ಟಿಡಿಎಸ್‌ ಮೊತ್ತ ಶೇ.25 ಕಡಿತ


Team Udayavani, May 14, 2020, 7:28 AM IST

terige motta

ವೇತನ ಹೊರತಾದ ಆದಾಯದಿಂದ ಕಡಿತಗೊಳ್ಳುತ್ತಿದ್ದ ಟಿಡಿಎಸ್‌ ಹಾಗೂ ಟಿಸಿಎಸ್‌ (ಮೂಲದಿಂದ ತೆರಿಗೆ ಸಂಗ್ರಹ) ಮೊತ್ತವನ್ನು ಶೇ.25ರಷ್ಟು ಕಡಿತಗೊಳಿಸುತ್ತಿರುವುದಾಗಿ ನಿರ್ಮಲಾ ಘೋಷಿಸಿದ್ದಾರೆ. ಈ ನಿರ್ಧಾರದಿಂದಾಗಿ 50 ಸಾವಿರ ಕೋಟಿ ರೂ. ಮೊತ್ತವು ತೆರಿಗೆಯಾಗಿ ಪಾವತಿಯಾಗುವ ಬದಲು, ಗುತ್ತಿಗೆ, ವೃತ್ತಿಪರ ಶುಲ್ಕ, ಬಡ್ಡಿ, ಬಾಡಿಗೆ, ಲಾಭಾಂಶ ವಿತರಣೆ, ಕಮಿಷನ್‌ ಮತ್ತು ಬ್ರೋಕರೇಜ್‌ ಆದಾಯವಾಗಿ ಬಳಕೆಗೆ ಸಿಗಲಿದೆ.

ಇದು ಗುರುವಾರದಿಂದಲೇ  ಅನ್ವಯವಾಗಲಿದ್ದು, ಈ ವಿತ್ತೀಯ ವರ್ಷದ ಉಳಿದ ಅವಧಿ ಯವರೆಗೆ ಚಾಲ್ತಿಯಲ್ಲಿರಲಿದೆ. ಈ ಶೇ.25ರ ಕಡಿತವು ಮಾಸಿಕ 50 ಸಾವಿರ ರೂ.ಗಿಂತ ಹೆಚ್ಚಿನ ಬಾಡಿಗೆಯ ಮೇಲೆ ವಿಧಿಸಲಾಗುವ ಟಿಡಿಎಸ್‌, ಮ್ಯೂಚುವಲ್‌ ಫ‌ಂಡ್‌ ಮತ್ತು ಕಂಪನಿಗಳ ಲಾಭಾಂಶ ವಿತರಣೆ, ನಿಗದಿತ ಠೇವಣಿ ಮೇಲಿನ ಟಿಡಿಎಸ್‌ ಇತ್ಯಾದಿಗಳ ಪಾವತಿಗೆ ಅನ್ವಯವಾಗುತ್ತದೆ.

ರಿಟರ್ನ್ಸ್ಗೆ ನವೆಂಬರ್‌ವರೆಗೂ ಟೈಮ್‌: ತೆೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಆಗಿಲ್ಲವಲ್ಲ ಎಂದು ಆತಂಕಗೊಂಡವರಿಗೆ ಸಮಾಧಾನಕರ ಸುದ್ದಿ. ಪ್ರಸಕ್ತ ವರ್ಷ ಎಲ್ಲ ರೀತಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ನವೆಂಬರ್‌ವರೆಗೆ ವಿಸ್ತರಿಸಲಾಗಿದೆ. 2019-20ರ ತೆರಿಗೆ  ರಿಟರ್ನ್ಸ್ ಸಲ್ಲಿಕೆಯ ಗಡುವು ಜುಲೈ 31 ಆಗಿತ್ತು. ಆದರೆ, ಈಗ ಅದನ್ನು ನ. 30ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಸರ್ಕಾರವು ಫಾರ್ಮ್-16 ಸ್ವೀಕಾರಕ್ಕೆ ಇದ್ದ ಜೂ. 10ರ ಗಡುವನ್ನು ಜೂ.30ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿತ್ತು.

ಆದರೆ, ರಿಟರ್ನ್ಸ್ ಸಲ್ಲಿಕೆಯ ಗಡುವು ಜು.31 ಆಗಿದ್ದ ಕಾರಣದಿಂದ, ತೆರಿಗೆದಾರರಿಗೆ ಕೇವಲ ಒಂದು ತಿಂಗಳ ಕಾಲಾವಕಾಶ ಮಾತ್ರ ಸಿಕ್ಕಿತ್ತು. ಈಗ ಈ ಗಡುವನ್ನೂ ವಿಸ್ತರಣೆ ಮಾಡಿರುವುದರಿಂದ, ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಸಲು 5 ತಿಂಗಳ  ಅವಕಾಶ ಸಿಗಲಿದೆ. ತೆರಿಗೆ ಆಡಿಟಿಂಗ್‌ ಅವಧಿಯನ್ನು ಕೂಡ ಒಂದು ತಿಂಗಳ ಕಾಲ ವಿಸ್ತರಿಸಲಾಗಿದ್ದು, ಸೆ. 30ರ ಬದಲಾಗಿ ಅ. 30ಕ್ಕೆ ನಿಗದಿ ಮಾಡಲಾಗಿದೆ.

ಟಾಪ್ ನ್ಯೂಸ್

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಚಿಕ್ಕಬಳ್ಳಾಪುರ ಭಾರೀ ಮಳೆ : ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ಚಿಕ್ಕಬಳ್ಳಾಪುರ ಭಾರೀ ಮಳೆ: ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

dks

ಸಿದ್ದರಾಮಯ್ಯ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?;ಬಿಜೆಪಿ ಪ್ರಶ್ನೆ

ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ ಗೆದ್ದವರಿಗೆ ಟ್ರೋಪಿ, ನೋವು ನಿವಾರಕ ಮುಲಾಮ್ ಬಹುಮಾನ

ಕಾರ್ಕಳ: ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ: ಗೆದ್ದವರಿಗೆ ಟ್ರೋಫಿ,ನೋವು ನಿವಾರಕ ಮುಲಾಮ್

655-aaa

3 ಹೆಣ್ಣು ಹೆತ್ತಿದ್ದಕ್ಕೆ ಕಿರುಕುಳ : ಮಕ್ಕಳೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

narendra-modi

ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯ ತೋರಿಸಿದೆ : ಪ್ರಧಾನಿ ಮೋದಿ

1221

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಶುಗರ್ ಪೌಡರ್ ಆಗಲಿದೆ !

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

MUST WATCH

udayavani youtube

ಉಕ್ಕಿ ಹರಿಯುತ್ತಿದೆ ಚಿಕ್ಕಬಳ್ಳಾಪುರದ ರಂಗಧಾಮ ಕೆರೆ..!

udayavani youtube

ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

ಹೊಸ ಸೇರ್ಪಡೆ

15folk

ಜಾನಪದ ಶೈಲಿಯಲಿ ಒಡ್ಡೋಲಗದ ಆಮಂತ್ರಣ

gudibande news

ನೀರಿನಲ್ಲಿ ಸಿಲುಕಿಕೊಂಡಿದ್ದ ಆಂಬ್ಯುಲೆನ್ಸ್ ತಳ್ಳಿ ಮಾನವೀಯತೆ ಮೆರೆದ ಸಾರ್ವಜನಿಕರು

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

Mass confinement for poor pregnant women

ಬಡ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.