
ಪ್ರತಿ ಜಿಲ್ಲೆಯಲ್ಲೂ3 ಗುಜರಿ ಕೇಂದ್ರ
Team Udayavani, Sep 16, 2022, 7:05 AM IST

ಹೊಸದಿಲ್ಲಿ: ಹಳೆಯ ವಾಹನಗಳ ಬಳಕೆಯನ್ನು ಸ್ಥಗಿತಗೊಳಿಸುವ ಸಂಬಂಧ ದೇಶದ ಪ್ರತೀ ಜಿಲ್ಲೆಯಲ್ಲಿಯೂ ತಲಾ ಮೂರು ಗುಜರಿ ಕೇಂದ್ರಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಆಟೋಮೋಟಿವ್ ಕಾಂಪೋ ನೆಂಟ್ ಮ್ಯಾನುಫ್ಯಾಕ್ಟರರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಅವರು, 2022ರ ಎ.1ರಿಂದ ಗುಜರಿ ನೀತಿ ಜಾರಿಗೆ ಬಂದಿದ್ದು, ಈ ಮೂಲಕ ದೇಶದ ಆರ್ಥಿಕತೆಗೆ ಚಲನಶೀಲತೆಯನ್ನು ತಂದುಕೊಡಲು ಪ್ರಯತ್ನಿಸಲಾಗುತ್ತಿದೆ. ಅಂದರೆ, ರಸ್ತೆಗಿಳಿಯಲು ಸದೃಢವಾಗಿಲ್ಲದ ಮತ್ತು ಹೆಚ್ಚು ಮಾಲಿನ್ಯ ಕಾರಕವಾದ ವಾಹನಗಳನ್ನು ಗುಜರಿಗೆ ಹಾಕಲು ಅನು ಕೂಲ ಮಾಡಿಕೊಡಲಾಗುತ್ತಿದೆ ಎಂದರು.
ಇಪ್ತತ್ತು ವರ್ಷ ಹಳೆಯದಾದ ವೈಯಕ್ತಿಕ ವಾಹನಗಳು ಮತ್ತು ಹದಿನೈದು ವರ್ಷ ಹಳೆಯದಾದ ವಾಣಿಜ್ಯ ವಾಹನಗಳನ್ನು ಗುಜರಿಗೆ ಹಾಕಬಹುದು. ಈ ರೀತಿ ಗುಜರಿಗೆ ಹಾಕಿದವರಿಗೆ ಹೊಸ ವಾಹನ ಖರೀದಿ ವೇಳೆ ರಿಯಾಯಿತಿ ನೀಡಲಾಗುತ್ತದೆ ಎಂದ ಅವರು, ರೋಪ್‌ವೇ, ಕೇಬಲ್ ಕಾರ್ ಮತ್ತು ಫುÂನಿಕ್ಯೂಲರ್ ರೈಲ್ವೇ ಸ್ಥಾಪನೆಗಾಗಿ ನಮ್ಮ ಸಚಿವಾಲಯಕ್ಕೆ 206 ಪ್ರಸ್ತಾವಗಳು ಬಂದಿವೆ ಎಂದಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಡಾಖ್ ಉಳಿಸಲು ಸೋನಂ ವಾಂಗ್ಚುಕ್ ಉಪವಾಸ

ಮಹಾದಾಯಿ ವಿವಾದ: “ದುರ್ಯೋಧನನಂತೆ ಕರ್ನಾಟದ ಧೋರಣೆ’

ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಪಿಎಫ್ಐ ಹೇಗೆ ಪ್ಲ್ಯಾನ್ ಮಾಡಿತ್ತು?: ಎನ್ಐಎ ವರದಿಯಲ್ಲೇನಿದೆ?

ಬಿಬಿಸಿ ಡಾಕ್ಯುಮೆಂಟರಿ ಪ್ರದರ್ಶಿಸಲು ಮುಂದಾದ ಯೂನಿರ್ವಸಿಟಿಗಳ ವಿದ್ಯುತ್ ಸರಬರಾಜು ಸ್ಥಗಿತ…

ದೇಶದಲ್ಲಿ ದ್ವೇಷದ ವಾತಾವರಣ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ರಾಹುಲ್ 3,000 ಕಿ.ಮೀ. ನಡೆಯಬೇಕಾಯಿತು!
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
