ಸೇನಾ ಪಡೆಗಳ ತಡರಾತ್ರಿ ಕಾರ್ಯಾಚರಣೆ:ಐವರು ಉಗ್ರರು ಫಿನಿಶ್‌!

Team Udayavani, Sep 15, 2018, 8:47 AM IST

ಶ್ರೀನಗರ : ಕುಲ್‌ಗಾಮ್‌ನ ಖಾಜಿಗುಂದ್‌ನ ಚೌಗಾಮ್‌ ಎಂಬಲ್ಲಿ ಶುಕ್ರವಾರ ತಡರಾತ್ರಿ ಸೇನಾ ಪಡೆಗಳು ಆರಂಭಿಸಿದ ಭಾರೀ ಕಾರ್ಯಾಚರಣೆಗೆ ಭರ್ಜರಿ ಯಶಸ್ಸು ದೊರಕಿದ್ದು, ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ. 

ಮನೆಯೊಂದರಲ್ಲಿ ಉಗ್ರರ ಇರುವಿಕೆಯ ಖಚಿತ ಮಾಹಿತಿಯ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ದಾಳಿ ನಡೆಸಿದ ಸೇನಾ ಪಡೆಗಳು ಐವರನ್ನು ಹತ್ಯೆಗೈದಿದ್ದು, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ.ಸ್ಥಳದಲ್ಲಿ ಇನ್ನೂ ಕೆಲ ಉಗ್ರರು ಇರುವ ಹಿನ್ನಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ. 

ಬಾರಾಮುಲ್ಲಾ -ಖಾಜಿಗುಂದ್‌ ಪ್ರದೇಶದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪ್ರದೇಶದಲ್ಲಿ ಇಂಟರ್‌ನೆಟ್‌ ಸೇವೆಯೂ ಸ್ಥಗಿತಗೊಳಿಸಲಾಗಿದೆ. 

ಹತ್ಯೆಗೀಡಾದ ಉಗ್ರರು ಲಷ್ಕರ್‌ ಇ ತೋಯ್ಬಾ ಮತ್ತು ಹಿಜ್ಬುಲ್‌  ಮುಜಾಹಿದ್ದೀನ್‌ ಸಂಘಟನೆಗಳಿಗೆ ಸೇರಿದವರು ಎಂದು ತಿಳಿದು ಬಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ