ಬರೋಬ್ಬರಿ 47 ಸಾವಿರ ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆ
Team Udayavani, Mar 30, 2022, 9:30 PM IST
ನವದೆಹಲಿ: ಆ್ಯಕ್ಸಿ ಇನ್ಫಿನಿಟಿ ಹೆಸರಿನ ಎನ್ಎಫ್ ಟಿ ಗೇಮಿಂಗ್ ಸಾಫ್ಟ್ ವೇರ್ನಲ್ಲಿ ಹ್ಯಾಕರ್ಗಳು ರೋನಿನ್ ಹೆಸರಿನ ಬ್ಲಾಕ್ಚೈನ್ ಬಳಸಿ ಬರೋಬ್ಬರಿ 47 ಸಾವಿರ ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿಯನ್ನು ವಂಚಿಸಿದ್ದಾರೆ.
ಆ್ಯಕ್ಸಿ ಇನ್ಫಿನಿಟಿ ಎನ್ನುವುದು ಆಟವಾಡಿ ಹಣ ಗೆಲ್ಲುವ ಆಟವಾಗಿದೆ. ಅದರಲ್ಲಿ ಜನರು ಮೊದಲೇ ಹಣ ಹಾಕಿ ಆಡಬೇಕು. ಗೆದ್ದ ಹಣವನ್ನು ಕ್ರಿಪ್ಟೋ ರೂಪದಲ್ಲಿ ನೀಡಲಾಗುತ್ತದೆ. ಅದರಲ್ಲಿ ರೋನಿನ್ನಿಂದ ಹಣ ವರ್ಗಾವಣೆ ಮತ್ತು ರೋನಿನ್ಗೆ ಹಣ ವರ್ಗಾವಣೆ ಮಾಡುವ ಕೋಡಿಂಗ್ನ್ನು ಹ್ಯಾಕರ್ಗಳು ಹ್ಯಾಕ್ ಮಾಡಿದ್ದಾರೆ. 1,73,600 ಎಥೆರಂ ಅನ್ನು ಹ್ಯಾಕ್ ಮಾಡಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ಅಪ್ಪಾಜಿ ಅಪ್ಪಾಜಿ ಅಂದ್ಕೋತಾ ಅಡ್ಡಾಡಬೇಕು: ಯತ್ನಾಳ್ ಟೀಕಾಸ್ತ್ರಕ್ಕೆ ಯಾರು ಗುರಿ?
ಆ್ಯಕ್ಸಿ ಇನ್ಫಿನಿಟಿಯ ಮಾಲೀಕತ್ವವನ್ನು ವಿಯೆಟ್ನಾಂ ಮೂಲದ ಸ್ಕೈಮಾವಿಸ್ ಸಂಸ್ಥೆ ಹೊಂದಿದ್ದು, ಅದು ಈಗ ರೋನಿನ್ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ