಮಿನಾಥನ್‌ ಆಯೋಗದ ಸಲಹೆಗಳನ್ನು ಅನುಷ್ಠಾನಗೊಳಿಸುವುದಾಗಿ ಹೇಳಿ, ಜನತೆಗೆ ಮೋಸ ಮಾಡಿದೆ ಎಂದರು. ರೈತ ಆತ್ಮಹತ್ಯೆಗಳ ಬಗ್ಗೆಯೂ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ವಿದ್ಯುತ್‌ ಸಮಸ್ಯೆ ನೀಗಿಲ್ಲ:18,000 ಹಳ್ಳಿಗಳ ವಿದ್ಯುತ್‌ ಸಮಸ್ಯೆ ನೀಗಿಸಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಬಿಜೆಪಿ ನಾಯಕರೇ ಸಾಕಷ್ಟು ಹಳ್ಳಿಗಳು ಇನ್ನೂ ವಿದ್ಯುತ್‌ ಸಂಪರ್ಕವಿಲ್ಲದೇ ಸಂಕಷ್ಟದಲ್ಲಿದೆ ಎಂದು ಹೇಳುತ್ತಿದ್ದಾರೆ ಎನ್ನುವ ಮೂಲಕ ಕಾಲೆಳೆದರು. ಇದೇ ವೇಳೆ ಲೋಕಪಾಲ ಕಾಯ್ದೆಗೆ ಸಂಬಂಧಿಸಿಯೂ ಪ್ರಧಾನಿ ವಿರುದ್ಧ ಟೀಕೆಗಳ ಸುರಿಮಳೆಗರೆದರು.

ಲೋಕಸಭೆಯಲ್ಲೂ ಕರ್ನಾಟಕ, ಕಣ್ಣೀರು ಪ್ರಸ್ತಾಪ
ಕೇಂದ್ರ ಘೋಷಣೆ ಮಾಡಿದ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕಾಗಿ ದೇಶದ ಎಲ್ಲಾ ರೈತರಿಗಾಗಿ 10 ಸಾವಿರ ಕೋಟಿ ರೂ. ಮೀಸಲಾಗಿ ಇರಿಸಲಾಗಿದೆ. ಆದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ 34 ಸಾವಿರ ಕೋಟಿ ರೂ. ಮೊತ್ತವನ್ನು ರೈತರ ಸಾಲ ಮನ್ನಾ ಮಾಡಿದೆ.
ರಾಹುಲ್‌ ಗಾಂಧಿ ಕಾಂಗ್ರೆಸ್‌ ರಾಷ್ಟಾಧ್ಯಕ್ಷ

ಪ್ರಧಾನಿಯವರೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ. ಲಂಚ ತಿನ್ನಲುವುದಿಲ್ಲ ಮತ್ತು ಇತರರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳಿದ್ದಿರಿ. ಆದರೆ ಕರ್ನಾಟಕದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಗಳನ್ನು ಒಂದೊಂದಾಗಿ ವಜಾಗೊಳಿಸುತ್ತಾ ಬಂದಿದ್ದೀರಿ.
ಜಯದೇವ ಗಲ್ಲ  ಟಿಡಿಪಿ ಸಂಸದ

ಖರ್ಗೆಯವರೇ, ಒಂದು ಕುಟುಂಬದ ಕಾರಣವೇ ನೀವು ಕರ್ನಾಟಕದಲ್ಲಿ ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗ ಲಿಲ್ಲ. ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ಸಿಎಂ ಕುಮಾರ ಸ್ವಾಮಿ ಭಾವುಕತೆಯಿಂದ ಟಿವಿಯಲ್ಲಿ ಮಾತನಾಡಿದ್ದನ್ನು ನಾವೆಲ್ಲಾ ನೋಡಿದ್ದೇವೆ. ನನಗೆ ವಿಷ ಕುಡಿಯುವ ಭಾಸವಾಗುತ್ತಿದೆ ಎಂದು ಹೇಳಿದ್ದನ್ನು ನೋಡಿದ್ದೇವೆ. ಇದೆಲ್ಲ ಕುಟುಂಬದ ಪ್ರಭಾವ.
ರಾಕೇಶ್‌ ಸಿಂಗ್‌ .ಬಿಜೆಪಿ ಸಂಸದ

ಬಿಜೆಪಿ ಕರ್ನಾಟಕದ ವಿಧಾನಸಭೆ ಚುನಾವಣೆಗಳಲ್ಲಿ ಮತ್ತು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಗಳಲ್ಲಿ ಸೋಲನುಭವಿಸಿದೆ.
ಸುಗತ ರಾಯ್‌ ಟಿಎಂಸಿ ಸಂಸದ

“ಜುಮ್ಲಾ’ ಹುಡುಕಾಟ ಕರ್ನಾಟಕ ನಂ. 1
ಮೋದಿಯವರನ್ನು ಟೀಕಿಸುವ ಭರದಲ್ಲಿ ಲೋಕಸಭೆಯಲ್ಲಿ ರಾಹುಲ್‌ ಬಾಯಿಂದ ಉದುರಿದ “ಜುಮ್ಲಾ ಸ್ಟ್ರೈಕ್‌’ ಎಂಬ ನುಡಿಮುತ್ತಿನ ಅರ್ಥವನ್ನು ಅಂತರ್ಜಾಲ ಸರ್ಚ್‌ ಇಂಜಿನ್‌ ಆದ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ್ದು ಕರ್ನಾಟಕದವರು! ರಾಹುಲ್‌ ಅವರು ಈ ಪದ ಉದ್ಗರಿಸಿದ ಬೆನ್ನಲ್ಲೇ ದೇಶದೆಲ್ಲೆಡೆ “ಜುಮ್ಲಾ’ ಅರ್ಥವನ್ನು ಕೋಟ್ಯಂತರ ಮಂದಿ ಅಂತರ್ಜಾಲದಲ್ಲಿ ತೀವ್ರವಾಗಿ ಹುಡುಕಾಡಿದ್ದಾರೆ. ಕರ್ನಾಟಕದಲ್ಲಿ ಪ್ರತಿ ಗಂಟೆಗೆ ಸರಾಸರಿ 100 ಜನರಂತೆ ಈ ಪದದ ಅರ್ಥ ಹುಡುಕಾಡಿದ್ದರೆ, ತಮಿಳುನಾಡಿನಲ್ಲಿ 64, ತೆಲಂಗಾಣದಲ್ಲಿ 62, ಕೇರಳದಲ್ಲಿ 57 ಜನರು ಈ ಪದಕ್ಕೆ ಅರ್ಥ ಹುಡುಕಿದ್ದಾರೆ.

ರಾಹುಲ್‌ ಗಾಂಧಿ ಕಣ್ಣು ಹೊಡೆದ ವಿಚಾರ ಗೊತ್ತಾಗುತ್ತಿದ್ದಂತೆ, ನಾನು ಅದನ್ನು ನೋಡಲು ಕಾಲೇಜಿನಿಂದ ಓಡಿಬಂದೆ. ಅದೊಂದು ಉತ್ತಮ ವರ್ತನೆ. ನಾನು ಸಿನಿಮಾದಲ್ಲಿ ಮಾಡಿದ್ದ ಕಣ್ಸ್ ನ್ನೆಯನ್ನು ರಾಹುಲ್‌ ಕಾಪಿ ಮಾಡಿದ್ದು ಗೊತ್ತಾಗಿ, ನನಗಂತೂ ತುಂಬಾ ಸಂತೋಷವಾಯಿತು.
ಪ್ರಿಯಾ ಪ್ರಕಾಶ್‌ ವಾರಿಯರ್‌, ಮಲಯಾಳಿ ನಟಿ

ಪ್ರತಿ ಕ್ಷೇತ್ರದಲ್ಲಿಯೂ ಬಿಜೆಪಿ ವಿರುದ್ಧ ಹೋರಾಟ: ಟಿಎಂಸಿ
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಲಿದೆ. ಒಂದೊಂದು ಲೋಕಸಭಾ  ಕ್ಷೇತ್ರಗಳಲ್ಲಿ ಯೂ ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಕೈಜೋಡಿಸಲಿವೆ ಎಂದು ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಟಿಎಂಸಿ ನಾಯಕ ಸುಗತ ರಾಯ್‌ ಹೇಳಿದ್ದಾರೆ. ಆಡಳಿತ ಪಕ್ಷ ಈಗಾಲೇ ದೇಶದ ಜನರ ಮತ್ತು ಮೈತ್ರಿಕೂಟದ ಪಕ್ಷಗಳ ವಿಶ್ವಾಸ ಕಳೆದುಕೊಂಡಿದೆ ಎಂದರು. ಎನ್‌ಡಿಎ ತೊರೆದ ಟಿಡಿಪಿ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ. ಸರ್ಕಾರದಲ್ಲಿಯೇ ಇರುವ ಶಿವಸೇನೆ ಪ್ರಕ್ರಿಯೆಯನ್ನು ಬಹಿಷ್ಕರಿಸಿದೆ. ಮಾಜಿ ಮೈತ್ರಿ ಪಕ್ಷ ಬಿಜೆಡಿ ಸದನದಿಂದ ಹೊರ ನಡೆದಿದೆ. ಈ ಅಂಶಗಳು ಮೈತ್ರಿಕೂಟ ಜನಪ್ರಿಯತೆ ಕಳೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿ ಎಂದು ರಾಯ್‌ ಹೇಳಿದ್ದಾರೆ. 

ಅವಿಶ್ವಾಸ ಮಂಡನೆಯಂಥ ಗಂಭೀರ ಸನ್ನಿವೇಶದಲ್ಲಿ ವಿಪಕ್ಷದ ನಾಯಕ ರಾಹುಲ್‌ ಗಾಂಧಿ, ತಮ್ಮ ಭಾಷಣ ಮಧ್ಯೆ ಮೋದಿಯವರನ್ನು ಅಪ್ಪಿಕೊಂಡಿದ್ದು ಹಾಸ್ಯಾಸ್ಪದ. ಲೋಕಸಭೆಗೆ ಅವರೇನಾದರೂ ನಶೆಯ ಪದಾರ್ಥ ಸೇವಿಸಿ ಬಂದಿದ್ದರೇ?
ಹರ್‌ಸಿಮ್ರತ್‌ ಕೌರ್‌ ಬಾದಲ್‌, ಕೇಂದ್ರ ಸಚಿವೆ

ಟ್ವಿಟಾಪ‌ತಿ
ಮೋದಿಯವರು ಎಲ್ಲರಿಗೂ ನೀಡುತ್ತಿದ್ದ ಅಪ್ಪುಗೆಯ ಬಿಸಿ ಇಂದು ರಾಹುಲ್‌ ಅವರಿಂದ ಅವರಿಗೇ ಸಿಕ್ಕಿದೆ. 
ಅಂಕುರ್‌ ಸಿಂಗ್‌

ಮೋದಿಯವರ “ಹಗ್‌ಪ್ಲೋಮಸಿ’ ಶಿಷ್ಟಾಚಾರಗಳ ಸರಣಿಗೆ ರಾಹುಲ್‌ ಇಂದು ಹೊಸ ಅಧ್ಯಾಯ ಸೇರ್ಪಡೆಗೊಳಿಸಿದ್ದಾರೆ. 
ಕೆ. ಚಂದ್ರಕುಮಾರ್‌

ಇತಿಹಾಸದಲ್ಲಿ ಅತ್ಯಂತ ಬಲವಂತದ ಅಪ್ಪುಗೆ ಎಂದೆನಿಸುತ್ತಿದೆ. ರಾಹುಲ್‌ ಅವರೇ ಮೋದಿಯವರ ಒಪ್ಪಿಗೆ ಪಡೆದು ಅಪ್ಪಿದಿರಾ? ಹೇಳಿ? 
ಪ್ರಿಯಾಂಕಾ ಬನ್ಸಾಲ್‌

ಪ್ರಿಯಾ ವಾರಿಯರ್‌ ಅವರೇ ನಿಮಗೆ ರಾಹುಲ್‌ ಅವರಿಂದ ತೀವ್ರ ಸ್ಪರ್ಧೆ ಎದುರಾಗಿದೆ. ನೀವೀಗ ಪೈಪೋಟಿ ನೀಡಲೇಬೇಕು.
ವಿಪಿನ್‌ ವಿಜಯನ್‌

ಫ್ರಾನ್ಸ್‌ ಬಳಿಕ ಕ್ರೊಯೇಷಿಯಾ ಕೂಡ ರಾಹುಲ್‌ ಗಾಂಧಿ ವಿರುದ್ಧ ಹೇಳಿಕೆ ಬಿಡುಗಡೆ ಮಾಡಿದೆ. ಸ್ವಯಂ ಗೋಲ್‌ ಅನ್ನು ಖಂಡಿಸಿದೆ.
ಪೋಲೋ

ಟಾಪ್ ನ್ಯೂಸ್

hyt

ಹುಬ್ಬಳ್ಳಿ: ಅರಣ್ಯ ಇಲಾಖೆ ನಿದ್ದೆಗೆಡಿಸಿದ ಚಿರತೆ

ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು : ಮೂವರಿಗೆ ಗಾಯ

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು ; ಮೂವರಿಗೆ ಗಾಯ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ನವಜೋತ್ ಸಿಧು ಪಾಕ್ ಪ್ರೇಮಿ, ದೇಶದ್ರೋಹಿ: ಸಿಂಗ್ ಆರೋಪಕ್ಕೆ ಸೋನಿಯಾ, ರಾಹುಲ್ ಮೌನವೇಕೆ?

ನವಜೋತ್ ಸಿಧು ಪಾಕ್ ಪ್ರೇಮಿ, ದೇಶದ್ರೋಹಿ: ಸಿಂಗ್ ಆರೋಪಕ್ಕೆ ಸೋನಿಯಾ, ರಾಹುಲ್ ಮೌನವೇಕೆ?

ಮೂಲಸೌಕರ್ಯಗಳ ಕೊರತೆ ಮತ್ತು ನವೀಕರಣ ಮಾಡದ ಹಿನ್ನೆಲೆ : ಅಧಿಕಾರಿಗಳಿಂದ ಸಿಟಿ ಆಸ್ಪತ್ರೆಗೆ ಬೀಗ

ಮೂಲಸೌಕರ್ಯಗಳ ಕೊರತೆ : ಅಧಿಕಾರಿಗಳಿಂದ ಗಂಗಾವತಿಯ ಸಿಟಿ ಆಸ್ಪತ್ರೆಗೆ ಬೀಗ

ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ : ಸ್ಥಳೀಯರ ವಿರೋಧ

ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ : ಸ್ಥಳೀಯರ ವಿರೋಧ

shruthi

ಭಜರಂಗಿಯಲ್ಲಿ ರಗಡ್‌ ಶ್ರುತಿ: ಹೆಚ್ಚಾಗುತ್ತಿದೆ ಸಿನಿಮಾ ನಿರೀಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೊದಲ ದಲಿತ ಮುಖ್ಯಮಂತ್ರಿ; ಪಂಜಾಬ್ ಸಿಎಂ ಆಗಿ ಚರಣಜಿತ್ ಪ್ರಮಾಣವಚನ ಸ್ವೀಕಾರ

ಮೊದಲ ದಲಿತ ಮುಖ್ಯಮಂತ್ರಿ; ಪಂಜಾಬ್ ಸಿಎಂ ಆಗಿ ಚರಣಜಿತ್ ಪ್ರಮಾಣವಚನ ಸ್ವೀಕಾರ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 30,256 ಕೋವಿಡ್ ಪ್ರಕರಣ ಪತ್ತೆ, 26,711 ಮಂದಿ ಗುಣಮುಖ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 30,256 ಕೋವಿಡ್ ಪ್ರಕರಣ ಪತ್ತೆ, 26,711 ಮಂದಿ ಗುಣಮುಖ

charanjit singh channi

ಪಂಜಾಬ್ ನೂತನ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ವಿರುದ್ಧ ಮೀಟೂ ಆರೋಪ

Untitled-1

ವಿದೇಶಿಯರಿಗೆ ಶೀಘ್ರ ಗ್ರೀನ್‌ಸಿಗ್ನಲ್‌

ವಿಮಾನ ಟಿಕೆಟ್‌ ದರ ನಿಯಂತ್ರಣ ಅವಧಿ ಇಳಿಕೆ

ವಿಮಾನ ಟಿಕೆಟ್‌ ದರ ನಿಯಂತ್ರಣ ಅವಧಿ ಇಳಿಕೆ

MUST WATCH

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು

udayavani youtube

ನದಿಗೆ ಹಾರಿ ಎರಡು ದಿನ ಕಳೆದರೂ ಪತ್ತೆಯಾಗದ ದೇಹ : ಶೋಧ ಕಾರ್ಯ ಮುಂದುವರಿಕೆ

udayavani youtube

ಚರಣ್ ಜಿತ್ ಸಿಂಗ್ ಛನ್ನಿ ಪಂಜಾಬ್ ನೂತನ ಮುಖ್ಯಮಂತ್ರಿ|UDAYAVANI NEWS BULLETIN|19/9/2021

udayavani youtube

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

ಹೊಸ ಸೇರ್ಪಡೆ

hyt

ಹುಬ್ಬಳ್ಳಿ: ಅರಣ್ಯ ಇಲಾಖೆ ನಿದ್ದೆಗೆಡಿಸಿದ ಚಿರತೆ

covid news

ಆರೋಪಕ್ಕೆ ತಲೆಬಾಗದೆ ಲಸಿಕೆ ಮುಂದುವರಿಸಿ

ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು : ಮೂವರಿಗೆ ಗಾಯ

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು ; ಮೂವರಿಗೆ ಗಾಯ

bangalore news

ಒಂದೂವರೆ ವರ್ಷದ ನಂತರ ಗರಿಷ್ಟ ಪ್ರಯಾಣಿಕರು

ಕೃಷಿ ಪುನರುತ್ಥಾನಕ್ಕೆ ಮೋದಿ ಸಂಕಲ್ಪ, ತೆಂಗಿನ ಮೌಲ್ಯವರ್ಧನೆಗೆ ಪೂರಕ ಕ್ರಮ: ಶೋಭಾ ಕರಂದ್ಲಾಜೆ

ಕೃಷಿ ಪುನರುತ್ಥಾನಕ್ಕೆ ಪ್ರಧಾನಿ ಸಂಕಲ್ಪ, ತೆಂಗಿನ ಮೌಲ್ಯವರ್ಧನೆಗೆ ಕ್ರಮ : ಶೋಭಾ ಕರಂದ್ಲಾಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.