ಮುಂಗಾರು ಪೂರ್ವ ಮಳೆ; ಕಳೆದ 65ವರ್ಷಗಳಲ್ಲಿಯೇ ಈ ಬಾರಿ ಅತೀ ಕಡಿಮೆ!

Team Udayavani, Jun 3, 2019, 6:15 PM IST

ಬೆಂಗಳೂರು: 2019ರ ಸಾಲಿನಲ್ಲಿ ಮುಂಗಾರು ಪೂರ್ವ ಮಳೆ ಭಾರತದಲ್ಲಿ ಕಳೆದ 65 ವರ್ಷಗಳಲ್ಲಿಯೇ 2ನೇ ಅತೀ ಕಡಿಮೆ ಪ್ರಮಾಣದ ಮಳೆಯಾಗಿದೆ ಎಂದು ಖಾಸಗಿ ಹವಾಮಾನ ಮುನ್ನೆಚ್ಚರಿಕಾ ಏಜೆನ್ಸಿ ಸ್ಕೈಮೆಟ್ ಸೋಮವಾರ ವರದಿ ಮಾಡಿದೆ.

2019ರ ಸಾಲಿನಲ್ಲಿ ಭಾರತ ಕೇವಲ 99 ಮಿಲಿ ಮೀಟರ್ ಮುಂಗಾರು ಪೂರ್ವ ಮಳೆ ಸುರಿದಿದೆ. ಅಂದಾಜು 131.5 ಮಿಲಿ ಮೀಟರ್ ನಷ್ಟು ಮುಂಗಾರು ಪೂರ್ವ ಮಳೆ ಸುರಿಯಬೇಕಾಗಿತ್ತು.  ಸ್ಕೈ ಮೆಟ್ ವರದಿ ಪ್ರಕಾರ, ದೇಶದ ನಾಲ್ಕು ವಲಯಗಳಲ್ಲಿ ಮುಂಗಾರು ಪೂರ್ವ ಮಳೆ ಅತೀ ಕಡಿಮೆಯಾಗಿದ್ದು, ಇದು ದಾಖಲೆಯಾಗಿದೆ ಎಂದು ತಿಳಿಸಿದೆ.

ವಾಯುವ್ಯ ಭಾರತದಲ್ಲಿ ಶೇ.30ರಷ್ಟು, ಮಧ್ಯ ಭಾರತದಲ್ಲಿ ಶೇ.18ರಷ್ಟು, ಪೂರ್ವ ಭಾರತದಲ್ಲಿ ಶೇ.14ರಷ್ಟು ಮತ್ತು ಈಶಾನ್ಯ ಭಾರತದಲ್ಲಿ ಶೇ.47ರಷ್ಟು ಮಳೆ ದಾಖಲೆ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ವರದಿ ವಿವರಿಸಿದೆ.

2019ರಲ್ಲಿ ಮುಂಗಾರು ಪೂರ್ವ ಮಳೆ ಕಳೆದ 65ವರ್ಷಗಳಲ್ಲಿ 2ನೇ ಅತೀ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದ ವರ್ಷವಾಗಿದೆ. ಇದಕ್ಕು ಮುನ್ನ 2012ರಲ್ಲಿಯೂ ಮುಂಗಾರು ಪೂರ್ವ ಮಳೆ ಭಾರೀ ಕಡಿಮೆ ಪ್ರಮಾಣದಲ್ಲಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ