ಲಕ್ನೋ : 2 ಹೊಟೇಲ್ಗಳಲ್ಲಿ ಬೆಂಕಿ; ಇಬ್ಬರ ಸಾವು; ನಾಲ್ವರು ಗಂಭೀರ
Team Udayavani, Jun 19, 2018, 11:24 AM IST
ಲಕ್ನೋ : ಇಲ್ಲಿನ ಚಾರ್ಬಾಗ್ ಪ್ರದೇಶದಲ್ಲಿನ ಎರಡು ಹೊಟೇಲ್ಗಳಲ್ಲಿ ಇಂದು ನಸುಕಿನ ಆರು ಗಂಟೆಯ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಮಡಿದು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.
ಲಕ್ನೋ ಪಶ್ಚಿಮ ಪೊಲೀಸ್ ಸುಪರಿಂಟೆಂಡೆಂಟ್ ವಿಕಾಸ್ ಚಾಂದ್ ಅವರು ಈ ಅಗ್ನಿ ಅವಘಡದಲ್ಲಿ ಇಬ್ಬರು ಸತ್ತಿರುವುದನ್ನು ದೃಢಪಡಿಸಿದರು. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿರುವುದಾಗಿ ತಿಳಿಸಿದರು.
ಪೊಲೀಸರ ಪ್ರಕಾರ ಈ ಅವಳಿ ಹೊಟೇಲ್ ಬೆಂಕಿ ದುರಂತದಲ್ಲಿ ಮೃತರ ಸಂಖ್ಯೆ ಇನ್ನೂ ಹೆಚ್ಚುವ ಭೀತಿ ಇದೆ.