ಎಲ್ಲಿದೆ ಭದ್ರತೆ? ಮಾನೇಸರ್‌ನ NSG ಕ್ಯಾಂಪ್‌ನಲ್ಲೇ 4 ರ ಬಾಲಕಿಯ Rape!
Team Udayavani, Jan 17, 2017, 10:58 AM IST
ಗುರುಗ್ರಾಮ್ : ಅಂತ್ಯಂತ ಕಳವಳಕಾರಿ ಮತ್ತು ಹೇಯ ಘಟನೆಯೊಂದರಲ್ಲಿ ಮಾನೇಸರ್‌ನ ರಾಷ್ಟ್ರೀಯ ಭದ್ರತಾ ದಳದ ಕ್ಯಾಂಪಸ್ ನೊಳಗೆ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ.
ಭಾನುವಾರ ಸಂಜೆ ಘಟನೆ ನಡೆದಿದ್ದು 2 ದಿನದ ಬಳಿಕ ಬೆಳಕಿಗೆ ಬಂದಿದ್ದು, ಕ್ಯಾಂಪ್‌ನ ಅಡುಗೆ ಸಿಬಂದಿಯ ಪುತ್ರಿ ಅತ್ಯಾಚಾರಕ್ಕೀಡಾದ ಬಾಲಕಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೋಷಕರು ಮಾನೇಸರ್‌ನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಟವಾಡಲು ತೆರಳಿದ್ದ ಬಾಲಕಿ ತೀವ್ರ ರಕ್ತಸ್ರಾವಕ್ಕೊಳಗಾಗಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಮನೆಗೆ ಮರಳಿದ್ದು ಕಂಗಾಲಾದ ಪೋಷಕರು ಕೂಡಲೇ ಎನ್‌ಎಸ್‌ಜಿ ಅಧಿಕಾರಿಗಳಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಅಶೋಕ್ ಬಕ್ಷಿ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ, ವರದಿ ಬರುವವ ವರೆಗೆ ಹೆಚ್ಚಿನ ವಿವರ ನೀಡುವುದು ತಪ್ಪಾಗುತ್ತದೆ ಎಂದಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ಮುಡಿಪಾಗಿರುವ ಎನ್‌ಎಸ್‌ಜಿ ಸಿಬಂದಿಗಳ ಕ್ಯಾಂಪಸ್‌ನೊಳಗೆ ಘಟನೆ ನಡೆದಿರುವುದು ದೊಡ್ಡ ಕಳಂಕ ತಂದಿಟ್ಟಿದೆ. ಪೊಲೀಸರು,ಎನ್‌ಎಸ್‌ಜಿ ಅಧಿಕಾರಿಗಳು ಕ್ಯಾಂಪಸ್‌ನೊಳಗಿರುವವರನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಮುನೋತ್ರಿ ಹೆದ್ದಾರಿಯ ಸುರಕ್ಷಾ ಗೋಡೆ ಕುಸಿತ: 10 ಸಾವಿರ ಪ್ರವಾಸಿಗರ ಪರದಾಟ
ಭಾರತದಲ್ಲಿ 24ಗಂಟೆಯಲ್ಲಿ 2,323 ಕೋವಿಡ್ 19 ಸೋಂಕು ಪ್ರಕರಣ ದೃಢ, 25 ಮಂದಿ ಸಾವು
ಜ್ಞಾನವಾಪಿ ಶಿವಲಿಂಗದ ಕುರಿತು ಫೇಸ್ಬುಕ್ ಪೋಸ್ಟ್ ಮಾಡಿದ ದೆಹಲಿ ಪ್ರಾಧ್ಯಾಪಕರ ಬಂಧನ
ಭಾರತದಲ್ಲಿದ್ದುಕೊಂಡು ತಿಂಗಳಿಗೆ 25 ಸಾವಿರ ರೂ. ಆದಾಯವಿದ್ದರೆ ಅಗ್ರರು!
ಎಲ್ಲ ಪ್ರಾದೇಶಿಕ ಭಾಷೆಗಳೂ ಪೂಜನೀಯ: ಪ್ರಧಾನಿ ಮೋದಿ