ಉಗ್ರರಾಗಿ ಬದಲಾಗಿದ್ದ ಪೊಲೀಸ್‌ ಅಧಿಕಾರಿಗಳು ಸೇರಿ ನಾಲ್ವರು ಫಿನಿಶ್‌ !

ಪಲ್ವಾಮಾದಲ್ಲಿ ಸೇನಾ ಪಡೆಗಳ ರಾತ್ರಿ ಕಾರ್ಯಾಚರಣೆ

Team Udayavani, Jun 7, 2019, 9:25 AM IST

ಶ್ರೀನಗರ: ಪುಲ್ವಾಮಾದ ಪಂಜ್ರಾನ್‌ ಲಾಸಿಪೋರಾ ಪ್ರದೇಶದಲ್ಲಿ ಸೇನಾ ಪಡೆಗಳು ಗುರುವಾರ ಸಂಜೆಯಿಂದ ಆರಂಭಿಸಿದ ಭಾರೀ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ. ಹತ್ಯೆಗೀಡಾದ ನಾಲ್ವರ ಪೈಕಿ ಇಬ್ಬರು ಉಗ್ರರಾಗಿ ಬದಲಾಗಿದ್ದ ವಿಶೇಷ ಪೊಲೀಸ್‌ ಪಡೆಯ ಅಧಿಕಾರಿಗಳು ಸೇರಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಉಗ್ರರನ್ನು ಸಂಜೆ ಸುತ್ತುವರಿದಿದ್ದ ಸೇನಾ ಪಡೆಗಳು ರಾತ್ರಿಯಿಡೀ ಗುಂಡಿನ ಚಕಮಕಿ ನಡೆಸಿದ್ದಾರೆ. ಗುಂಡಿನ ಕಾಳಗ ನಾಲ್ವರು ಉಗ್ರರ ಹತ್ಯೆಯಲ್ಲಿ ಅಂತ್ಯವಾಗಿದೆ. ಸ್ಥಳದಲ್ಲಿ ಇನ್ನೂ ಕೆಲ ಉಗ್ರರಿರುವ ಸಾಧ್ಯತೆಹಿನ್ನಲೆ ಹುಡುಕಾಟ ಮುಂದುವರಿದಿದೆ.

ಹತ ಉಗ್ರರು ಜೈಷ್‌ -ಇ -ಮೊಹಮದ್‌ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, ವಿಶೇಷ ಪೊಲೀಸ್‌ ಅಧಿಕಾರಿ ಹುದ್ದೆಯಿಂದ ಉಗ್ರರ ಕೂಟ ಸೇರಿಕೊಂಡಿದ್ದ ತುಜಾನ್‌ ಪುಲ್ವಾಮಾದ ಶಬೀರ್‌ ಅಹ್ಮದ್‌ ಮತ್ತು ಶೋಪಿಯಾನ್‌ನ ಕೀಗಮ್‌ ಪ್ರದೇಶದ ಸಲ್ಮಾನ್‌ ಖಾನ್‌ ಎನ್ನುವವರಾಗಿದ್ದಾರೆ.

ಉಗ್ರರ ಬಳಿಯಿದ್ದ 3 ಎಕೆ ಸರಣಿಯ ಗನ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನುವಶಕ್ಕೆ ಪಡೆದಿದ್ದಾರೆ.

ಅನಂತ್‌ನಾಗ್‌ನಲ್ಲಿ ಸೈನಿಕರೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈ ದ ಬಳಿ ಕಈ ಕಾರ್ಯಾಚರಣೆ ನಡೆದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ