ಗಡಿಯಲ್ಲಿ ನಿಲ್ಲದ ಪಾಕ್ ಅಟ್ಟಹಾಸ: ಕದನವಿರಾಮ ಉಲ್ಲಂಘಿಸಿ ದಾಳಿ, ಇಬ್ಬರು ಯೋಧರು ಹುತಾತ್ಮ
ಪ್ರೇಮ್ ಬಹದೂರ್ ಖತ್ರಿ ಮತ್ತು ಸುಖ್ ಬೀರ್ ಸಿಂಗ್ ಸೇರಿದಂತೆ ಇಬ್ಬರು ಧೈರ್ಯಶಾಲಿಗಳು
Team Udayavani, Nov 27, 2020, 3:49 PM IST
ಜಮ್ಮು-ಕಾಶ್ಮೀರ: ಗಡಿಭಾಗದಲ್ಲಿ ಪಾಕಿಸ್ತಾನದ ಪುಂಡಾಟಿಕೆ ಮುಂದುವರಿದಿದ್ದು, ಗಡಿನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕ್ ಪಡೆ ನಡೆಸಿದ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾದ ಘಟನೆ ಶುಕ್ರವಾರ(ನವೆಂಬರ್ 27, 2020) ರಜೌರಿಯ ಸುದೇರ್ ಬನಿ ಪ್ರದೇಶದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಜೌರಿ ಜಿಲ್ಲೆಯ ಸುದೇರ್ ಬನಿ ಸೆಕ್ಟರ್ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಪ್ರಚೋದನಕಾರಿಯಾಗಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುವುದನ್ನು ಮುಂದುವರಿಸಿದೆ.
ಜಮ್ಮು-ಕಾಶ್ಮೀರ ಮೂಲದ ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇದರ್ ಆನಂದ್ ಮಾಧ್ಯಮಕ್ಕೆ ತಿಳಿಸಿರುವಂತೆ, ಶತ್ರು ದೇಶದ ಸೇನೆ ದಾಳಿ ನಡೆಸಿದ ವೇಳೆ ಕೂಡಲೇ ಪ್ರತಿಕ್ರಿಯೆ ನೀಡಬೇಕಾಗಿದ್ದು, ಅವರ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಪಾಕ್ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ನಾಯಕ್ ಪ್ರೇಮ್ ಬಹದೂರ್ ಖತ್ರಿ ಮತ್ತು ರೈಫಲ್ ಮ್ಯಾನ್ ಸುಖ್ ಬೀರ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೃಷಿ ನೀತಿಗೆ ವಿರೋಧ: ಬೃಹತ್ ಪ್ರತಿಭಟನೆ- ಆರು ರಾಜ್ಯಗಳ ರೈತರಿಗೆ ದೆಹಲಿ ಪ್ರವೇಶಿಸಲು ಅನುಮತಿ
ಪ್ರೇಮ್ ಬಹದೂರ್ ಖತ್ರಿ ಮತ್ತು ಸುಖ್ ಬೀರ್ ಸಿಂಗ್ ಸೇರಿದಂತೆ ಇಬ್ಬರು ಧೈರ್ಯಶಾಲಿಗಳು ಮತ್ತು ಪ್ರಾಮಾಣಿಕ ಸೈನಿಕರಾಗಿದ್ದರು ಎಂದು ದೇವೇಂದ್ರ್ ಆನಂದ್ ತಿಳಿಸಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೆರಮ್ ಇನ್ಸ್ ಟಿಟ್ಯೂಟ್ ಅಗ್ನಿ ಅವಘಡದಲ್ಲಿ ಐವರು ದುರ್ಮರಣ, ಘಟನೆ ಬಗ್ಗೆ ತನಿಖೆಗೆ ಆದೇಶ
ಸೀಶೆಲ್ಸ್, ಮಯಾನ್ಮಾರ್ ದೇಶಗಳಿಗೆ ಭಾರತದ ಕೋವಿಡ್ ಲಸಿಕೆ ರವಾನೆ
ಪುಣೆಯ ಕೋವಿಶೀಲ್ಡ್ ಉತ್ಪಾದನಾ ಸೀರಂ ಇನ್ಸ್ ಟಿಟ್ಯೂಟ್ ನಲ್ಲಿ ಭಾರೀ ಬೆಂಕಿ ಅನಾಹುತ
‘ಪರಾಕ್ರಂ ದಿವಸ್’ ಆಚರಣೆಗೆ ಮೋದಿ ಕೋಲ್ಕತ್ತಾಗೆ ಭೇಟಿ ಖಚಿತ : ಪಿಎಮ್ಒ
ಮುಸ್ಲಿಂ ಮತಗಳ ಮೇಲೆ ಚಿತ್ತ: ನಿತೀಶ್ ಸಂಪುಟಕ್ಕೆ ಬಿಜೆಪಿಯ ಶಹನವಾಜ್ ಸೇರ್ಪಡೆ ಸಾಧ್ಯತೆ