Udayavni Special

ಆತ್ಯಹತ್ಯೆ ಸಾಧ್ಯತೆ: ನಿರ್ಭಯಾ ಅತ್ಯಾಚಾರಿಗಳ ಮೇಲೆ ಹದ್ದಿನ ಕಣ್ಣು

Team Udayavani, Jan 26, 2020, 6:30 AM IST

nirbhaya

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರಿಗಳನ್ನು ನೇಣುಗಂಬಕ್ಕೇರಿಸಲು ಇನ್ನು ಆರೇ ದಿನಗಳು ಬಾಕಿ ಉಳಿದಿದ್ದು, ಎಲ್ಲ ನಾಲ್ವರು ಅಪರಾಧಿಗಳ ಮೇಲೆಯೂ ತಿಹಾರ್‌ ಜೈಲಿನ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಗಲ್ಲುಶಿಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅತ್ಯಾಚಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯಿರುವ ಕಾರಣ ದಿನದ 24 ಗಂಟೆಯೂ ಅವರ ಮೇಲೆ ಕಣ್ಣಿಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು “ಸೂಸೈಡ್‌ ವಾಚ್‌’ ಎಂದು ಕರೆಯಲಾಗುತ್ತದೆ.

ಜ.16ರಂದೇ ಅಪರಾಧಿಗಳಾದ ಮುಕೇಶ್‌ ಸಿಂಗ್‌, ಪವನ್‌ ಕುಮಾರ್‌ ಗುಪ್ತಾ, ವಿನಯ್‌ ಶರ್ಮಾ ಮತ್ತು ಅಕ್ಷಯ್‌ನನ್ನು ಜೈಲು ಸಂಖ್ಯೆ 3ಕ್ಕೆ ವರ್ಗಾಯಿಸಲಾಗಿದೆ. ಹೈರಿಸ್ಕ್ ವಾರ್ಡ್‌ನ ಪ್ರತ್ಯೇಕ ಕೊಠಡಿಗಳಲ್ಲಿ ಇವರನ್ನು ಇಡಲಾಗಿದೆ.

ಗೋಡೆಗೆ ತಲೆ ಜಜ್ಜಿಕೊಳ್ಳುವ ಸಾಧ್ಯತೆ: ಈ ಕೊಠಡಿಗಳು 6×8 ಅಳತೆ ಹೊಂದಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಸದಾಕಾಲ ಕಾಯುತ್ತಿದ್ದಾರೆ. ಇಲ್ಲಿಗೆ ಅಪರಾಧಿಗಳನ್ನು ಶಿಫ್ಟ್ ಮಾಡುವ ಮೊದಲೇ, ಒಳಗೆ ಲೋಹದ ಚೂರು, ಮೊಳೆ ಇದೆಯೇ ಎಂಬುದನ್ನು ಪರಿಶೀಲಿಸಲಾಗಿದೆ. ಅಪರಾಧಿಗಳು ಸ್ವತಃ ನೋವು ಮಾಡಿಕೊಳ್ಳಲು ಇರುವ ಏಕೈಕ ಮಾರ್ಗ, ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುವುದು. ಹಿಂದೆ ಅನೇಕ ಅಪರಾಧಿಗಳು ಗಲ್ಲುಶಿಕ್ಷೆ ಮುಂದೂಡಲು ಇಂಥ ಕೃತ್ಯ ಎಸಗಿದ್ದೂ ಇದೆ ಎನ್ನುತ್ತಾರೆ ಜೈಲಧಿಕಾರಿಗಳು. ಹೀಗಾಗಿ, ತೀವ್ರ ನಿಗಾ ವಹಿಸಲಾಗುತ್ತಿದೆ.

ಮತ್ತೆ ಮೇಲ್ಮನವಿ: ಪದೇ ಪದೆ ಅರ್ಜಿ ಸಲ್ಲಿಸಿ ಗಲ್ಲುಶಿಕ್ಷೆ ವಿಳಂಬವಾಗಿಸುವ ಪ್ರಯತ್ನವನ್ನು ಅತ್ಯಾಚಾರಿಗಳು ಮುಂದುವರಿಸಿದ್ದಾರೆ. ಅಪರಾಧಿ ಮುಕೇಶ್‌ ಸಿಂಗ್‌ ಶನಿವಾರ ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ತಮ್ಮ ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾನೆ. ಜ.17ರಂದೇ ಈತನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಪಾಯ ಕೇಂದ್ರಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ

ಅಪಾಯ ಕೇಂದ್ರಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್ ಸುಳಿವು ಪತ್ತೆ

ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್ ಸುಳಿವು ಪತ್ತೆ

ಕೋವಿಡ್ ಸೋಂಕಿತ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್ ಆರೋಗ್ಯ ಸ್ಥಿರ

ಕೋವಿಡ್ ಸೋಂಕಿತ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್ ಆರೋಗ್ಯ ಸ್ಥಿರ

ಸರಕು ಸಾಗಾಣೆ ಗುರಿ ತಲುಪುವಲ್ಲಿ ರೈಲ್ವೇಗೆ 2,129 ಕೋಟಿ ರೂ. ನಷ್ಟ

ಸರಕು ಸಾಗಾಣೆ ಗುರಿ ತಲುಪುವಲ್ಲಿ ರೈಲ್ವೇಗೆ 2,129 ಕೋಟಿ ರೂ. ನಷ್ಟ

ಕೋವಿಡ್ ಅಟ್ಟಹಾಸ ನಿಯಂತ್ರಣಕ್ಕೆ  ರಾಜಸ್ಥಾನದ ಭಿಲ್ವಾರ ದೇಶಕ್ಕೇ ಮಾದರಿ

ಕೋವಿಡ್ ಅಟ್ಟಹಾಸ ನಿಯಂತ್ರಣಕ್ಕೆ ರಾಜಸ್ಥಾನದ ಭಿಲ್ವಾರ ದೇಶಕ್ಕೇ ಮಾದರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್ ಸುಳಿವು ಪತ್ತೆ

ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್ ಸುಳಿವು ಪತ್ತೆ

ಕೋವಿಡ್ ಸುಳ್ಳು ಸುದ್ದಿಗಳು: ಹೊಸ ಸಂವಹನ ನಿಯಮ ಜಾರಿಯಾಗಿಲ್ಲ

ಕೋವಿಡ್ ಸುಳ್ಳು ಸುದ್ದಿಗಳು: ಹೊಸ ಸಂವಹನ ನಿಯಮ ಜಾರಿಯಾಗಿಲ್ಲ

ಕೋವಿಡ್ ಅಟ್ಟಹಾಸ ನಿಯಂತ್ರಣಕ್ಕೆ  ರಾಜಸ್ಥಾನದ ಭಿಲ್ವಾರ ದೇಶಕ್ಕೇ ಮಾದರಿ

ಕೋವಿಡ್ ಅಟ್ಟಹಾಸ ನಿಯಂತ್ರಣಕ್ಕೆ ರಾಜಸ್ಥಾನದ ಭಿಲ್ವಾರ ದೇಶಕ್ಕೇ ಮಾದರಿ

ಜಮ್ಮು-ಕಾಶ್ಮೀರ: ಜೈಶ್ ಎ ಮೊಹಮ್ಮದ್ ಉಗ್ರ, ಕಮಾಂಡರ್ ಎನ್ ಕೌಂಟರ್ ಗೆ ಬಲಿ

ಜಮ್ಮು-ಕಾಶ್ಮೀರ: ಜೈಶ್ ಎ ಮೊಹಮ್ಮದ್ ಉಗ್ರ, ಕಮಾಂಡರ್ ಎನ್ ಕೌಂಟರ್ ಗೆ ಬಲಿ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಹಾಲಿ ಭಾರತ ಕ್ರಿಕೆಟಿಗರಲ್ಲಿ ಶಿಸ್ತೇ ಇಲ್ಲ: ಯುವರಾಜ್‌ ಬೇಸರ

ಹಾಲಿ ಭಾರತ ಕ್ರಿಕೆಟಿಗರಲ್ಲಿ ಶಿಸ್ತೇ ಇಲ್ಲ: ಯುವರಾಜ್‌ ಬೇಸರ

ದೇವೇಗೌಡರ ಮನವಿಗೆ ಯಡಿಯೂರಪ್ಪ ಸ್ಪಂದನೆ

ದೇವೇಗೌಡರ ಮನವಿಗೆ ಯಡಿಯೂರಪ್ಪ ಸ್ಪಂದನೆ

ಅಪಾಯ ಕೇಂದ್ರಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ

ಅಪಾಯ ಕೇಂದ್ರಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ

ಸಚಿವ, ಶಾಸಕರ ವೇತನಕ್ಕೆ ಕತ್ತರಿ?

ಸಚಿವ, ಶಾಸಕರ ವೇತನಕ್ಕೆ ಕತ್ತರಿ?

ಸರಕಾರಿ ನೌಕರರಿಗೆ ಮುಖ್ಯಮಂತ್ರಿ ಅಭಿನಂದನೆ

ಸರಕಾರಿ ನೌಕರರಿಗೆ ಮುಖ್ಯಮಂತ್ರಿ ಅಭಿನಂದನೆ