ಎಸಿ ಅನಿಲ ಸೋರಿಕೆ ; ಒಂದೇ ಕುಟುಂಬದ ಮೂವರ ದುರ್ಮರಣ
Team Udayavani, Oct 3, 2018, 11:36 AM IST
ಚೆನ್ನೈ: ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸಿಯಿಂದ ಅನಿಲ ಸೋರಿಕೆಯಾಗಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಕೊಯಂಬೀಡುವಿನ ತಿರುವಳ್ಳುವರ್ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
35 ವರ್ಷದ ವ್ಯಕ್ತಿ , ಪತ್ನಿ ಮತ್ತು 8 ವರ್ಷ ಪ್ರಾಯದ ಪುತ್ರ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮಂಗಳವಾರ ಮಧ್ಯಾಹ್ನವಾದರೂ ಮನೆಯ ಬಾಗಿಲು ತೆಗೆಯದೆ ಇದ್ದ ಕಾರಣ ಅಕ್ಕಪಕ್ಕದ ನಿವಾಸಿಗಳು ಪರಿಶೀಲಿಸಿದಾಗ ಮೂವರು ಶವವಾಗಿದ್ದರು.
ಇನ್ವಾರ್ಟರ್ ಮೂಲಕ ಎಸಿಗೆ ವಿದ್ಯುತ್ ಸರಬರಾಜು ಆಗುತ್ತಿದ್ದ ಕಾರಣ ದುರಂತ ಸಂಭವಿಸಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.