
ಚಂಡೀಗಢ ವಿವಿ ವಿಡಿಯೋ ಸೋರಿಕೆ ಪ್ರಕರಣ : ಯುವತಿ ಸೇರಿ ಮೂವರ ಬಂಧನ
Team Udayavani, Sep 19, 2022, 8:29 AM IST

ಚಂಡೀಗಢ : ವಿಶ್ವವಿದ್ಯಾನಿಲಯದ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಸೇರಿ ಮೂವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಇದಕ್ಕೂ ಮೊದಲು, ಹಾಸ್ಟೆಲ್ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋ ಗಳನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯನ್ನು ಬಂಧಿಸಿದ್ದು, ಅಲ್ಲದೆ ಆಕೆ ಆ ವಿಡಿಯೋ ವನ್ನು ತನ್ನ ಗೆಳೆಯನಿಗೆ ಕಳುಹಿಸಿದ್ದಾಳೆ ಎಂಬ ಆರೋಪದ ಮೇಲೆ ಶಿಮ್ಲಾದ ರೋಹ್ರು ನಿವಾಸಿ 23 ವರ್ಷದ ಸನ್ನಿ ಮೆಹ್ತಾ ಎಂಬಾತನನ್ನು ವಶಕ್ಕೆ ಪಡೆದಿದ್ದರು, ಪ್ರಕರಣದಲ್ಲಿ ಬಂಧಿತ ವಿದ್ಯಾರ್ಥಿನಿಯೂ ರೋಹ್ರು ಮೂಲದವಳಾಗಿದ್ದಾಳೆ. ಆರೋಪಿ ವಿದ್ಯಾರ್ಥಿನಿಗೆ ಈ ವ್ಯಕ್ತಿ ಪರಿಚಯವಿದೆ ಎಂದು ಪಂಜಾಬ್ ಪೊಲೀಸರು ಈ ಹಿಂದೆ ಹೇಳಿದ್ದರು.
ಅಲ್ಲದೆ ಪ್ರಕರಣ ಮುಂದುವರೆದ ಭಾಗವಾಗಿ ಶಿಮ್ಲಾ ದಲ್ಲಿ ಇನ್ನೋರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಆದರೆ ಆ ವ್ಯಕ್ತಿಯ ಮಾಹಿತಿ ಮಾತ್ರ ಬಹಿರಂಗಪಡಿಸಲಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ಮೊಬೈಲ್ ಫೋನ್‌ನ ಪೊಲೀಸರು ವಶಕ್ಕೆ ಪಡೆದಿದ್ದು ಫೋರೆನ್ಸಿಕ್ ತನಿಖೆ ನಡೆಸಲಾಗುವುದು” ಎಂದು ಎಡಿಜಿಪಿ ಗುರ್‌ಪ್ರೀತ್ ಡಿಯೋ ತಿಳಿಸಿದ್ದಾರೆ. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಂತಾಗಿದೆ.
ಇದನ್ನೂ ಓದಿ : ಹುಣಸೂರು : ನಾಲೆಗೆ ಈಜಲು ಹೋದ ಯುವಕ ನೀರುಪಾಲು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
