ಕುಲ್ಗಾಮ್ : ಎನ್ ಕೌಂಟರ್ ವೇಳೆ ಶರಣಾದ ಇಬ್ಬರು ಸ್ಥಳೀಯ ಉಗ್ರರು
Team Udayavani, Jul 6, 2022, 3:33 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ನಡೆದ ಎನ್‌ಕೌಂಟರ್ ವೇಳೆ ಇಬ್ಬರು ಸ್ಥಳೀಯ ಉಗ್ರರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಹಡಿಗಾಂ ಪ್ರದೇಶದಲ್ಲಿ ರಾತ್ರಿ ವೇಳೆ ಎನ್‌ಕೌಂಟರ್ ಆರಂಭವಾಗಿದ್ದು, ಪೋಷಕರು ಮತ್ತು ಪೊಲೀಸರ ಮನವಿ ಮೇರೆಗೆ ಉಗ್ರರು ಪಡೆಗಳ ಮುಂದೆ ಶರಣಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ ಕೌಂಟರ್ ಸಮಯದಲ್ಲಿ ಇಬ್ಬರು ಸ್ಥಳೀಯ ಭಯೋತ್ಪಾದಕರು ಅವರ ಪೋಷಕರು ಮತ್ತು ಪೊಲೀಸರ ಮನವಿಯ ಮೇರೆಗೆ ಶರಣಾಗಿದ್ದಾರೆ. ದೋಷಾರೋಪಣೆಯ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ,” ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.