ಚಂಡೀಗಢ: ಬಾಯ್ಲರ್‌ ಸ್ಫೋಟ; 3 ವಲಸೆ ಕಾರ್ಮಿಕರ ದಾರುಣ ಸಾವು

Team Udayavani, Jan 8, 2019, 1:57 PM IST

ಚಂಡೀಗಢ : ಇಲ್ಲಿಂದ 30 ಕಿ.ಮೀ. ದೂರದ ಮೊಹಾಲಿ ಜಿಲ್ಲೆಯಲ್ಲಿನ ಲಾಲ್‌ರೂ ಪಟ್ಟಣದಲ್ಲಿ ಫ್ಯಾಕ್ಟರಿಯೊಂದರಲ್ಲಿನ ಬಾಯ್ಲರ್‌ ಸ್ಫೋಟಗೊಂಡ ಪರಿಣಾಮ ಮೂವರು ಕಾರ್ಮಿಕರು ಮಡಿದು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.

ದೇರಾ ಬಸ್ಸಿ ತೆಹಶೀಲ್‌ನಲ್ಲಿ ಕಾರ್ಮಿಕರು ಇಂದು ಬೆಳಗ್ಗೆ ಸಹ-ಉತ್ಪಾದನೆಯ ವಿದ್ಯುತ್‌ ಘಟಕದಲ್ಲಿ ಮೋಟಾರ್‌ ಒಂದನ್ನು ದುರಸ್ತಿ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ಯಾಕ್ಟರಿಯ ಬಾಯ್ಲರ್‌ ಸ್ಫೋಟಗೊಂಡ ಪರಿಣಾಮವಾಗಿ 20ರಿಂದ 28ರ ಹರೆಯದ ಒಳಗಿನ ಮೂವರು ವಲಸೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರು. ಇವರನ್ನು ಮನೀಶ್‌, ಹೇಮಂತ್‌ ಮತ್ತು ಸಂಜಯ್‌ ಎಂದು ಗುರುತಿಸಲಾಗಿದೆ. 

ಘಟನೆಯ ಬಗ್ಗೆ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ