24 ಗಂಟೆ, 969 ವಿಮಾನ ಟೇಕಾಫ್, ಲ್ಯಾಂಡಿಂಗ್!
Team Udayavani, Nov 27, 2017, 6:25 AM IST
ಮುಂಬಯಿ: ಒಂದೇ ದಿನದಲ್ಲಿ ಅತಿ ಹೆಚ್ಚು ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆದ ದಾಖಲೆಯೀಗ ಮುಂಬಯಿ ವಿಮಾನ ನಿಲ್ದಾಣದ ಮುಡಿಗೇರಿದೆ. 24 ಗಂಟೆಗಳಲ್ಲಿ ಇಲ್ಲಿ 969 ವಿಮಾನಗಳನ್ನು ನಿರ್ವಹಿಸುವ ಮೂಲಕ ಮುಂಬಯಿ ವಿಮಾನ ನಿಲ್ದಾಣವು ತನ್ನ ದಾಖಲೆಯನ್ನು ತಾನೇ ಮುರಿದು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಮಾಡಿದೆ. ಇದಕ್ಕೂ ಮೊದಲು ಮುಂಬಯಿ ವಿಮಾನ ನಿಲ್ದಾಣದಲಿ 935 ವಿಮಾನಗಳು ಟೇಕ್ ಆಫ್, ಲ್ಯಾಂಡಿಂಗ್ ಆಗಿದ್ದು ದಾಖಲೆಯಾಗಿತ್ತು.
ನ್ಯೂಯಾರ್ಕ್, ಲಂಡನ್, ದಿಲ್ಲಿಯಂಥ ಮಹಾನಗರಗಳಲ್ಲಿ 2ಕ್ಕೂ ಹೆಚ್ಚು ರನ್ವೇಗಳಿವೆ. ಆದರೆ ಮುಂಬಯಿನಲ್ಲಿ 2 ರನ್ವೇ ಇವೆ. ಆದರೆ ಇವು ಒಂದಕ್ಕೊಂದು ಅಡ್ಡಲಾಗಿ ಇರುವುದರಿಂದ ಈ ವಿಮಾನ ನಿಲ್ದಾಣ ಸಿಂಗಲ್ ರನ್ವೇ ವಿಭಾಗಕ್ಕೆ ಸೇರಿದೆ. ಒಂದು ಗಂಟೆಯಲ್ಲಿ 50 ವಿಮಾನಗಳ ಹಾರಾಟ ನಡೆಸುವ ಸಾಮರ್ಥ್ಯ ಮುಂಬಯಿ ವಿಮಾನ ನಿಲ್ದಾಣಕ್ಕೆ ಇದೆ. ವಿಶ್ವಮಟ್ಟದಲ್ಲಿ ಈ ಸಾಮರ್ಥ್ಯ ಇರುವ ನಿಲ್ದಾಣಗಳಲ್ಲಿ ಇದು ಎರಡನೆಯದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು