1.5 ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳನ್ನು ಕದ್ದ 5 ಚೋರರ ಬಂಧನ;1589 ಮೊಬೈಲ್ ಗಳು ವಶಕ್ಕೆ
Team Udayavani, Nov 5, 2021, 9:59 AM IST
ಮಥುರಾ: ಸುಮಾರು 1.5 ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳನ್ನು ಕದ್ದ ಐವರು ಖತರ್ನಾಕ್ ಕಳ್ಳರನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇವರಿಂದ ಸುಮಾರು 1589 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ಮಥುರಾದ ರಾಹುಲ್ ಅಲಿಯಾಸ್ ಅಮೀರ್ ಖಾನ್ ಮತ್ತು ಹರಿಯಾಣದ ನುಹ್ ಜಿಲ್ಲೆಯ ಶಾಹಿದ್, ಅಜರುದ್ದೀನ್, ಸಮೀರ್ ಮತ್ತು ಅಜ್ಮಲ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ ಆರಂಭದಲ್ಲಿ ನೋಯ್ಡಾದ ಕಾರ್ಖಾನೆಯಿಂದ ಬೆಂಗಳೂರಿಗೆ ಮೊಬೈಲ್ ಸಾಗಿಸುವಾಗ ಉತ್ತರ ಪ್ರದೇಶ-ಮಧ್ಯಪ್ರದೇಶ ಗಡಿಯಲ್ಲಿ ಟ್ರಕ್‌ನಿಂದ 8,990 ಫೋನ್‌ಗಳನ್ನು ಲೂಟಿ ಮಾಡಲಾಗಿತ್ತು. ಆರೋಪಿಗಳಿಂದ ವಶಪಡಿಸಿಕೊಂಡ ಫೋನ್ ಗಳಲ್ಲಿ ಆ ಫೋನ್ ಗಳೂ ಸೇರಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳು ಫರಾಹ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ್‌ಪುರ ಜಾಟ್ ಅಂಡರ್‌ಪಾಸ್ ಬಳಿ ಲೂಟಿ ಮಾಡಿದ ಮೊಬೈಲ್ ಫೋನ್‌ಗಳನ್ನು ವಿಲೇವಾರಿ ಮಾಡಲು ಆಗ್ರಾ ಕಡೆಗೆ ಹೋಗುತ್ತಿದ್ದಾಗ ಪೊಲೀಸರು ಅಡ್ಡಗಟ್ಟಿದ್ದಾರೆ.
ಇದನ್ನೂ ಓದಿ:ಸಿಜೆಐಗೆ ಪತ್ರ ಬರೆದ ಬಳಿಕ ಬಸ್ ಬಂತು!
ಖಚಿತ ಸುಳಿವು ಆಧರಿಸಿ, ಫರಾಹ್ ಪೊಲೀಸ್ ಠಾಣೆ, ಕಣ್ಗಾವಲು, ವಿಶೇಷ ಕಾರ್ಯಾಚರಣೆ ಗುಂಪು ಮತ್ತು ವಿಶೇಷ ಕಾರ್ಯಪಡೆಯ ತಂಡಗಳು ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸಿವೆ.
ಕದ್ದ 1,589 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಮಾರ್ತಾಂಡ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ. ವಶಪಡಿಸಿಕೊಂಡ ಫೋನ್‌ಗಳ ಮೌಲ್ಯ 1,58,90,000 ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಎಂಟು ಆರೋಪಿಗಳಿಂದ 11,30,000 ರೂ ಮೌಲ್ಯದ 113 ಕದ್ದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ
ಭಾರತದಲ್ಲಿ ತಯಾರಾಗುವ ವಿದೇಶಿ ಚಿತ್ರಗಳಿಗೆ ಪ್ರೋತ್ಸಾಹ
ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಬಂದ ರತನ್ ಟಾಟಾ
ರಾಜೀವ್ಗಾಂಧಿ ಹಂತಕ ಪೆರಾರಿವೇಲನ್ ಬಿಡುಗಡೆ : ಕಾಂಗ್ರೆಸ್ ತೀವ್ರ ಆಕ್ಷೇಪ