ಬಿಕಾನೇರ್‌ ಗಡಿಯಲ್ಲಿ ಐವರು ಶಂಕಿತರ ಬಂಧನ, 9.88 ಲಕ್ಷ ರೂ. ನಗದು ವಶ

Team Udayavani, May 20, 2019, 3:22 PM IST

ಬಿಕಾನೇರ್‌, ರಾಜಸ್ಥಾನ : ರಾಜಸ್ಥಾನದ ಬಿಕಾನೇರ್‌ ಜಿಲ್ಲೆಯಲ್ಲಿ ಭಾರತ-ಪಾಕ್‌ ಗಡಿ ಸಮೀಪ, ಗಡಿ ಭದ್ರತಾ ಪಡೆಯವರು ಶಂಕಾಸ್ಪದ ಸನ್ನಿವೇಶದಲ್ಲಿ ಐವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಇಂದು ಸೋಮವಾರ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಐವರು ಎಸ್‌ಯುವಿ ವಾಹನದಲ್ಲಿ ಭಾರತ-ಪಾಕ್‌ ಗಡಿ ಪ್ರದೇಶದಲ್ಲಿ ಶಂಕಾಸ್ಪದವಾಗಿ ಸಂಚರಿಸುತ್ತಿರುವುದು ಕಂಡು ಬಂತು.

ಆಗ ಬಿಎಸ್‌ಎಫ್ ಪಡೆಯುವರು ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ಗೈದಾಗ 9.88 ಲಕ್ಷ ರೂ. ನಗದು ಪತ್ತೆಯಾಯಿತು. ಅಂತೆಯೇ ಶಂಕಿತ ಐವರನ್ನು ಬಂಧಿಸಿದರು ಎಂದು ಖಜುವಾಲಾ ಪೊಲೀಸ್‌ ಠಾಣೆ ಪ್ರಭಾರಾಧಿಕಾರಿ ವಿಕ್ರಂ ಸಿಂಗ್‌ ತಿಳಿಸಿದರು.

ಬಂಧಿತ ಸ್ಥಳೀಯರು ಸ್ಥಳೀಯ ನಿವಾಸಿಗಳೆಂದೂ ಅವರಲ್ಲಿ ಒಬ್ಟಾತ ಗುಜರಾತ್‌ ನಲ್ಲಿ ಕೆಲಸ ಮಾಡುತ್ತಿರುವವನೆಂದೂ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಯಿತು. ಬಂಧಿತರನ್ನು ಬಿಎಸ್‌ಎಫ್ ತನಿಖಾಧಿಕಾರಿಗಳೀಗ ಪ್ರಶ್ನಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ