6 ವರ್ಷಗಳಲ್ಲಿ 20,000 ವಾಹನಗಳು ಕಳವು !

Team Udayavani, May 11, 2019, 12:53 PM IST

ಮುಂಬಯಿ: ಕಳೆದ 6 ವರ್ಷಗಳಲ್ಲಿ ನಗರದಲ್ಲಿ ಸುಮಾರು 536.67 ಕೋ.ರೂ. ಮೌಲ್ಯದ 19,907 ವಾಹನಗಳು ಕಳವು ಆಗಿವೆ. ಸರಾಸರಿಯಾಗಿ ನಗರದಲ್ಲಿ ದೈನಂದಿನ ಕನಿಷ್ಠ 9 ವಾಹನಗಳು ಕಳವು ಆಗುತ್ತಿವೆ. ಈ 6 ವರ್ಷಗಳಲ್ಲಿ ಪೊಲೀಸರು ಕೇವಲ 74 ಕೋಟಿ ಮೌಲ್ಯದ 5,732 ವಾಹನಗಳನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್‌ಟಿಐ ಕಾರ್ಯಕರ್ತ ಅಹ್ಮದ್‌ ಶೇಖ್‌ ಮಾಹಿತಿ ಹಕ್ಕಿನ ಮೂಲಕ 2013ರಿಂದ 2018ರ ತನಕ ಮುಂಬಯಿಯಲ್ಲಿ ವಾಹನಗಳ ಕಳವಿನ ಬಗ್ಗೆ ಮಾಹಿತಿಯನ್ನು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಮುಂಬಯಿ ಪೊಲೀಸರು ನೀಡಿರುವ ಮಾಹಿತಿಯಲ್ಲಿ 6 ವರ್ಷಗಳಲ್ಲಿ ನಗರದಲ್ಲಿ 19,907 ವಾಹನಗಳು ಕಳವು ಆಗಿರುವ ಮಾಹಿತಿ ಬಹಿರಂಗವಾಗಿದೆ. ಕಳವು ಆಗಿರುವ ವಾಹನಗಳು ಒಟ್ಟು +ಹಾಕುವಲ್ಲಿ ಮುಂಬಯಿ ಪೊಲೀಸರು ವಿಫಲ ಸಾಬೀತಾಗಿದ್ದಾರೆ. ಪೊಲೀಸರು ಈ ಅವಧಿಯಲ್ಲಿ ಕೇವಲ ಶೇ.21ರಷ್ಟು ಅಂದರೆ 5,462 ವಾಹನ ಕಳ್ಳತನದ ಪ್ರಕರಣಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್‌ಟಿಐ ಕಾರ್ಯಕರ್ತ ಅಹ್ಮದ್‌ ಶೇಖ್‌ ಪ್ರಕಾರ ಮುಂಬಯಿಯಲ್ಲಿ ವಾಹನ ಕಳ್ಳತನದ ಅಂತರ್‌ರಾಜ್ಯ ತಂಡವೊಂದು ಸಕ್ರಿಯವಾಗಿದೆ. ಈ ತಂಡವು ವಾಹನಗಳನ್ನು ಕಳ್ಳತನ ಮಾಡಿ ಅವುಗಳನ್ನು ಬೇರೆ ರಾಜ್ಯಗಳಿಗೆ ಸಾಗಿಸುತ್ತದೆ ಮತ್ತು ನಕಲಿ ದಾಖಲೆಗಳನ್ನು ತಯಾರಿಸಿ ಅಲ್ಲಿ ಅವುಗಳ ಮಾರಾಟ ಮಾಡುತ್ತಿದೆ. ಈ ತಂಡದ ಸದಸ್ಯರು ಪೊಲೀಸರಿಗೆ ಕಳ್ಳತನದ ಸಂಪೂರ್ಣ ಜಾಲವನ್ನು ಭೇದಿಸಲು ಸಾಧ್ಯವಾಗದ ರೀತಿಯಲ್ಲಿ ವಾಹನಗಳನ್ನು ಕಳವು ಮಾಡುತ್ತಿದ್ದಾರೆ. ಒಂದೊಮ್ಮೆ ವಾಹನ ಕಳ್ಳತನದ ಸಮಯದಲ್ಲಿ ಯಾವುದೇ ಆರೋಪಿಯು ಬಂಧಿಸಲ್ಪಟ್ಟಲ್ಲಿ ಪೊಲೀಸರಿಗೆ ಆತನ ಸಂಪರ್ಕಗಳನ್ನು ಜೋಡಿಸಿ ತಂಡದ ಮಾಸ್ಟರ್‌ವೆುçಂಡ್‌ ಅನ್ನು ತಲುಪಲು ಕೂಡ ಸಾಧ್ಯವಾಗುವುದಿಲ್ಲ. ಮುಂಬಯಿಯಿಂದ ಕದ್ದ ವಾಹನಗಳನ್ನು ಹೆಚ್ಚಾಗಿ ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ನೇಪಾಳದಲ್ಲೂ ಮಾರಾಟ ಮಾಡಲಾಗುತ್ತಿದೆ.

ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಂತಹ ಉಪಕ್ರಮಗಳ ಹೊರತಾಗಿಯೂ, ಕಳೆದ ಮೂರು ವರ್ಷಗಳಲ್ಲಿ ವಾಹನ ಕಳ್ಳತನಗಳ ಸಂಖ್ಯೆ 3,000ದಷ್ಟಿದೆ ಎಂದು ಅಹ್ಮದ್‌ ಬೊಟ್ಟು ಮಾಡಿ ಹೇಳಿದ್ದಾರೆ. ವಾಹನ ಕಳ್ಳತನಗಳಲ್ಲಿ ತೊಡಗಿರುವ ತಂಡಗಳನ್ನು ಪೊಲೀಸರು ಪತ್ತೆ ಮಾಡಬೇಕು ಎಂದವರು ಆಗ್ರಹಿಸಿದ್ದಾರೆ. ಮುಂಬಯಿಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ನಗರದ ರಸ್ತೆಗಳಲ್ಲಿ 70 ಲಕ್ಷಕ್ಕೂ ಅಧಿಕ ವಾಹನಗಳು ಓಡುತ್ತಿವೆ.

ವಾಹನ ಕಳ್ಳತನದ ಅಂಕಿ ಆಂಶ
ವರ್ಷ ಕಳ್ಳತನ ಪತ್ತೆ
2013  3,789  859
2014  3,474  906
2015  3,311  840
2016  3,318  861
2017  3,012  935

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೊಸದಿಲ್ಲಿ: ಕೇಂದ್ರ ಸರಕಾರಕ್ಕೆ ತಲೆನೋವಾಗಿರುವ ಏರ್‌ ಇಂಡಿಯಾ ಮಾರಾಟಕ್ಕೆ ರೋಡ್‌ ಶೋ ನಡೆಸಲು ತೀರ್ಮಾನಿಸಲಾಗಿದೆ. ಮುಂದಿನ ತಿಂಗಳಿನಿಂದ ಅದು ನಡೆಯಲಿದ್ದು,...

  • ಹೊಸದಿಲ್ಲಿ: ಎಸ್‌ಪಿ ರಾಜ್ಯಸಭಾ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದ ಮಾಜಿ ಪ್ರಧಾನಿ ದಿ| ಚಂದ್ರಶೇಖರ್‌ ಪುತ್ರ ನೀರಜ್‌ ಶೇಖರ್‌ ಮಂಗಳವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ....

  • ಹೊಸದಿಲ್ಲಿ: ಮಹತ್ವದ ಬೆಳವಣಿಗೆಯಲ್ಲಿ, ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶ ಪ್ರವೇಶಿಸದಂತೆ ವಿಧಿಸಿದ್ದ ನಿರ್ಬಂಧವನ್ನು ಪಾಕಿಸ್ಥಾನ ಹಿಂಪಡೆದಿದೆ. ಬಾಲಕೋಟ್‌...

  • ಹೊಸದಿಲ್ಲಿ: ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಇದೇ ವರ್ಷ ಫೆ. 1ರಂದು ಮಿರಾಜ್‌ 2000 ವಿಮಾನದ ಹಾರಾಟದ ವೇಳೆ ಉಂಟಾದ ಅವಘಡದಲ್ಲಿ ಹುತಾತ್ಮರಾಗಿದ್ದ ಐಎಎಫ್...

  • ಹೊಸದಿಲ್ಲಿ: "ಎಲ್ಲ ಸಂಸದರೂ ಸಂಸತ್‌ ಕಲಾಪಗಳ ವೇಳೆ ಹಾಜರಿರಬೇಕು. ಸುಖಾ ಸುಮ್ಮನೆ ಸದನಕ್ಕೆ ಗೈರಾಗುವುದನ್ನು ನಾನು ಸಹಿಸುವುದಿಲ್ಲ. ಇಂದು ಸಂಜೆಯೊಳಗೆ ನನಗೆ ಗೈರಾದವರ...

ಹೊಸ ಸೇರ್ಪಡೆ