100 ಕೋಟಿ ರೂ. ಮೌಲ್ಯದ ಹೆರಾಯಿನ್ ಜತೆ ಮೂವರು ಲಷ್ಕರ್ ಉಗ್ರರು ಜಮ್ಮು ಪೊಲೀಸ್ ಬಲೆಗೆ
ಬಂಧಿತ ಲಷ್ಕರ್ ಎ ತೊಯ್ಬಾದ ಉಗ್ರರು ಪಾಕಿಸ್ತಾನ ಜತೆಗೆ ನಂಟು ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Team Udayavani, Jun 11, 2020, 6:15 PM IST
ಜಮ್ಮು-ಕಾಶ್ಮೀರ: ಜಮ್ಮು ಕಾಶ್ಮೀರದ ಹಂದ್ವಾರ ಪೊಲೀಸರು ಪಾಕಿಸ್ತಾನ ಪ್ರಾಯೋಜಕತ್ವದ ನಾರ್ಕೊ ಟೆರರ್ ಸಂಚನ್ನು ಭೇದಿಸಿದ್ದು, ನೂರು ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಜತೆಗೆ ಲಷ್ಕರ್ ಎ ತೊಯ್ಬಾದ ಮೂವರು ಉಗ್ರರನ್ನು ಬಂಧಿಸಿರುವ ಘಟನೆ ಗುರುವಾರ ನಡೆದಿದೆ.
ಬಂಧಿತ ಲಷ್ಕರ್ ಎ ತೊಯ್ಬಾದ ಉಗ್ರರು ಪಾಕಿಸ್ತಾನ ಜತೆಗೆ ನಂಟು ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಿಂದ 21 ಕೆಜಿ ಹೆರಾಯಿನ್ ಹಾಗೂ 1.34ಕೋಟಿ ಮೌಲ್ಯದ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಂದ್ವಾರ ಪೊಲೀಸ್ ವರಿಷ್ಠಾಧಿಕಾರಿ ಜಿವಿ ಸಂದೀಪ್ ಚಕ್ರವರ್ತಿ ತಿಳಿಸಿದ್ದಾರೆ.
ಸೆರೆ ಸಿಕ್ಕ ಮೂವರು ಉಗ್ರರ ಗುರುತು ಪತ್ತೆಹಚ್ಚಲಾಗಿದೆ. ಮುಖ್ಯ ಆರೋಪಿ ಇಫ್ತಿಖಾರ್ ಇಂದ್ರಾಬಿ, ಈತ ನಟೋರಿಯಸ್ ಮಾದಕ ವಸ್ತು ಕಳ್ಳಸಾಗಾಣೆದಾರನಾಗಿದ್ದು, ಈತನ ಮೇಲೆ ಹಲವಾರು ಎಫ್ ಐಆರ್ ದಾಖಲಾಗಿತ್ತು. ಎರಡನೇ ಆರೋಪಿ ಮೋಮಿನ್ ಪೀರ್ ಹಾಗೂ ಇಕ್ಬಾಲ್ ಉಲ್ ಇಸ್ಲಾಮ್ ಎಂದು ಜಿವಿ ವಿವರಿಸಿದ್ದಾರೆ.
ಈ ಮಾದಕ ವಸ್ತು ಕಳ್ಳಸಾಗಾಣೆ, ಭಯೋತ್ಪಾದಕ ಜಾಲದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿದ್ದು, ಅವರನ್ನು ಕೂಡಲೇ ಗುರುತು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ