ಒವೈಸಿಗೆ ಆಘಾತ : 4 ಎಐಎಂಐಎಂ ಶಾಸಕರು ಆರ್‌ಜೆಡಿ ಸೇರ್ಪಡೆ
Team Udayavani, Jun 29, 2022, 6:06 PM IST
ಪಾಟ್ನಾ : ಬಿಹಾರದಲ್ಲಿ ಅಸಾದುದ್ದೀನ್ ಓವೈಸಿಗೆ ಭಾರಿ ಆಘಾತ ಎಂಬಂತೆ ಎಐಎಂಐಎಂನ ಐವರು ಶಾಸಕರ ಪೈಕಿ ನಾಲ್ವರು ಪ್ರತಿಪಕ್ಷ ಆರ್‌ಜೆಡಿ ಸೇರ್ಪಡೆಯಾಗಿದ್ದು,ಇದರಿಂದಾಗಿ ಬಿಹಾರದಲ್ಲಿ ಏಕೈಕ ದೊಡ್ಡ ಪಕ್ಷ ಎಂಬ ಸ್ಥಾನಮಾನವನ್ನು ಆರ್‌ಜೆಡಿ ಮರಳಿ ಪಡೆದುಕೊಂಡಿದೆ.
ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಸ್ವತಃ ಕಾರು ಚಾಲನೆ ಮಾಡಿ ನಾಲ್ವರು ಶಾಸಕರನ್ನು ರಾಜ್ಯ ವಿಧಾನಸಭೆಗೆ ಕರೆತಂದರುಮತ್ತು ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರನ್ನು ಭೇಟಿ ಮಾಡಿ ಅಸಾದುದ್ದೀನ್ ಓವೈಸಿ ಅವರ ಪಕ್ಷದಿಂದ ಹೊರಬಂದು ಆರ್‌ಜೆಡಿಯೊಂದಿಗೆ ವಿಲೀನಗೊಳ್ಳುವ ಅವರ ಔಪಚಾರಿಕ ನಿರ್ಧಾರದ ಬಗ್ಗೆ ತಿಳಿಸಿದರು.
ಮೊಹಮ್ಮದ್ ಇಝಾರ್ ಅರ್ಫಿ, ಶಾನವಾಜ್ ಆಲಂ, ರುಕಾನುದ್ದೀನ್ ಅಹ್ಮದ್ ಮತ್ತು ಅಂಜಾರ್ ನಯಿಮಿ ಅವರು ಆರ್‌ಜೆಡಿಗೆ ಸೇರ್ಪಡೆಗೊಂಡ ಶಾಸಕರಾಗಿದ್ದು, 243 ಬಲದ ವಿಧಾನಸಭೆಯಲ್ಲಿ ಪಕ್ಷದ ಬಲವನ್ನು 80 ಕ್ಕೆ ಏರಿಸಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಅಧಿಕಾರ ಹಂಚಿಕೊಳ್ಳುವ ಬಿಜೆಪಿಗಿಂತ ಆರ್‌ಜೆಡಿ ಈಗ ಮೂರು ಸ್ಥಾನ ಹೆಚ್ಚು ಹೊಂದಿದಂತಾಗಿದೆ.
ಈಗ ಎಐಎಂಐಎಂನ ರಾಜ್ಯಾಧ್ಯಕ್ಷ ಅಖ್ತರುಲ್ ಇಮಾನ್ ಮಾತ್ರ ಎಐಎಂಐಎಂ ನಲ್ಲಿ ಉಳಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜು ಶ್ರೀವಾಸ್ತವ್ ಆರೋಗ್ಯ ಸ್ಥಿತಿ ಗಂಭೀರ: ಸ್ನೇಹಿತ ಹೇಳಿದ್ದೇನು?
ಅತ್ಯಾಚಾರ ವಿರೋಧಿಸಿದ ಬ್ಯಾಸ್ಕೆಟ್ಬಾಲ್ ಆಟಗಾರ್ತಿ: 25 ಅಡಿ ಎತ್ತರದಿಂದ ತಳ್ಳಿದ ದುರುಳರು
ಯಾವ ದೂರೂ ಬಂದಿಲ್ಲ: ಜಾಕ್ವೆಲಿನ್ ಪರ ವಕೀಲ
RTO ಅಧಿಕಾರಿ ಮನೆ ಮೇಲೆ ದಾಳಿ: ಆದಾಯಕ್ಕಿಂತ 650 ಪಟ್ಟು ಹೆಚ್ಚು ಮೌಲ್ಯದ ಆಸ್ತಿ ಪತ್ತೆ!
ರೇಪ್ ಕೇಸ್; ಬಿಜೆಪಿ ನಾಯಕ ಶಹನವಾಜ್ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ
MUST WATCH
ಹೊಸ ಸೇರ್ಪಡೆ
ವಿಟ್ಲ: ಮಹಿಳೆ ಮನೆಗೆ ತೆರಳುವ ರಸ್ತೆ ಅಗೆದು ಹಾಕಿ, ನಿಂದನೆ: ತಹಶೀಲ್ದಾರ್ಗೆ ದೂರು
ಸಾವರ್ಕರ್ ದೇಶಪ್ರೇಮಿ ಎಂದು ಯಾಕೆ ಕರೆಯಬೇಕು?: ಸಿದ್ದರಾಮಯ್ಯ
ಫಿಬಾ U-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ಗೆ ಸಕಲ ಸಿದ್ಧತೆ
ರಾಜು ಶ್ರೀವಾಸ್ತವ್ ಆರೋಗ್ಯ ಸ್ಥಿತಿ ಗಂಭೀರ: ಸ್ನೇಹಿತ ಹೇಳಿದ್ದೇನು?
ಅತ್ಯಾಚಾರ ವಿರೋಧಿಸಿದ ಬ್ಯಾಸ್ಕೆಟ್ಬಾಲ್ ಆಟಗಾರ್ತಿ: 25 ಅಡಿ ಎತ್ತರದಿಂದ ತಳ್ಳಿದ ದುರುಳರು