4 ವರ್ಷದ ನಂತರ ಬಂತು ಬೋಗಿ!
Team Udayavani, Jul 29, 2018, 6:00 AM IST
ಗೋರಖ್ಪುರ: ರಸಗೊಬ್ಬರ ಹೊತ್ತ ಒಂದು ಬೋಗಿ 1326 ಕಿ.ಮೀ ಪ್ರಯಾಣಿಸಿ ತನ್ನ ಕೊನೆಯ ನಿಲ್ದಾಣವನ್ನು ತಲುಪಲು ತೆಗೆದುಕೊಂಡಿದ್ದು ಬರೋಬ್ಬರಿ ನಾಲ್ಕು ವರ್ಷ! ಇದು ಭಾರತೀಯ ರೈಲ್ವೆಯ ಅವ್ಯವಸ್ಥೆಗೆ ಸ್ಪಷ್ಟ ಉದಾಹರಣೆಯಾದೀತು.
2014 ನವೆಂಬರ್ 10ರಂದು ಡಿ ಅ ಮೋನಿಯಂ ಪಾಸ್ಪೆಟ್ (ಡಿಎಪಿ) ಇರುವ 1316 ಬ್ಯಾಗ್ಗಳನ್ನು ಬೋಗಿಗೆ ತುಂಬಲಾಗಿತ್ತು. ವಿಶಾಖಪಟ್ಟಣದಿಂದ ಈ ಬೋಗಿ ಉತ್ತರ ಪ್ರದೇಶದ ಬಸ್ತಿಗೆ ಬರಬೇಕಿತ್ತು. ಸಾಮಾನ್ಯವಾಗಿ ಈ ದೂರವನ್ನು ಒಂದು ರೈಲು 42 ಗಂಟೆ 13 ನಿಮಿಷಗಳಲ್ಲಿ ತಲುಪುತ್ತದೆ. ಆದರೆ ಕಳೆದ ಬುಧವಾರ ಮಧ್ಯಾಹ್ನ 3.30ಕ್ಕೆ ಇದು ವಿಶಾಖಪಟ್ಟಣದ ಬಸ್ತಿ ರೈಲ್ವೆ ನಿಲ್ದಾಣಕ್ಕೆ ಬಂದಾಗ ರೈಲು ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು. ಇಂಡಿಯನ್ ಪೊಟ್ಯಾಶ್ ಲಿ. ಕಂಪನಿಗಾಗಿ ಅದರ ಉದ್ಯೋಗಿ ರಾಮಚಂದ್ರಾ ಗುಪ್ತಾ ಇದನ್ನು ಬುಕ್ ಮಾಡಿದ್ದರು. ರೈಲ್ವೆ ವಿರುದ್ಧ ಕಂಪನಿ ದೂರು ದಾಖಲಿಸಿದೆ. ಸಾಮಗ್ರಿಗಳ ಮೌಲ್ಯ 14 ಲಕ್ಷ ರೂ. ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ