ಕ್ಷುಲ್ಲಕ ಕಾರಣಕ್ಕೆ ಜಗಳ: ಯುವಕನಿಗೆ 8 ಬಾರಿ ಇರಿತ

Team Udayavani, Dec 4, 2018, 5:58 PM IST

ಹೊಸದಿಲ್ಲಿ : ದಿಲ್ಲಿ ಹೊರವಲಯದ ಮಂಗೋಲ್‌ಪುರಿ ಪ್ರದೇಶದಲ್ಲಿನ ಪಾರ್ಕ್‌ ಒಂದರಲ್ಲಿ ಆಟವಾಡುವ ಬಗ್ಗೆ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ 20ರ ಹರೆಯದ ತರುಣನೋರ್ವ ಆರು ಬಾರಿ ಇರಿಯಲ್ಪಟ್ಟು ಆಸ್ಪತ್ರೆಗೆ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇರಿತಕ್ಕೆ ಗುರಿಯಾದ ತರುಣನನ್ನು ರಾಜೀವ ಎಂದು ಗುರುತಿಸಲಾಗಿದ್ದು ಸಂಜಯ್‌ ಗಾಂಧಿ ಮೆಮೋರಿಯಲ್‌ ಆಸ್ಪತ್ರೆಗೆ ದಾಖಲಾದ ಈತ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಎರಡು ದಿನಗಳ ಹಿಂದಷ್ಟೇ ರಾಜೀವ್‌ ಅವರ ಸ್ನೇಹಿತ ರಾಹುಲ್‌ ಎಂಬಾತ ಇದೇ ಪಾರ್ಕ್‌ನಲ್ಲಿ ಆಟವಾಡುವ ಬಗೆಗಿನ ವಿವಾದದಲ್ಲಿ  ಸ್ಥಳೀಯ ಗುಂಪೊಂದರ ಜತೆಗೆ ಜಗಳ ಕಾದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ