ಪ್ರೀತಿಸಿ ಕೈಕೊಟ್ಟಾಕೆ ಮನೆಮುಂದೆ ಕಚ್ಚಾ ಬಾಂಬ್ ಸ್ಫೋಟ: ಲವರ್ ಸೆರೆ
Team Udayavani, Aug 11, 2018, 5:44 PM IST
ಪುಣೆ : ತನ್ನೊಂದಿಗಿನ ಪ್ರೇಮ-ಕಾಮ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ತಾನು ಪ್ರೀತಿಸಿದ ಹದಿಹರೆಯದ ಹುಡುಗಿ ಘೋಷಿಸಿದ ಕಾರಣಕ್ಕೆ ಕ್ರುದ್ದನಾದ ಆಕೆಯ 20ರ ಹರೆಯದ ಲವರ್, ತನ್ನ ಸ್ನೇಹಿತನ ನೆರವು ಪಡೆದು, ಕಚ್ಚಾ ಬಾಂಬ್ ತಯಾರಿಸಿ, ಹುಡುಗಿಯ ಮನೆ ಮುಂದೆ ಸ್ಫೋಟಿಸಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಿಂಘದ್ ನ ಧಾಯರೀ ಎಂಬಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 8ರಂದು ನಡೆದಿದ್ದ ಈ ಘಟನೆಯ ಆರೋಪಿಗಳಾಗಿರುವ ಕಿಶೋರ್ ಮೋದಕ್ ಮತ್ತು ಆತನ ಸ್ನೇಹಿತ ಅಕ್ಷಯ್ ಸೋಮವಂಶಿ (24) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಸಿಟಿವಿಯಲ್ಲಿ ದಾಖಲಾಗಿದ್ದ ಕಚ್ಚಾ ಬಾಂಬ್ ಸ್ಫೋಟ ಕೃತ್ಯದ ಚಿತ್ರಿಕೆಯನ್ನು ಆಧರಿಸಿ ಪೊಲೀಸರು ಇವರನ್ನು ಗುರುತಿಸಿ, ಪತ್ತೆ ಹಚ್ಚಿ, ಬಂಧಿಸಿದರು. ತನ್ನ ಪ್ರಿಯತಮೆ ತನಗೆ ಕೈಕೊಟ್ಟ ಕಾರಣ ಹತಾಶನಾಗಿ ತಾನು ಈ ಕೃತ್ಯ ಎಸಗಿದೆ ಎಂದು ಕಿಶೋರ್ ಮೋದಕ್ ಪೊಲೀಸರಲ್ಲಿ ಬಾಯಿ ಬಿಟ್ಟಿದ್ದಾನೆ.
ಕಿಶೋರ್ ತನ್ನ ಗೆಳೆಯ ಅಕ್ಷಯ್ ಜತೆಗೆ ಕಚ್ಚಾ ಬಾಂಬ್ ತಯಾರಿಸಲು ಅಗತ್ಯವಿದ್ದ ಗನ್ ಪೌಡರ್ ಅನ್ನು ಸುಡುಮದ್ದು ತಯಾರಕರಿಂದ ಖರೀದಿಸಿದ್ದ. ಜತೆಗೆ ಬಾಲ್ ಬೇರಿಂಗ್ ಮತ್ತು ಸೀಲ್ಯಾಂಟ್ ಕೂಡ ಖರೀದಿಸಿದ್ದ.
ಇವುಗಳನ್ನು ಸಣ್ಣದೊಂದು ಪೆಟ್ಟಿಗೆಯಲ್ಲಿ ಅಚ್ಚುಕಟ್ಟಾಗಿ ಭದ್ರ ಪಡಿಸಿ ಅದನ್ನು ತನಗೆ ಕೈಕೊಟ್ಟ ಪ್ರಿಯತಮೆಯ ಮನೆಯ ಎದುರು ಸ್ಫೋಟಿಸಿದ್ದ. ಪರಿಣಾಮವಾಗಿ ನೆರೆಕರೆಯವರ ಮನೆಯ ಕಿಟಕಿ ಗಾಜುಗಳು ಪುಡಿಯಾಗಿದ್ದವು. ಇದೊಂದು ಭಯೋತ್ಪಾದಕರ ಕೃತ್ಯವೆಂದು ಭಾವಿಸಿದ ಸ್ಥಳೀಯರು ಭಯಭೀತರಾಗಿದ್ದರು.
ಸ್ಫೋಟದ ಬಗ್ಗೆ ಜನರು ಪೊಲೀಸರಿಗೆ ಒಡನೆಯೇ ದೂರು ಕೊಟ್ಟಾಗ ಅವರು ತನಿಖೆ ಆರಂಭಿಸಿ ಸ್ಥಳದಲ್ಲಿನ ಸಿಸಿಟಿವಿ ಚಿತ್ರಿಕೆಗಳನ್ನು ವೀಕ್ಷಿಸಿದರು. ಆಗಲೇ ಅವರಿಗೆ ಈ ಕೃತ್ಯ ಯಾರದ್ದೆಂದು ಗೊತ್ತಾಯಿತು. ಅಂತೆಯೇ ಅವರು ಕಿಶೋರ್ ಮತ್ತು ಅಕ್ಷಯ್ ನನ್ನು ಬಂಧಿಸಿದರು.
ಪೊಲೀಸರೀಗ ಬಂಧಿತರಿಬ್ಬರ ವಿರುದ್ಧ ಐಪಿಸಿ ಸೆ.286ರ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋವಾದಲ್ಲಿ ಕ್ರೈಸ್ತ ಪಾದ್ರಿ ಬಂಧನ : ಮತಾಂತರ ಸಹಿಸುವುದಿಲ್ಲ ಎಂದ ಸಿಎಂ ಸಾವಂತ್
ರಾಜ್ಯಗಳ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ: ಉಪರಾಷ್ಟ್ರಪತಿ ನಾಯ್ಡು
ಆನ್ಲೈನ್ನಲ್ಲಿ ಪ್ರೀತಿ, ಮದುವೆ : 12 ಲಕ್ಷ ರೂ ವಂಚಿಸಿದ ಮೂರು ಮಕ್ಕಳ ತಾಯಿ
ಮಿಜೋರಾಂ: ವಿದೇಶಕ್ಕೆ ಕಳ್ಳಸಾಗಾಣಿಕೆಯಾಗುತ್ತಿದ್ದ 468 ವನ್ಯಜೀವಿಗಳ ರಕ್ಷಣೆ
ಮಹಾರಾಷ್ಟ್ರದಲ್ಲಿ ಬಿ.ಎ.4 ಮತ್ತು ಬಿ.ಎ.5 ಒಮಿಕ್ರಾನ್ ರೂಪಾಂತರಿ ಪತ್ತೆ