ಕೊಚ್ಚಿ:ಪನಾಮಾ ಹಡಗು ಢಿಕ್ಕಿಯಾಗಿ ಮೀನುಗಾರರಿಬ್ಬರ ಸಾವು,ಹಲವರಿಗೆ ಗಾಯ
Team Udayavani, Jun 11, 2017, 12:43 PM IST
ಕೊಚ್ಚಿ : ಇಲ್ಲಿನ ಕಡಲಿನಲ್ಲಿ ಭಾನುವಾರ ನಸುಕಿನ 2 ಗಂಟೆಯ ವೇಳೆ ಪನಾಮಾದ ಹಡಗೊಂದು ಕೇರಳದ ಮೀನುಗಾರರ ದೋಣಿಗೆ ಢಿಕ್ಕಿಯಾದ ಪರಿಣಾಮ ಇಬ್ಬರು ಮೀನುಗಾರರು ಸಾವನ್ನಪ್ಪಿ, 11 ಮಂದಿ ಗಂಭೀರವಾಗಿ ಗಾಯಗೊಂಡ ದುರ್ಘಟನೆ ನಡೆದಿದೆ.
ಹಡಗು ಢಿಕ್ಕಿಯಾದ ಕೂಡಲೇ ಪರಾರಿಯಾಗಿದ್ದು, ಇನ್ನೊಂದು ಮೀನುಗಾರಿಕಾ ದೋಣಿಯ ಸಿಬಂದಿಗಳು ಜಖಂಗೊಂಡ ಮೀನುಗಾರನ್ನು ರಕ್ಷಿಸಿದ್ದಾರೆ.ಅವಘಡದಲ್ಲಿ ಓರ್ವ ಮೀನುಗಾರ ನಾಪತ್ತೆಯಾಗಿದ್ದಾನೆ. ಕಾರ್ಯಾಚರಣೆಗಿಳಿದ ಕರಾವಳಿ ರಕ್ಷಣಾ ಪಡೆಗಳು ಸಮುದ್ರದಲ್ಲಿ ಭಾರೀ ಶೋಧ ನಡೆಸಿ ಪನಾಮಾದ ಅಂಬೆರ್ ಹಡನ್ನು ಸಿಬಂದಿಗಳ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗಾಯಾಳುಗಳನ್ನು ಕೊಚ್ಚಿಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ನಾಪತ್ತೆಯಾದ ಮೀನುಗಾರನ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
2012ರ ಫೆಬ್ರವರಿಯಲ್ಲಿ ಇಟಲಿಯ ಆಯಿಲ್ ಸಾಗಿಸುತ್ತಿದ್ದ ಹಡಗಿನಲ್ಲಿದ್ದ ಸಿಬಂದಿಗಳು ಇಬ್ಬರು ಮೀನುಗಾರರನ್ನು ಹತ್ಯೆಗೈದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ
ಭದ್ರತಾಲೋಪ? ತಮಿಳುನಾಡಿನಲ್ಲಿ ಬಿಜೆಪಿ ಮುಖಂಡನ ಹತ್ಯೆ, ಎಐಡಿಎಂಕೆ ಆಕ್ರೋಶ
ಮತ್ತೊಂದು ಶಾಕ್: ಹಿರಿಯ ನಾಯಕ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ಗುಡ್ ಬೈ, ಎಸ್ಪಿ ಬೆಂಬಲ
ಮತ್ತೆ ಪ್ರಧಾನಿ ಮೋದಿ ಭೇಟಿ ತಪ್ಪಿಸಿಕೊಂಡ ತೆಲಂಗಾಣ ಸಿಎಂ ಕೆಸಿಆರ್
IPL ಬೆಟ್ಟಿಂಗ್: ಠೇವಣಿದಾರರ ಹಣ ಬಳಸಿ 1 ಕೋಟಿ ರೂ. ಕಳೆದುಕೊಂಡ ಪೋಸ್ಟ್ ಮಾಸ್ಟರ್, ಬಂಧನ!