ಬೆಸ್ಟ್ ಆಫ್ ಲಕ್; ಜೈಪುರದ 21 ವರ್ಷದ ಯುವಕ ರಾಜಸ್ಥಾನದ ಅತೀ ಕಿರಿಯ ಜಡ್ಜ್
ಮಯಾಂಕ್ ಪ್ರತಾಪ್ ಸಿಂಗ್ (21) ರಾಜಸ್ಥಾನದ ಅತ್ಯಂತ ಕಿರಿಯ ಜಡ್ಜ್
Team Udayavani, Nov 21, 2019, 12:53 PM IST
ಜೈಪುರ್: ರಾಜಸ್ಥಾನ್ ಜ್ಯುಡಿಶಿಯಲ್ ಸರ್ವೀಸಸ್ (ಆರ್ ಜೆಎಸ್) ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮಯಾಂಕ್ ಪ್ರತಾಪ್ ಸಿಂಗ್ (21) ರಾಜಸ್ಥಾನದ ಅತ್ಯಂತ ಕಿರಿಯ ಜಡ್ಜ್ ಆಗಿ ನೇಮಕವಾಗಲಿದ್ದು, ಇತಿಹಾಸ ಬರೆದಿರುವುದಾಗಿ ವರದಿ ತಿಳಿಸಿದೆ.
ಈ ಮೊದಲು ನ್ಯಾಯಾಂಗ ಪರೀಕ್ಷೆ ಬರೆಯಲು ವಯಸ್ಸಿನ ಮಿತಿ 23ಕ್ಕೆ ನಿಗದಿಗೊಳಿಸಲಾಗಿತ್ತು. ಆದರೆ ರಾಜಸ್ಥಾನ್ ಹೈಕೋರ್ಟ್ ಜನವರಿಯಲ್ಲಿ ವಯಸ್ಸಿನ ಮಿತಿಯನ್ನು 21ಕ್ಕೆ ನಿಗದಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮಯಾಂಕ್ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆದುಕೊಂಡಿದ್ದರು.
ಮಾನಸ್ ಸರೋವರ್ ಪ್ರದೇಶದ ನಿವಾಸಿಯಾಗಿರುವ ಮಯಾಂಕ್ ರಾಜಸ್ಥಾನ್ ಯೂನಿರ್ವಸಿಟಿಯಲ್ಲಿ ಐದು ವರ್ಷಗಳ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ನಂತರ ಜ್ಯುಡಿಶಿಯಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ