ಶೋಪಿಯಾನ್‌:ಭೀಕರ ಗುಂಡಿನ ಕಾಳಗ 3 ಉಗ್ರರ ಹತ್ಯೆಯಲ್ಲಿ ಅಂತ್ಯ

Team Udayavani, May 31, 2019, 3:18 PM IST

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಡ್ರಾಗಾದ್‌ ಸುಗನ್‌ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಸೇನಾ ಪಡೆಗಳು ನಡೆಸಿದ ಭೀಕರ ಗುಂಡಿನಕಾಳಗದಲ್ಲಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ.

ರಾಷ್ಟ್ರೀಯ ರೈಫ‌ಲ್ಸ್‌, ವಿಶೇಷ ಕಾರ್ಯಾಚರಣೆ ಪಡೆ, ಸಿಆರ್‌ಪಿಎಫ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಸುತ್ತುವರಿದಿದ್ದರು.

ಮೂವರು ಉಗ್ರರ ಶವಗಳೊಂದಿಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನುಪತ್ತೆ ಮಾಡಲಾಗಿದೆ.

ಹತ್ಯೆಗೀಡಾದ ಉಗ್ರರು ಯಾವ ಸಂಘಟನೆಗೆ ಸೇರಿದವರು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

ಇನ್ನೊಂದೆಡೆ ಕಿಶ್ತ್ವಾರ್‌ನ ಮರ್ವಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ಕೌಂಟರ್ ನಡೆಯುತ್ತಿದ್ದು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ