ಪಾಕ್ ಯುದ್ಧ ವಿಮಾನ ಪತ್ತೆ
Team Udayavani, Mar 14, 2019, 12:30 AM IST
ನವದೆಹಲಿ: ಮಂಗಳವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯಿಂದ ಸಮೀಪದಲ್ಲಿ ಪಾಕಿಸ್ತಾನದ ಎರಡು ಯುದ್ಧ ವಿಮಾನಗಳು ಹಾರಾಡಿರುವುದು ಪತ್ತೆಯಾಗಿದೆ.
ಈ ಯುದ್ಧ ವಿಮಾನಗಳು ಭಾರಿ ಸದ್ದಿನೊಂದಿಗೆ ಹಾರಾಡಿದ್ದು ಈ ಭಾಗದಲ್ಲಿ ಕೆಲ ಹೊತ್ತು ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ವಾಯುಪಡೆ ತೀಕ್ಷ್ಣ ನಿಗಾ ವಹಿಸಿದೆ. ವಿಮಾನಗಳು ಅತಿ ವೇಗದಲ್ಲಿ, ಭಾರತದ ಗಡಿಯಿಂದ ಸುಮಾರು 10 ಕಿ.ಮೀ ದೂರದಲ್ಲಿ ಹಾರಾಟ ನಡೆಸಿದ್ದರಿಂದ, ಈ ಪ್ರಮಾಣದಲ್ಲಿ ಕರ್ಕಶ ಶಬ್ದ ಉಂಟಾಗಿದೆ ಎಂದು ಹೇಳಲಾಗಿದೆ. ಅಮೆರಿಕದಿಂದ ಕೊಡಮಾಡಲ್ಪಟ್ಟ ಎಫ್-16 ಯುದ್ಧ ವಿಮಾನಗಳನ್ನು ಪಾಕ್ ಈಗಾಗಲೇ ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ.
ಫೆ.26ರಂದು ಬಾಲಕೋಟ್ನಲ್ಲಿ ದಾಳಿ ನಡೆಸಿದ್ದರಿಂದ ಐಎಎಫ್ ಈಗಲೂ ಕಟ್ಟೆಚ್ಚರದಲ್ಲಿದೆ. ಪಾಕಿಸ್ತಾನ ಇನ್ನೂ ಕೂಡ ಭಾರತದ ಮೇಲೆ ದಾಳಿ ನಡೆಸಬಹುದಾದ ಸಾಧ್ಯತೆಯಿದ್ದು, ಹೀಗಾಗಿ ಗಡಿಯಲ್ಲಿ ಎಲ್ಲ ರಾಡಾರ್ಗಳು ಮತ್ತು ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.
ಈ ಮಧ್ಯೆ, ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆಯಾಗಿದ್ದು, ಪೂಂಚ್ನಲ್ಲಿ ನಡೆಯುತ್ತಿದ್ದ ಎರಡೂ ದೇಶಗಳ ನಡುವಿನ ವ್ಯಾಪಾರವನ್ನು ಸ್ಥಗಿತ ಮಾಡಲಾಗಿದೆ. ಪಾಕ್ನ ಶೆಲ್ ದಾಳಿಯಿಂದಾಗಿ ವ್ಯಾಪಾರ ನಡೆಸಲಾಗುತ್ತಿದ್ದ ಸೌಲಭ್ಯ ಕೇಂದ್ರಕ್ಕೆ ಧಕ್ಕೆಯಾದ ಕಾರಣದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಯಾವುದೇ ಜೀವ ಹಾನಿಯಾಗದಿದ್ದರೂ, ಕೇಂದ್ರದ ಸುತ್ತಮುತ್ತ ಭಯದ ವಾತಾವರಣ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ