ಮಹಿಳೆಯರ ಸುರಕ್ಷೆ, ಭದ್ರತೆ: ದಿಲ್ಲಿಯಲ್ಲಿ 4,388 ಸಿಸಿಟಿವಿ ಅಳವಡಿಕೆ
Team Udayavani, Sep 15, 2018, 4:35 PM IST
ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷೆ ಮತ್ತು ಭದ್ರತೆಗಾಗಿ ವಿವಿಧ ಸೂಕ್ಷ್ಮ ಮತ್ತು ಮಹತ್ವದ ತಾಣಗಳಲ್ಲಿ ಒಟ್ಟು 4,388 ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ದಳ ಹೈಕೋರ್ಟಿಗೆ ತಿಳಿಸಿದೆ.
ದಿಲ್ಲಿಯ ಕೆಲವು ವಕೀಲರು ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷೆ ಮತ್ತು ಧ್ರತೆಗೆ ಸಂಬಂಧಿಸಿ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಶ್ನಿಸಿ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಉತ್ತರವಾಗಿ ದಿಲ್ಲಿ ಪೊಲೀಸರು ಅಫಿದಾವಿತ್ ಮೂಲಕ ಈ ಉತ್ತರ ನೀಡಿದ್ದಾರೆ.
ಈ ವರ್ಷ ಮಾರ್ಚ್ನಲ್ಲಿ ದಿಲ್ಲಿ ವಿವಿಯ ಉತ್ತರ ಕ್ಯಾಂಪಸ್ ಸುತ್ತ ಮುತ್ತಲ ಪ್ರದೇಶದಲ್ಲಿ ತಮ್ಮ ಮೇಲೆ ಮೂತ್ರ ಮತ್ತು ವೀರ್ಯ ತುಂಬಿದ ಬಲೂನ್ಗಳನ್ನು ಎಸೆಯಲಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿ ವಕೀಲರು ದಿಲ್ಲಿ ಹೈಕೋರ್ಟಿಗೆ ಪಿಐಎಲ್ ದಾಖಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್